ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಹಾಗು ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಭದ್ರಾವತಿ ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಭದ್ರಾವತಿ : ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆ ಹಾಗು ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಶುಕ್ರವಾರ ಹಳೇನಗರದ ನಿರ್ಮಲ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಸಂಚಾರಿ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಶಾಂತಲಾರವರು ಮಾತನಾಡಿ, ಅತಿಯಾದ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಸೂಚನಾ ಫಲಕಗಳ ನಿರ್ಲಕ್ಷತನ ಈ ಮೂರು ಅಂಶಗಳು ರಸ್ತೆ ಅಪಘಾತಕ್ಕೆ ಮುಖ್ಯ ಕಾರಣಗಳಾಗಿವೆ. ಶೇ.೭೫ ರಷ್ಟು ರಸ್ತೆ ಅಪಘಾತಗಳು ಅತಿಯಾದ ವೇಗದಿಂದ ಸಂಭವಿಸಿವೆ. ಇನ್ನು ಕೆಲವು ವಾಹನ ಚಲಾಯಿಸುವವರ ತಪ್ಪು ಇಲ್ಲದಿದ್ದರೂ, ಎದುರಿನಿಂದ ಬರುವ ವಾಹನ ಸವಾರರ ವೇದದಿಂದ ಮತ್ತು ತಪ್ಪುಗಳಿಂದ ಅಪಘಾತಗಳು ಸಂಭವಿಸುತ್ತವೆ. ಇದನ್ನು ತಡೆಯಲು ಸೀಟ್ ಬೆಲ್ಟ್, ಹೆಲ್ಮೆಟ್, ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷೆ ಡಾ. ಸ್ವರ್ಣರವರು ಮಾತನಾಡಿ, ವಾಹನ ಚಲಾಯಿಸುವ ಚಾಲಕರು ಮನೆಯಿಂದ ಹೊರಡುವಾಗ ನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಡುವುದು ಸೂಕ್ತ. ಮನೆಯಿಂದ ಕೆಲಸಕ್ಕೆ ಹೊರಡುವಾಗ, ವಾಹನ ಚಲಾಯಿಸುವ ಪುರುಷರಿಗೆ ಮಹಿಳೆಯರು ಯಾವುದೇ ಒತ್ತಡ ಹೇರಬಾರದು ಎಂದರು.
ನಿರ್ಮಲ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗ್ಲಾಡಿಸ್ ಪಿಂಟೋ, ತಾಲೂಕು ಮಹಿಳಾ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ. ವೀಣಾ ಭಟ್, ಡಾ. ರೆಜಿನಾ, ಡಾ. ಲವ್‌ಲಿನ್, ಡಾ. ಸುಷ್ಮಾ, ಡಾ. ಸೈಯದ್ ಹಾಗು ದಾದಿಯರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
No comments:
Post a Comment