ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ಗಾಯಕ ಬಿ.ಎ ಮಂಜುನಾಥ್ ಅವರನ್ನು ಭದ್ರಾವತಿ ತಾಲೂಕಿ ಶ್ರೀ ರಾಮನಗರದ ಶ್ರೀ ಕಂಡ ಮುತ್ತನ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಅಧ್ಯಕ್ಷ, ಗಾಯಕ ಬಿ.ಎ ಮಂಜುನಾಥ್ ಅವರನ್ನು ತಾಲೂಕಿ ಶ್ರೀ ರಾಮನಗರದ ಶ್ರೀ ಕಂಡ ಮುತ್ತನ್ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಂಜುನಾಥ್‌ರವರು ಕಳೆದ ಹಲವು ವರ್ಷಗಳಿಂದ ಗಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಕಲಾ ಸೇವೆಯನ್ನು ಗುರುತಿಸಿ ೨೪ನೇ ವರ್ಷದ ಕಂಡಮುತ್ತನ್ ದೇವರ ಪೂಜಾ ಕಾರ್ಯಕ್ರಮದಲ್ಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ವಾಸು ಹಾಗು ಪ್ರಮುಖರಾದ ರಾಜವಿಕ್ರಮ್ ಮತ್ತು ಶ್ರೀಧರ್ ಬಾಲಕೃಷ್ಣನ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ರಂಗಕರ್ಮಿ, ಚಲನಚಿತ್ರ ನಟ ಅರುಣ್ ಸಾಗರ್, ಚಲನಚಿತ್ರ ನಿರ್ದೇಶಕಿ ಸಿ.ಎಸ್ ಬಾಬಿ, ಗಂಗಾಧರ್, ಯಶೋದರಯ್ಯ, ಸ್ವಾತಿಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment