ಭದ್ರಾವತಿ: ಚಿರತೆ ದಾಳಿಗೆ ಬಿಕ್ಕೋನಹಳ್ಳಿಯಲ್ಲಿ ರೈತ ಮಹಿಳೆ ಯಶೋಧಮ್ಮ (43) ಬಲಿಯಾಗಿದ್ದಾರೆ.
ಕಾಡಂಚಿನ ಹೊಲದಲ್ಲಿ ಕಳೆ ತೆಗೆಯುವ ವೇಳೆ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ಮೃತ ದೇಹವನ್ನು ಎಳೆದುಕೊಂಡು ಹೋಗಿ ಅರ್ಧಂಬರ್ಧ ತಿಂದಿ ಬಿಟ್ಟು ಹೋಗಿದೆ. ಗ್ರಾಮದ ಸುತ್ತಮುತ್ತ ಚಿರತೆಗಳ ಉಪಟಳ ಹೆಚ್ಚಾಗಲು ಅರಣ್ಯ ಇಲಾಖೆಯವರೇ ಕಾರಣ. ಬೇರೆಡೆ ಹಿಡಿದ ಚಿರತೆಗಳನ್ನು ಸಿದ್ದರಮಟ್ಟಿ ಭಾಗದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಸೊಮ್ಮಿನಕೊಪ್ಪ ಸುತ್ತಮುತ್ತ ಚಿರತೆಗಳು ಆಶ್ರಯಪಡೆದಿವೆ.
ಚಿರತೆ ದಾಳಿಯಿಂದ ಕುತ್ತಿಗೆ ಬೆನ್ನಿನ ಭಾಗ ಕಿತ್ತುಹೋಗಿದೆ. ಈ ದಾಳಿ ಬಿಕ್ಕೋನಹಳ್ಳಿ ಸುತ್ತಮುತ್ತ ಗ್ರಾಮಸ್ಥರನ್ನು ಗಾಬರಿಗೊಳಿಸಿದೆ. ಈ ಭಾಗದಲ್ಲಿ ಚಿರತೆ ಹೆಚ್ಚಿದ್ದರು ಅರಣ್ಯ ಇಲಾಖೆಯವರ ನಿರ್ಲಕ್ಷ ಹೆಚ್ಚಿದೆ. ಯಾವ ಕ್ರಮವೂ ಜರುಗಿಸಿಲ್ಲ. ಬೋನ್ ಇಟ್ಟು ಹೋಗುತ್ತಾರೆ ಆದರೆ ಚಿರತೆ ಬೋನಿಗೆ ಬೀಳುವ ವರೆಗೂ ಯಾವ ಕ್ರಮವೂ ಜರುಗಿಸಿಲ್ಲ ಎಂದು ಗ್ರಾಮಸ್ಥರು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
No comments:
Post a Comment