ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್ ಚರ್ಚ್ ಧರ್ಮಗುರು ಫಾದರ್ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಭದ್ರಾವತಿ, ಆ. 7 : ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಆವರಣದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಸೋಮವಾರ ಮೇರಿ ಇಮ್ಯಾಕ್ಯುಲೇಟ್ ಚರ್ಚ್ ಧರ್ಮಗುರು ಫಾದರ್ ಲ್ಯಾನ್ಸಿ ಡಿಸೋಜಾ ದಿವ್ಯ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ದೇವಾಲಯದಲ್ಲಿ ಕೊಳವೆ ಬಾವಿ ಅಗತ್ಯವಿದ್ದು, ಮಂಜೂರಾತಿ ಮಾಡಿಸಿಕೊಡುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ನಗರಸಭೆ ವತಿಯಿಂದ ಕೊಳವೆ ಬಾವಿ ಮಂಜೂರಾತಿ ಮಾಡಿಸಿ ಕೊಟ್ಟಿದ್ದು, ಕಾಮಗಾರಿಗೆ ಚಾಲನೆ ನೀಡಲಾಯಿತು.
ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋನಿ ವಿಲ್ಸನ್ ಕೊಳವೆ ಬಾವಿ ಮಂಜೂರಾತಿಗೆ ಕಾರಣಕರ್ತರಾದ ಶಾಸಕ ಬಿ. ಕೆ. ಸಂಗಮೇಶ್ವರ, ನಗರಸಭಾ ಸದಸ್ಯರಾದ ಬಿ. ಕೆ. ಮೋಹನ್ ಹಾಗೂ ಜಾರ್ಜ್ ರವರಿಗೆ ಧರ್ಮಕೇಂದ್ರದ ಗುರುಗಳ ಹಾಗೂ ಸಮಸ್ತ ಭಕ್ತಾದಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ನಗರಸಭೆ ಅಧ್ಯಕ್ಷೆ ಶೃತಿ ವಸಂತ್ ಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಲತಾ ಚಂದ್ರಶೇಖರ್, ಆರ್. ಮೋಹನ್ ಕುಮಾರ್, ಸೇಂಟ್ ಚಾರ್ಲ್ಸ್ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜೆಸಿಂತಾ, ಸಿಸ್ಟರ್ ಆಡ್ಲಿನ್, ಆರ್ಥಿಕ ಸಮಿತಿ ಕಾರ್ಯದರ್ಶಿ ಪಾಟ್ರಿಕ್, ವೀನ್ಸoಟ್ ದೆ ಪಾಲ್ ಅಧ್ಯಕ್ಷ ಅಲ್ವಿನ್, ಪೀಟರ್, ಡೇವಿಡ್, ಸೆಲಿನ್ ಮತ್ತು ಮೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment