ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ೧೯ ವರ್ಷದ ದಲಿತ ಯುವತಿಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನುಖಂಡಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ವತಿಯಿಂದ ರಾಜ್ಯ ಸಂಚಾಲಕಎಂ. ಗುರುಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ಉತ್ತರ ಪ್ರದೇಶದಹತ್ರಾಸ್‌ನಲ್ಲಿ ೧೯ ವರ್ಷದದಲಿತ ಯುವತಿ ಮೇಲೆ ನಡೆದಿರುವಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತಸಂಘರ್ಷ ಸಮಿತಿ ವತಿಯಿಂದ ರಾಜ್ಯಸಂಚಾಲಕ ಎಂ. ಗುರುಮೂರ್ತಿ ನೇತೃತ್ವದಲ್ಲಿಶುಕ್ರವಾರ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
ಎಂ. ಗುರುಮೂರ್ತಿ ಮಾತನಾಡಿ, ದೇಶದಲ್ಲಿ ಮೇಲ್ವರ್ಗದವರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ದಲಿತರನ್ನು ಶೋಷಿಸಲಾಗುತ್ತಿದ್ದು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಪ್ರಕರಣಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ ದಲಿತರುಅತಿ ಹೆಚ್ಚು ಶೋಷಣೆಗೆ ಒಳಾಗುತ್ತಿದ್ದು, ಯುವತಿಯ ಮೇಲೆ ನಡೆದಿರುವ ಅತ್ಯಾಚಾರಘಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ತಕ್ಷಣತಪ್ಪಿತಸ್ಥ ಅತ್ಯಾಚಾರಿಗಳ ನಾಲಿಗೆ ಕತ್ತರಿಸಿ ಮತ್ತುಬೆನ್ನುಮೂಳೆ ಮುರಿದು ಗಲ್ಲು ಶಿಕ್ಷೆವಿಧಿಸಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷಶಿವಬಸಪ್ಪ, ಡಿಎಸ್‌ಎಸ್ ತಾಲೂಕುಸಂಚಾಲಕ ವಿ. ವಿನೋದ್, ಜಿಲ್ಲಾಸಂಚಾಲಕರಾದ ಎ. ಅರ್ಜಿನ್, ಎಂ. ಏಳುಕೋಟಿ, ಏಳುಮಲೈ, ಸುವರ್ಣಮ್ಮ, ಬಿ. ಕೃಷ್ಣಪ್ಪ, ಯು. ಮಹಾದೇವಪ್ಪ, ಸಿ. ಚನ್ನಪ್ಪ, ಆರ್. ತಮ್ಮಯ್ಯ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.