ಭದ್ರಾವತಿ: ವಿರೋಧದ ನಡುವೆಯೂ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ಬಡ್ತಿ ಹಾಗು ಸೇವಾ ಸೌಲಭ್ಯಗಳ ಈಡೇರಿಕೆಗಾಗಿ ನ.೧೯ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆ ಹಮ್ಮಿಕೊಳ್ಳುವ ಸಂಬಂಧ ವಿಶ್ವವಿದ್ಯಾಲಯಕ್ಕೆ ಸಂಘದ ವತಿಯಿಂದ ಪತ್ರ ಬರೆದು ಕೋರಲಾಗಿತ್ತು. ಅಲ್ಲದೆ ನ.೧೮ರೊಳಗಾಗಿ ಬೇಡಿಕೆಗಳು ಈಡೇರದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಆದರೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ವಿಶ್ವವಿದ್ಯಾಲಯ ಸಂಘಕ್ಕೆ ಪತ್ರ ಬರೆದು ತಿಳಿಸಿದೆ.
ಹೋರಾಟ ನಮಗೆ ಸಂವಿಧಾನ ನೀಡಿರುವ ಹಕ್ಕು, ನ್ಯಾಯ ಬದ್ಧವಾದ ಹೋರಾಟ ಇದಾಗಿದೆ. ಇದು ಯಾವುದೇ ವ್ಯಕ್ತಿ ವಿರುದ್ಧ ಅಥವಾ ವೈಯಕ್ತಿಕ ಹೋರಾಟವಲ್ಲ. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಈ ಸಂಬಂಧ ಹೋರಾಟಕ್ಕೆ ಅವಕಾಶ ನೀಡಲಾಗಿದೆ. ನಮ್ಮ ಹೋರಾಟದಿಂದ ಯಾವುದೇ ರೀತಿ ಸಮಸ್ಯೆ ಉದ್ಭವಿಸುವುದಿಲ್ಲ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಭವನ ಮುಂಭಾಗ ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
No comments:
Post a Comment