ಹಳೇನಗರ ವ್ಯಾಪ್ತಿಯಲ್ಲಿ ಘಟನೆ, ಗಾಯಗೊಂಡಿರುವ ದಂಪತಿ
ಭದ್ರಾವತಿ ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಭದ್ರಾವತಿ: ಹಳೇನಗರದ ಕಾಳಿಕಾಂಬ ರಸ್ತೆಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ ಸಂಭಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕೇಶವ ಹಾಗು ಇವರ ಪತ್ನಿ ಕನಕಲಕ್ಷ್ಮಿ ಅವರು ಗಾಯಗೊಂಡಿದ್ದು, ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗೋಬಿ ಮಂಜೂರಿ ಅಂಗಡಿ ಮಾಲೀಕರಾಗಿರುವ ಕೇಶವರವರು ಸಂಜೆ ಅಂಗಡಿಗೆ ಸಾಮಗ್ರಿ ತೆಗೆದುಕೊಂಡು ಹೋಗುವ ಮೊದಲು ಬಚ್ಚಲು ಮನೆಯಲ್ಲಿ ಸಿಲಿಂಡರ್ ಆನ್ ಮಾಡಿದಾಗ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಸಿಬ್ಬಂದಿಗಳಾದ ಬಾಬು ಗೌಡ, ಸುರೇಶ್, ರಾಜಾನಾಯ್ಕ ಮತ್ತು ಬಾಬಲು ಮಾನಿಕ ಬಾಯ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮನೆಯ ಸ್ವತ್ತುಗಳು ಬೆಂಕಿಗಾಹುತಿಯಾಗಿ ಸುಮಾರು ೫೦ ಸಾವಿರ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
No comments:
Post a Comment