ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಪವರ್‌ಲಿಫ್ಟರ್ ನಂಜುಂಡೇಗೌಡರವರು ಕರ್ನಾಟಕ ರಾಜ್ಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕದೊಂದಿಗೆ ಎಂ-೩ ಕ್ಲಾಸಿಕ್ ಬೆಸ್ಟ್ ಲಿಫ್ಟರ್-೨೦೨೫ ಬಿರುದು ತಮ್ಮದಾಗಿಸಿಕೊಂಡಿದ್ದಾರೆ.
ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಪವರ್‌ಲಿಫ್ಟರ್ ನಂಜುಂಡೇಗೌಡರವರು ಕರ್ನಾಟಕ ರಾಜ್ಯ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್, ಕೆಜಿಎಸ್ ಕ್ಲಬ್‌ನಲ್ಲಿ ಏ.೨೬ ರಿಂದ ೨೮ರವರೆಗೆ ಜರುಗಿದ ಪಂದ್ಯಾವಳಿಯಲ್ಲಿ ಭಾಗವಹಿಸಿ ಪವರ್‌ಲಿಫ್ಟಿಂಗ್ ಸ್ಪಧೆಯಲ್ಲಿ ಚಿನ್ನದ ಪದಕದೊಂದಿಗೆ ಎಂ-೩ ಕ್ಲಾಸಿಕ್ ಬೆಸ್ಟ್ ಲಿಫ್ಟರ್-೨೦೨೫ ಬಿರುದು ಪಡೆದುಕೊಂಡಿದ್ದಾರೆ. ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ತೀರ್ಪುಗಾರ ಮಹೇಶ್ವರಯ್ಯ ಪ್ರಶಸ್ತಿ ವಿತರಿಸಿದರು. ತರಬೇತಿದಾರ ಪ್ರಕಾಶ್‌ಕಾರಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕರು, ಕ್ರೀಡಾಪಟುಗಳು ನಂಜುಂಡೇಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.
No comments:
Post a Comment