Thursday, August 3, 2023

ನಿವೃತ್ತ ಶಿಕ್ಷಕಿ ಜಾನಕಮ್ಮ ನಿಧನ

ಆರ್. ಅರುಣ್‌
    ಭದ್ರಾವತಿ, ಆ. ೩ : ಕಾಗದನಗರ ಎಸ್‌ಬಿಐ ಬ್ಯಾಂಕ್‌ ರಸ್ತೆ ನಿವಾಸಿ, ನಿವೃತ್ತ ಶಿಕ್ಷಕಿ ಜಾನಕಮ್ಮ(೭೫)
ನಿಧನ ಹೊಂದಿದರು.
    ಪುತ್ರ ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಅರುಣ್‌ ಇದ್ದರು. ಜಾನಕಮ್ಮ ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.  ಇವರ ಅಂತ್ಯಕ್ರಿಯೆ ಗುರುವಾರ ತಿಮ್ಲಾಪುರ ಬಾಳೆಮಾರನಹಳ್ಳಿ ರಸ್ತೆಯಲ್ಲಿರುವ ಶ್ರೀ ಸತ್ಯಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ  ನಗರಸಭೆ ಮಾಜಿ ಅಧ್ಯಕ್ಷ  ಬಿ.ಕೆ ಮೋಹನ್‌, ಮುಖಂಡರಾದ ಬಾಲಕೃಷ್ಣ, ಮಹೇಶ್‌(ಜೆಪಿಎಸ್‌), ಜಯರಾಜ್‌, ಬದರಿನಾರಾಯಣ, ಛಲವಾದಿ ಸಮಾಜದ ಪ್ರಮುಖರು, ನಗರಸಭಾ ಸದಸ್ಯರು, ಕಾಂಗ್ರೆಸ್‌ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

No comments:

Post a Comment