Saturday, October 10, 2020

ಬಜರಂಗದಳಸಂಸ್ಥಾಪನ ದಿನ : ಒಳರೋಗಿಗಳಿಗೆ ಹಣ್ಣುವಿತರಣೆ

ವಿಶ್ವ ಹಿಂದೂ ಪರಿಷತ್ ಬಜರಂಗದಳದಸಂಸ್ಥಾಪನ ದಿನದ ಅಂಗವಾಗಿ ಭದ್ರಾವತಿಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
ಭದ್ರಾವತಿ, ಅ. ೯: ವಿಶ್ವ ಹಿಂದೂಪರಿಷತ್ ಬಜರಂಗದಳದ ಸಂಸ್ಥಾಪನ ದಿನದ ಅಂಗವಾಗಿ ನಗರದಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆಹಣ್ಣು ವಿತರಿಸಲಾಯಿತು.
    ಬಜರಂಗದಳ ಜಿಲ್ಲಾ ಸಂಚಾಲಕಸುನಿಲ್ ಕುಮಾರ್, ತಾಲೂಕು ಸಂಚಾಲಕವಡಿವೇಲು, ಗ್ರಾಮಾಂತರ ಸಂಚಾಲಕ ವಾಗೀಶ್, ನಗರಸಹ ಸಂಯೋಜಕ ರಂಗಣ್ಣ, ನಗರಸಂಯೋಜಕರಾದ ಕೃಷ್ಣ, ಕಿರಣ್ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.

ಯೋಗ ಗುರು ಡಿ. ನಾಗರಾಜ್‌ಗೆ ೩ ಚಿನ್ನ, ೧ ಕಂಚಿನ ಪದಕ

ಯೋಗ ಭಂಗಿಯಲ್ಲಿ ಡಿ. ನಾಗರಾಜ್ 
ಭದ್ರಾವತಿ: ನಗರದ ವಿವೇಕಾನಂದಯೋಗ ಶಿಕ್ಷಣ ಟ್ರಸ್ಟ್‌ನಮುಖ್ಯಸ್ಥ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ಡಿ. ನಾಗರಾಜ್‌ರವರುವಿವಿಧೆಡೆ ಆಯೋಜಿಸಲಾಗಿದ್ದ ಆನ್‌ಲೈನ್ ನೇರಪ್ರಸಾರದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ೩ ಚಿನ್ನ ಹಾಗು೧ ಕಂಚಿನ ಪದಕಪಡೆದುಕೊಂಡಿದ್ದಾರೆ.
    ಬೆಂಗಳೂರಿನ ಯೋಗ ಗಂಗೋತ್ರಿ ವತಿಯಿಂದ೩ ದಿನಗಳ ಕಾಲಆಯೋಜಿಸಲಾಗಿದ್ದ ಸ್ಪರ್ಧೆಯ ೫೧ ರಿಂದ ೬೦ವರ್ಷ ವಯೋಮಾನದ ವಿಭಾಗದಲ್ಲಿ ಚಿನ್ನದಪದಕ ಪಡೆದುಕೊಂಡಿದ್ದು, ಇಂಟರ್ ನ್ಯಾಷನಲ್ ಯೂತ್ಯೋಗ ಫೆಡರೇಷನ್ ಮಲೇಷಿಯಾ ವತಿಯಿಂದ ಆಯೋಜಿಸಲಾಗಿದ್ದಸ್ಪರ್ಧೆಯ ೫೦ ರಿಂದ ೬೦ವರ್ಷ ವಯೋಮಾನದ ವಿಭಾಗದಲ್ಲಿ ಹಾಗುಶ್ರೀಲಂಕ ಯೂತ್ ಯೋಗ ಫೆಡರೇಷನ್ಹಾಗು ಯೋಗ ಕಲ್ಚರಲ್ ಸೊಸೈಟಿವತಿಯಿಂದ ಆಯೋಜಿಸಲಾಗಿದ್ದ ಫಸ್ಟ್ ಇಂಡೋ-ಶ್ರೀಲಂಕಾಆನ್‌ಲೈನ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ೫೧ರಿಂದ ೬೦ ವರ್ಷ ವಯೋಮಾನದವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
   ಇದೆ ರೀತಿ ಗುಜರಾತ್ಸೂರತ್‌ನ ಪ್ರಸನ್ ಯೋಗಪೀಠಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದಫಸ್ಟ್ ಗ್ಲೋಬಲ್ ಆನ್‌ಲೈನ್ವಿಡಿಯೋ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ೩೫ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
    ನಾಗರಾಜ್‌ರವರು ಕಳೆದ೩೫ ವರ್ಷಗಳಿಂದ ನಿರಂತರವಾಗಿ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸುಮಾರು ೩೦೦ಕ್ಕೂ ಹೆಚ್ಚು ಪದಕಗಳನ್ನುಪಡೆದುಕೊಂಡಿದ್ದಾರೆ.

ಅಂಗಡಿ ಮುಂಗಟ್ಟು ಜಲಾವೃತ : ಸೂಕ್ತ ಕ್ರಮಕ್ಕೆ ಮನವಿ

ಭದ್ರಾವತಿನಗರಸಭೆ ವ್ಯಾಪ್ತಿಯ ಭೂತನಗುಡಿ ಮತ್ತು ಎನ್‌ಎಸ್‌ಟಿ ಭಾಗದ ರಸ್ತೆಗಳಚರಂಡಿಗಳಲ್ಲಿ ನೀರು ತುಂಬಿಕೊಂಡು ಮನೆಹಾಗು ಅಂಗಡಿ ಮುಂಗಟ್ಟುಗಳು ಸಹಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
ಭದ್ರಾವತಿ: ಕಳೆದ ಕೆಲವುದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವಮಳೆಯಿಂದಾಗಿ ನಗರಸಭೆ ವ್ಯಾಪ್ತಿಯ ಭೂತನಗುಡಿಮತ್ತು ಎನ್‌ಎಸ್‌ಟಿಭಾಗದ ರಸ್ತೆಗಳ ಚರಂಡಿಗಳಲ್ಲಿ ನೀರುತುಂಬಿಕೊಂಡು ಮನೆ ಹಾಗು ಅಂಗಡಿಮುಂಗಟ್ಟುಗಳು ಸಹ ಜಲಾವೃತಗೊಳ್ಳುತ್ತಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಮ್ ಸೇನಾ ಕರ್ನಾಟಕವತಿಯಿಂದ ಶುಕ್ರವಾರ ಪೌರಾಯುಕ್ತ ಮನೋಹರ್‌ಗೆ ಮನವಿಸಲ್ಲಿಸಲಾಯಿತು.
   ಕಳೆದ ೩-೪ವರ್ಷಗಳಿಂದ ಇದೆ ರೀತಿ ಸಮಸ್ಯೆಎದುರಾಗುತ್ತಿದ್ದು, ಮಳೆಗಾಲದಲ್ಲಿ ನೀರು ಚರಂಡಿಗಳಲ್ಲಿ ಸರಾಗವಾಗಿಹರಿಯದೆ ನಿಂತುಕೊಳ್ಳುತ್ತಿದೆ. ಇದರಿಂದಾಗಿ ಮನೆಗಳು ಜಲಾವೃತ್ತಗೊಂಡು ನಿವಾಸಿಗಳುಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ರಾಮ್ಸೇನಾ ಕರ್ನಾಟಕ ವತಿಯಿಂದ ಸ್ಥಳಪರಿಶೀಲನೆ ನಡೆಸಿ ನಿವಾಸಿಗಳ ಸಮಸ್ಯೆಗಳನ್ನುಆಲಿಸುವ ಜೊತೆಗೆ ಸಹಿ ಸಂಗ್ರಹಿಸಲಾಗಿದೆ. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ.
   ರಾಮ್ ಸೇನಾ ಕರ್ನಾಟಕಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷಎಂ. ಸಚಿನ್ ವರ್ಣೇಕರ್, ಎಸ್.ಎನ್ ಶ್ರೀನಿವಾಸ್, ರಾಜುಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಛಾಯಾಗ್ರಾಹಕರಿಂದ ಮನವಿ


ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
      ಕೋವಿಡ್-೧೯ರ ಹಿನ್ನಲೆಯಲ್ಲಿಸಂಕಷ್ಟಕ್ಕೆ ಒಳಗಾಗಿರುವ ವೃತ್ತಿ ಬಾಂಧವರಿಗೆ ವಿಶೇಷಪ್ಯಾಕೇಜ್ ಘೋಷಿಸಬೇಕು. ಕಾರ್ಮಿಕ ಇಲಾಖೆಯ ವಿವಿಧಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸ್ಮಾರ್ಟ್‌ಕಾರ್ಡ್ನೀಡುವುದು. ಛಾಯಾಗ್ರಾಹಕರ ಆಕಾಡೆಮಿ ಸ್ಥಾಪಿಸುವುದು. ಕೆ.ಪಿ.ಎ ಛಾಯಾಭವನಕ್ಕೆ ನಿವೇಶನ ಒದಗಿಸುವುದು. ಸರ್ಕಾರದವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರತೆಗೆಯುವುದನ್ನು ತಕ್ಷಣ ನಿಷೇಧಿಸುವುದು. ವೃತ್ತಿಭದ್ರತೆ, ಜೀವನ ಭದ್ರತೆ ಒದಗಿಸುವುದುಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಮನವಿಯಲ್ಲಿ ಒತ್ತಾಯಿಸಲಾಗಿದೆ.
   ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ಅ.೩೧ರಂದು ರಾಜ್ಯಾದ್ಯಂತಕೇಂದ್ರ ಹಾಗು ರಾಜ್ಯ ಸರ್ಕಾರದವಿರುದ್ಧ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನುಬೆಂಗಳೂರಿನ ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
  ಸಂಘದ ಅಧ್ಯಕ್ಷ ಎಚ್. ರಾಮೃಕೃಷ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷಎಸ್.ಡಿ ಪ್ರಕಾಶ್, ಕಾರ್ಯದರ್ಶಿಎಸ್.ಜಿ ಸಿದ್ದಪ್ಪ, ಖಜಾಂಚಿರೇಣುಕಯ್ಯ, ನಿರ್ದೇಶಕರಾದ ಜೆ. ಕುಮಾರ್, ಎಚ್.ಆರ್ ಸುರೇಶ್, ವಡಿವೇಲು, ಪಾಪಣ್ಣ, ಶಿವಾನಂದ ಸೇರಿದಂತೆ ಇನ್ನಿತರರುಉಪಸ್ಥಿತರಿದ್ದರು.

ದಲಿತ ಯುವತಿ ಮೇಲೆ ಅತ್ಯಾಚಾರಘಟನೆ : ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಆಗ್ರಹ


ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ೧೯ ವರ್ಷದ ದಲಿತ ಯುವತಿಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಯನ್ನುಖಂಡಿಸಿ ಕರ್ನಾಟಕ ದಲಿತ ಸಂಘರ್ಷಸಮಿತಿ ವತಿಯಿಂದ ರಾಜ್ಯ ಸಂಚಾಲಕಎಂ. ಗುರುಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ಉತ್ತರ ಪ್ರದೇಶದಹತ್ರಾಸ್‌ನಲ್ಲಿ ೧೯ ವರ್ಷದದಲಿತ ಯುವತಿ ಮೇಲೆ ನಡೆದಿರುವಸಾಮೂಹಿಕ ಅತ್ಯಾಚಾರ ಘಟನೆಯನ್ನು ಖಂಡಿಸಿ ಕರ್ನಾಟಕ ದಲಿತಸಂಘರ್ಷ ಸಮಿತಿ ವತಿಯಿಂದ ರಾಜ್ಯಸಂಚಾಲಕ ಎಂ. ಗುರುಮೂರ್ತಿ ನೇತೃತ್ವದಲ್ಲಿಶುಕ್ರವಾರ ತಾಲೂಕು ಕಛೇರಿ ಮುಂಭಾಗಪ್ರತಿಭಟನೆ ನಡೆಸಲಾಯಿತು.
       ಎಂ. ಗುರುಮೂರ್ತಿ ಮಾತನಾಡಿ, ದೇಶದಲ್ಲಿ ಮೇಲ್ವರ್ಗದವರ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗುತ್ತಿದೆ. ಅದರಲ್ಲೂ ದಲಿತರನ್ನು ಶೋಷಿಸಲಾಗುತ್ತಿದ್ದು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಪ್ರಕರಣಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ ದಲಿತರುಅತಿ ಹೆಚ್ಚು ಶೋಷಣೆಗೆ ಒಳಾಗುತ್ತಿದ್ದು, ಯುವತಿಯ ಮೇಲೆ ನಡೆದಿರುವ ಅತ್ಯಾಚಾರಘಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ ತಕ್ಷಣತಪ್ಪಿತಸ್ಥ ಅತ್ಯಾಚಾರಿಗಳ ನಾಲಿಗೆ ಕತ್ತರಿಸಿ ಮತ್ತುಬೆನ್ನುಮೂಳೆ ಮುರಿದು ಗಲ್ಲು ಶಿಕ್ಷೆವಿಧಿಸಬೇಕೆಂದು ಆಗ್ರಹಿಸಲಾಯಿತು.
         ಪ್ರತಿಭಟನೆಯಲ್ಲಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷಶಿವಬಸಪ್ಪ, ಡಿಎಸ್‌ಎಸ್ ತಾಲೂಕುಸಂಚಾಲಕ ವಿ. ವಿನೋದ್, ಜಿಲ್ಲಾಸಂಚಾಲಕರಾದ ಎ. ಅರ್ಜಿನ್, ಎಂ. ಏಳುಕೋಟಿ, ಏಳುಮಲೈ, ಸುವರ್ಣಮ್ಮ, ಬಿ. ಕೃಷ್ಣಪ್ಪ, ಯು. ಮಹಾದೇವಪ್ಪ, ಸಿ. ಚನ್ನಪ್ಪ, ಆರ್. ತಮ್ಮಯ್ಯ ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.

Thursday, October 8, 2020

ಎಸ್‌ಬಿಐ ನವೀಕೃತಗೊಂಡ ಶಾಖಾ ಕಛೇರಿ ಉದ್ಘಾಟನೆ


ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
ಭದ್ರಾವತಿ, ಅ. ೮:  ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರದ ಪ್ರಧಾನ ಶಾಖಾ ಕಛೇರಿಯ ನವೀಕೃತಗೊಂಡ ಕಟ್ಟಡ ಉದ್ಘಾಟನೆ ಗುರುವಾರ ನಡೆಯಿತು.
     ನಗರದ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಶಾಖಾ ಕಛೇರಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಸ್ಟೇಟ್ ಬ್ಯಾಂಕ್ ಮೈಸೂರು ಕೆಲವು ವರ್ಷಗಳ ಹಿಂದೆ ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನಗೊಂಡ ಹಿನ್ನಲೆಯಲ್ಲಿ ಶಿಥಿಲಗೊಂಡ ಕಟ್ಟಡವನ್ನು ನವೀಕರಣಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು.
     ನವೀಕೃತಗೊಂಡ ಕಟ್ಟಡವನ್ನು ಆರ್.ಬಿ.ಓ-೪, ಎ.ಓ-೬, ಶಿವಮೊಗ್ಗ ವಲಯ ವ್ಯವಸ್ಥಾಪಕ ಟಿ. ರಾಮರಾವ್ ಉದ್ಘಾಟಿಸಿದರು. ನವೀಕೃತಗೊಂಡ ಕಚೇರಿಯಲ್ಲಿ ಗ್ರಾಹಕರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಬ್ಯಾಂಕಿನ ಸಿಬ್ಬಂದಿಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು, ಗ್ರಾಹಕರು ಸೇರಿದಂತೆ ಎಲ್ಲರೂ ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಬೇಕೆಂದು ರಾಮರಾವ್ ಮನವಿ ಮಾಡಿದರು.
      ವಿಐಎಸ್‌ಎಲ್ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಬ್ಯಾಂಕಿನ ಉಪ ವ್ಯವಸ್ಥಾಪಕ ನಾಗರಾಜ್, ಸಿಬ್ಬಂದಿಗಳಾದ ಹೇಮಂತ್, ಸೂರಜ್, ಸರಸ, ಗೀತಾಂಜಲಿ, ರಾಘವೇಂದ್ರ ಗಡ್ಕರ್, ರಮೇಶ್, ಉಮೇಶ್‌ನಾಯ್ಕ್, ಸುಶ್ಮಿತಾ ಭಟ್, ಸುರೇಶ್‌ಕುಮಾರ್, ಭದ್ರತಾ ಸಿಬ್ಬಂದಿಗಳಾದ ಸಂಪತ್, ಗುರುರಾಜ್, ವಿನೋದ್, ಗ್ರಾಹಕರಾದ ದಾಮೋದರ ಬಾಳಿಗ, ಕೆ.ಸಿ ವೀರಭದ್ರಪ್ಪ, ತೀರ್ಥಪ್ಪ ಸೇರಿದಂತೆ ಉಪಸ್ಥಿತರಿದ್ದರು.

ಹತ್ರಾಸ್ ಅತ್ಯಾಚಾರ ಘಟನೆಗೆ ಎಸ್‌ಡಿಪಿಐ ಖಂಡನೆ :

ಉತ್ತರ ಪ್ರದೇಶ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಘಟನೆಯನ್ನು ಖಂಡಿಸಿ ಗುರುವಾರ ಭದ್ರಾವತಿಯಲ್ಲಿ ತಾಲೂಕು ಕಛೇರಿ ಮುಂಭಾಗ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೮: ಕೇಂದ್ರ ಹಾಗು ಉತ್ತರ ಪ್ರದೇಶ ಸರ್ಕಾರಗಳು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿವೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಮುಖಂಡರು ಆರೋಪಿಸಿದರು.
     ಉತ್ತರ ಪ್ರದೇಶ ಹತ್ರಾಸ್ ಅತ್ಯಾಚಾರ ಘಟನೆಯನ್ನು ಖಂಡಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ನೆಪದಲ್ಲಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಮಹಿಳೆಯರ ರಕ್ಷಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ದೇಶದಲ್ಲಿ ಒಂದು ಕೆಟ್ಟ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
        ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯದರ್ಶಿ ಮಹಮ್ಮದ್ ಗೌಸ್, ಸದಸ್ಯರಾದ ಇಮ್ರಾನ್ ಖಾನ್, ಫೈರೋಜ್, ಮುಸ್ವೀರ್ ಬಾಷಾ, ಮತೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.