ವಂದೇ ಮಾತರಂ ಟ್ರಸ್ಟ್ ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ : ವಂದೇ ಮಾತರಂ ಟ್ರಸ್ಟ್ ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಬಾರಂದೂರು, ಹಳ್ಳಿಕೆರೆ, ಕಾರೆಹಳ್ಳಿ, ಕೆಂಚೇನಹಳ್ಳಿ, ಕೆಂಪೇಗೌಡ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು ೫೫ ಮಹಿಳೆಯರು ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಂಡರು. ತಪಾಸಣೆ ಮಾಡಿಸಿಕೊಂಡ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಬಂದು ಸಂಬಂಧಿತ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಯಿತು.
ನಾರಾಯಣ ಹೃದಯಾಲಯ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಸ್. ಗಣೇಶ್ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂಬ ಮಾಹಿತಿ ನೀಡಿದರು.
ಅವರ ಸಹಯೋಗದೊಂದಿಗೆ ನೇತೃತ್ವದಲ್ಲಿ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು.
ರೋಟರಿ ಸಮುದಾಯ ದಳ ಅಧ್ಯಕ್ಷ ಬಿ.ಎ ಪ್ರಸನ್ನ ಕುಮಾರ್ ಬಾರಂದೂರು, ವಂದೇ ಮಾತರಂ ಟ್ರಸ್ಟಸ್ ಕಾರ್ಯದರ್ಶಿ ಆರ್.ಎಸ್ ಕಾರ್ತಿಕ್, ವೈದ್ಯೆ ಡಾ. ಪ್ರೀತಿ, ಟೆಕ್ನಿಷಿಯನ್ ಅರ್ಪಿತ, ರೋಟರಿ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ರಾಧ ಪ್ರಸನ್ನಕುಮಾರ್, ಮಮತಾ, ಕವಿತಾರಾವ್, ಜಯಲಕ್ಷ್ಮಿ, ರಾಣಿ, ಚಂದ್ರಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment