ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು.
ಭದ್ರಾವತಿ: ಜೈನ ಧರ್ಮದ ಮುನಿಗಳಾದ ಶಾಂತಮೂರ್ತಿ, ವಾತ್ಸಲ್ಯರತ್ನಾಕರ್ ಪ.ಪೂ. ೧೦೮ ಆಚಾರ್ಯ ಶ್ರೀ ಸನ್ಮತಿಸಾಗರಜಿ ಮಹಾರಾಜರ ಶಿಷ್ಯರಾದ ಆಗಮಚಕ್ರವರ್ತಿ ನಿರ್ಯಾಪಾಕಾಶ್ರಮಣ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು ಹಾಗು ೮ ಮಂದಿ ಮುನಿರಾಜರು ಶುಕ್ರವಾರ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಆಗಮಿಸಿ ಇಲ್ಲಿನ ಭಕ್ತರಿಗೆ ಆಶೀರ್ವಚನ ನೀಡಿ ತೆರಳಿದರು.
ಬೆಳಗಾವಿ ಕಾಗ್‌ವಾಡ್ ತಾಲೂಕಿನ ಶಿರಗುಪ್ಪಿಯಿಂದ ಶ್ರೀ ಕ್ಷೇತ್ರ ಶ್ರವಣಬೆಳಗೊಳದವರೆಗೆ ಮಹಾಶ್ರಮಣ ಭಗವಾನ ಬಾಹುಬಲಿ ಚರಣ ವಂದನಾ ವಾತ್ಸಲ್ಯ ವಿಹಾರ-೨೦೨೫ ಅಂಗವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುನಿಗಳ ತಂಡದೊಂದಿಗೆ ನೂರಾರು ಭಕ್ತರು ಸಹ ಪಾದಯಾತ್ರೆಯೊಂದಿಗೆ ಆಗಮಿಸಿ ಸ್ಥಾನಕ್ ಭವನದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ತೆರಳಿದರು.
ಭದ್ರಾವತಿ ಹಳೇನಗರದ ಜೈನ್ ಸ್ಥಾನಕ್ ಭವನಕ್ಕೆ ಶುಕ್ರವಾರ ಆಗಮಿಸಿದ ಮುನಿಶ್ರೀ ೧೦೮ ವಿದ್ಯಾಸಾಗರ್‌ಜಿ ಮಹಾರಾಜರು.
ದಿಗಂಬರ ಜೈನ್ ಸಂಘದ ಅಧ್ಯಕ್ಷ ಪಿ.ಸಿ ಜೈನ್ ಹಾಗು ರಾಕೇಶ್ ಜೈನ್, ಅಜಯ್, ಅಭಯ್ ಕುಮಾರ್, ಸುಕುಮಾರ್, ಬಾಹುಬಲಿ ಸೇರಿದಂತೆ ಇನ್ನಿತರರು ಮುನಿಗಳ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡುಗೆ ನೀಡಿದರು.
No comments:
Post a Comment