ಭದ್ರಾವತಿ ಜನ್ನಾಪುರದ ಬಬ್ಬೂರು ಕಮ್ಮೆ ಸೇವಾ ಸಂಘವು ಹಮ್ಮಿಕೊಂಡಿದ್ದ ಚಂಡಿಕಾ ಹವನ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಧಕರಾದ ಡಾ: ಹರೀಶ್ ದೇಲಂತಬೆಟ್ಟು, ಡಾ: ವಿದ್ಯಾಶಂಕರ್, ಎನ್.ಎಸ್.ಸುಬ್ರಮಣ್ಯ ಇವರುಗಳನ್ನು ಗೌರವಿಸಲಾಯಿತು.
ಭದ್ರಾವತಿ: ನಗರದ ಜನ್ನಾಪುರ ಬಬ್ಬೂರು ಕಮ್ಮೆ ಸೇವಾ ಸಂಘದ ೩೫ನೇ ವರ್ಷದ ಸ್ಥಾಪನಾ ಮಹೋತ್ಸವದ ಅಂಗವಾಗಿ ಮತ್ತು ಬೇವುಬೆಲ್ಲ ಕಾರ್ಯಕ್ರಮ ಹಾಗು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೫ನೇ ವರ್ಧಂತಿ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹವನ ನೆರವೇರಿಸಲಾಯಿತು. ಆವನಿ ಶೃಂಗೇರಿ ಶಂಕರ ಮಠದ ಪೀಠಾಧಿಪತಿಗಳಾದ ಶ್ರೀ ಅಧ್ವೈತಾನಂದ ಭಾರತೀ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಬಬ್ಬೂರು ಕಮ್ಮೆ ಸೇವಾ ಸಂಘದ ರಾಜ್ಯಾದ್ಯಕ್ಷ ಡಾ. ಎ.ವಿ.ಪ್ರಸನ್ನ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಮಾಡುವ ಧಾರ್ಮಿಕ ಆಚರಣೆಗಳಿಂದ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘಕ್ಕೆ ಆಯ್ಕೆಯಾದ ರಘುರಾಮ್‌ರವರು ಮಾತನಾಡಿ, ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕೆಂದರು. ತಾಲೂಕು ಅಧ್ಯಕ್ಷ ಎಚ್.ಎಸ್ ನಂಜುಂಡಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಪ್ರಮುಖರಾದ ನಾಗರಾಜ್, ಕೆ.ವಿ ನಾಗೇಶ್, ಕಾರ್‌ಕೊಡ್ಲು ಗುರುಮೂರ್ತಿ, ಮಾ.ಸಾ ನಂಜುಂಡಸ್ವಾಮಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಿ. ರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಧಕರಾದ ಡಾ. ಹರೀಶ ದೇಲಂತಬೆಟ್ಟು, ಡಾ. ಎಂ.ಎಚ್ ವಿದ್ಯಾಶಂಕರ್ ಮತ್ತು ಎನ್.ಎಸ್ ಸುಬ್ರಮಣ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುರೇಶ್, ಗುರುದತ್ತ, ಶ್ರೀಧರ್, ಪ್ರಕಾಶ್, ಛಾಯಾಪತಿ ಮತ್ತು ರಾಜಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ.ಡಿ.ಹಿರಿಯಣ್ಣ ಭಟ್ ವೇದಘೋಷ ನಡೆಸಿಕೊಟ್ಟರು. ಗ್ರಾಯತ್ರಿ ಪ್ರಾರ್ಥಿಸಿ, ಡಾ. ವಿದ್ಯಾಶಂಕರ್ ವಂದಿಸಿದರು. ದಿನೇಶ್ ನಿರೂಪಿಸಿದರು.
No comments:
Post a Comment