Friday, May 2, 2025

ಮಾಜಿ ಸೈನಿಕರ ಪುತ್ರ ಬಿ.ಎಸ್ ಇಶಾಂತ್ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಬಿ.ಎಸ್ ಇಶಾಂತ್ 
 ಭದ್ರಾವತಿ: ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ(ಎಸ್‌ಎವಿ)ಯ ಪ್ರೌಢಶಾಲೆ ವಿದ್ಯಾರ್ಥಿ ಬಿ.ಎಸ್ ಇಶಾಂತ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೇ.೯೬ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 
    ಒಟ್ಟು ೬೨೫ಕ್ಕೆ ೫೯೮ ಅಂಕಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ವಿಜ್ಞಾನ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇಶಾಂತ್ ಕಡದಕಟ್ಟೆ ನಿವಾಸಿ, ಮಾಜಿ ಸೈನಿಕ(ಪ್ರಸ್ತುತ ಕೆಎಸ್‌ಆರ್‌ಟಿಸಿ ನೌಕರ) ಬಿ.ಟಿ ಸತೀಶ್ ಹಾಗು ಎಸ್. ಇಂದಿರ ದಂಪತಿ ಪುತ್ರರಾಗಿದ್ದಾರೆ.  ಭಂಡಾರಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಶ್ರೀಧರ್ ಸೇರಿದಂತೆ ಸ್ಥಳೀಯರು ಇಶಾಂತ್ ಅವರನ್ನು ಅಭಿನಂದಿಸಿದ್ದಾರೆ. 

No comments:

Post a Comment