ಉಕ್ಕಿನ ನಗರದಲ್ಲಿ ಅ.೧೮ರಂದು ವಿಜಯದಶಮಿ ಪಥ ಸಂಚಲನ
ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಈ ನಡುವೆ ಅ.೧೮ರ ಶನಿವಾರ ಭದ್ರಾವತಿ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಭದ್ರಾವತಿ : ರಾಷ್ಟ್ರೀಯವಾದಿ ಚಿಂತನೆಗಳು, ವಿಚಾರಗಳ ಮೂಲಕ ದೇಶದ ಅತಿ ದೊಡ್ಡ ಸಂಘಟನೆಯಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಈ ನಡುವೆ ಅ.೧೮ರ ಶನಿವಾರ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಇದಕ್ಕೆ ಪೂರಕವಾಗಿ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
ಶತಮಾನ ಪೂರೈಸಿರುವ ಆರ್‌ಎಸ್‌ಎಸ್ ೧೦೦ನೇ ವರ್ಷದ ವಿಜಯದಶಮಿ ಪಥ ಸಂಚಲನಕ್ಕೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಶನಿವಾರ ಸಂಜೆ ೫.೩೦ಕ್ಕೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳುವ ವಿಜಯದಶಮಿ ಪಥ ಸಂಚಲನ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮತ್ತು ಅಂಬೇಡ್ಕರ್ ವೃತ್ತದಿಂದ ಲೋಯರ್ ಹುತ್ತಾದವರೆಗೆ ಸಾಗಲಿದೆ.
ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳು ಕೇಸರಿಮಯವಾಗಿವೆ. ಎಲ್ಲೆಡೆ ಫ್ಲೆಕ್ಸ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಜಗಜ್ಯೋತಿ ಬಸವೇಶ್ವರರು, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಭಗೀರಥ ಮಹಿರ್ಷಿ, ದಾಸಶ್ರೇಷ್ಠ ಕನಕದಾಸರು, ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್, ಚಂದ್ರಶೇಖರ್ ಅಜಾದ್, ಭಗತ್‌ಸಿಂಗ್, ರಾಣಾ ಪ್ರತಾಪ್, ಶಿವಾಜಿ ಮಹಾರಾಜ್, ಆರ್‌ಎಸ್‌ಎಸ್ ಸಂಸ್ಥಾಪಕರು ಸೇರಿದಂತೆ ಇನ್ನಿತರ ಮಹಾನ್ ವ್ಯಕ್ತಿಗಳ ರಸ್ತೆಯುದ್ದಕ್ಕೂ ಅಳವಡಿಸಲಾಗಿರುವ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವ
ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ರಾತ್ರಿ ವೇಳೆ ಕಂಗೊಳಿಸಲಿವೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ೨ ಕ್ವಿಂಟಾಲ್ ಹೂ ಖರೀದಿಸಲಾಗಿದೆ. ಈ ನಡುವೆ ಪಥ ಸಂಚಲನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಹಿರಿಯ ಸ್ವಯಂ ಸೇವಕರು ಕಿರಿಯ ಸ್ವಯಂ ಸೇವಕರು ಹಾಗು ಬಂಧು-ಬಳಗ, ಆಸಕ್ತಿಗೆ ಮನವಿ ಮಾಡುತ್ತಿದ್ದಾರೆ.
ಉಕ್ಕಿನ ನಗರದಲ್ಲಿ ವಿಜಯದಶಮಿ ಪಥ ಸಂಚಲನ ಕೈಗೊಳ್ಳುವ ಮೂಲಕ ಆರ್‌ಎಸ್‌ಎಸ್ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಭಾರತೀಯ ಜನತಾ ಪಕ್ಷ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷದ್, ಸಹಕಾರಿ ಭಾರತಿ ಸೇರಿದಂತೆ ಸುಮಾರು ೩೩ಕ್ಕೂ ಹೆಚ್ಚು ಶಾಖೆಗಳಿಗೆ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್ ಇದೀಗ ಶತಮಾನ ಸಂಭ್ರಮಾಚರಣೆಯಲ್ಲಿ ತನ್ನ ಭವ್ಯಪರಂಪರೆಯನ್ನು ಅನಾವರಣಗೊಳಿಸಲು ಮುಂದಾಗಿದೆ.
ಭದ್ರಾವತಿ ನಗರದಲ್ಲಿ ಶನಿವಾರ ವಿಜಯದಶಮಿ ಪಥ ಸಂಚಲನ ಆಯೋಜಿಸಲಾಗಿದೆ. ಗಣವೇಷಧಾರಿಯಾಗಿ ಸಾವಿರಾರು ಮಂದಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದು, ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ನಡೆಯಲಿದ್ದು, ಅಲ್ಲದೆ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಎಲ್ಲಾ ವಾಹನಗಳಿಗೆ ಪುಷ್ಪಾಲಂಕಾರ ಸಹ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ೨ ಕ್ವಿಂಟಾಲ್ ಹೂ ಖರೀದಿಸಿರುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ