ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಕಾರ್ಖಾನೆಯ ಸುಮಾರು ೧೪೩ಕ್ಕೂ ಹೆಚ್ಚು ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ರಕ್ತದೊತ್ತಡ(ಬಿಪಿ), ಜಿಆರ್‌ಬಿಎಸ್(ಮಧುಮೇಹ), ಸಮೀಪ ದೃಷ್ಠಿ ದೋಷ, ದೂರ ದೃಷ್ಠಿ ದೋಷ, ಬಣ್ಣ ದೃಷ್ಠಿ, ಬೈನಾಕುಲರ್ ಮೌಲ್ಯಮಾಪನ ಮತ್ತು ಟ್ರಯಲ್ ಸೆಟ್/ ವಕ್ರೀಭವನ ತಪಾಸಣೆ ಸೇರಿದಂತೆ ಇನ್ನಿತರ ತಪಾಸಣೆಗಳನ್ನು ನಡೆಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯೆ ಡಾ. ಮೇಘನ ಶಿಬಿರದಲ್ಲಿ ಸಲಹೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಸಹಾಯಕರಾದ ಹರ್ಷ, ಸೋಮೇಶ್ ಮತ್ತು ಚೇತನ, ವಿಐಎಸ್‌ಎಲ್ ಆಸ್ಪತ್ರೆಯ ಅಲೆನ್ ಪಿಂಟೋ, ಪುಷ್ಪಲತಾ, ಮೋಹನ್, ನವೀನ್, ಉಮೇಶ್, ರಮೇಶ್ ಮತ್ತು ಕಿರಿಯ ಅಧಿಕಾರಿ (ಮಾನವ ಸಂಪನ್ಮೂಲ) ಎಂ.ಎಲ್ ಯೋಗೀಶ್ ಶಿಬಿರದ ಯಶಸ್ವಿಗೆ ಸಹಕರಿಸಿದರು.
ವಿಐಎಸ್‌ಎಲ್ ಆಸ್ಪತ್ರೆ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಸುಜೀತ್ ಕುಮಾರ್ ಮತ್ತು ಮಹಾಪ್ರಬಂಧಕ(ಎಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಶಿಬಿರದ ಮೇಲುಸ್ತುವಾರಿ ವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ