ಸಾಹಿತಿ ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪ
ಭದ್ರಾವತಿ: ಕಡದಕಟ್ಟೆ ನವಚೇತನ ಕನ್ನಡ ಶಾಲೆಯ ಸಾಹಿತಿ ಶಿಕ್ಷಕ ಸಿ.ಎಚ್ ನಾಗೇಂದ್ರಪ್ಪಯವರ ಕನ್ನಡ ನಾಡು-ನುಡಿ, ಸಾಹಿತ್ಯ ಸೇವೆ ಗುರುತಿಸಿ ರಾಣಿಬೆನ್ನೂರಿನ ರಂಗಕಲಾ ಕುಸುಮ ಪ್ರಕಾಶನದಿಂದ ಕೊಡಮಾಡುವ ೨೦೨೪ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನ.೨೪ರಂದು ನಡೆಯಲಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ, ಪ್ರಕಾಶಕ, ಸಾಹಿತಿ ಶಿಕ್ಷಕ ವೆಂಕಟೇಶ್ ಈಡಿಗರ್ ಯವರು ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ನಾಗೇಂದ್ರಪ್ಪರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
No comments:
Post a Comment