ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತಿ : ಸಿಹಿ ಹಂಚಿ ಸಂಭ್ರಮ
೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದು, ಹಳೇಯ ಪ್ರತಿಮೆ ಸ್ಥಳದಲ್ಲಿಯೇ ಪ್ರತಿಷ್ಠಾಪನೆಗೊಳ್ಳುತ್ತಿದೆ.
ಭದ್ರಾವತಿ : ೧೨ ಅಡಿ ಎತ್ತರದ ನೂತನ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆ ಬುಧವಾರ ನಗರಕ್ಕೆ ಆಗಮಿಸಿದ್ದು, ದಲಿತ ಸಂಘಟನೆಗಳ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.
ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಹಳೇಯ ಪ್ರತಿಮೆ ಸ್ಥಳದಲ್ಲಿಯೇ ನೂತನ ಪ್ರತಿಮೆ ಅನಾವರಣಗೊಳ್ಳುತ್ತಿದ್ದು, ಮಧ್ಯಾಹ್ನ ೩ ಗಂಟೆ ಸಮಯಕ್ಕೆ ಪ್ರತಿಷ್ಠಾಪನಾ ಸ್ಥಳಕ್ಕೆ ಆಗಮಿಸಿದ ಪ್ರತಿಮೆಯನ್ನು ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಚನ್ನಪ್ಪ, ಬಸವರಾಜ ಬಿ. ಆನೇಕೊಪ್ಪ, ದಲಿತ ಮುಖಂಡರಾದ ಸತ್ಯ ಭದ್ರಾವತಿ, ಶಿವಬಸಪ್ಪ, ಚಿನ್ನಯ್ಯ, ವಿ. ವಿನೋದ್, ಈಶ್ವರಪ್ಪ, ಎಸ್. ಕುಮಾರ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಗೋಪಾಲ್, ರಾಜೇಂದ್ರ, ವೆಂಕಟೇಶ್ ಉಜ್ಜನಿಪುರ ಹಾಗು ಕೆ. ಪ್ರಸಾದ್, ಸಂತೋಷ್ ಪಾಟೀಲ್ ಸೇರಿದಂತೆ ನಗರಸಭೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.
ನೂತನ ಅಂಬೇಡ್ಕರ್ ಪ್ರತಿಮೆ ಸಂಪೂರ್ಣವಾಗಿ ಕಂಚಿನಿಂದ ನಿರ್ಮಿಸಲಾಗಿದ್ದು, ಸುಮಾರು ೧,೫೦೦ ಕೆ.ಜಿ ತೂಕವಿದೆ. ಪ್ರತಿಷ್ಠಾಪನಾ ಮಂಟಪ ೬ ಅಡಿ ಎತ್ತರವಿದ್ದು, ೧೨ ಅಡಿ ಪ್ರತಿಮೆ ಸೇರಿ ಒಟ್ಟು ೧೮ ಅಡಿ ಎತ್ತರಕ್ಕೆ ಮೆಟ್ಟಿಲುಗಳನ್ನು ಸಹ ನಿರ್ಮಿಸಲಾಗುತ್ತದೆ. ಈಗಾಗಲೇ ಪ್ರತಿಷ್ಠಾಪನಾ ಸ್ಥಳದ ಸುತ್ತ ಲೋಹದ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಉಳಿದಂತೆ ಪ್ರತಿಮೆ ಅನಾವರಣಕ್ಕೆ ದಿನಾಂಕ ನಿಗದಿಯಾಗಬೇಕಿದೆ.
No comments:
Post a Comment