ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ತಾಲೂಕು ಛಾಯಾಗ್ರಾಹಕರ ಸಂಘದವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-೧೯ರ ಹಿನ್ನಲೆಯಲ್ಲಿಸಂಕಷ್ಟಕ್ಕೆ ಒಳಗಾಗಿರುವ ವೃತ್ತಿ ಬಾಂಧವರಿಗೆ ವಿಶೇಷಪ್ಯಾಕೇಜ್ ಘೋಷಿಸಬೇಕು. ಕಾರ್ಮಿಕ ಇಲಾಖೆಯ ವಿವಿಧಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸ್ಮಾರ್ಟ್‌ಕಾರ್ಡ್ನೀಡುವುದು. ಛಾಯಾಗ್ರಾಹಕರ ಆಕಾಡೆಮಿ ಸ್ಥಾಪಿಸುವುದು. ಕೆ.ಪಿ.ಎ ಛಾಯಾಭವನಕ್ಕೆ ನಿವೇಶನ ಒದಗಿಸುವುದು. ಸರ್ಕಾರದವಿವಿಧ ಇಲಾಖೆಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಛಾಯಾಚಿತ್ರತೆಗೆಯುವುದನ್ನು ತಕ್ಷಣ ನಿಷೇಧಿಸುವುದು. ವೃತ್ತಿಭದ್ರತೆ, ಜೀವನ ಭದ್ರತೆ ಒದಗಿಸುವುದುಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆಒತ್ತಾಯಿಸಿ ಅ.೩೧ರಂದು ರಾಜ್ಯಾದ್ಯಂತಕೇಂದ್ರ ಹಾಗು ರಾಜ್ಯ ಸರ್ಕಾರದವಿರುದ್ಧ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆಯನ್ನುಬೆಂಗಳೂರಿನ ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ಎಚ್. ರಾಮೃಕೃಷ್ಣ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷಎಸ್.ಡಿ ಪ್ರಕಾಶ್, ಕಾರ್ಯದರ್ಶಿಎಸ್.ಜಿ ಸಿದ್ದಪ್ಪ, ಖಜಾಂಚಿರೇಣುಕಯ್ಯ, ನಿರ್ದೇಶಕರಾದ ಜೆ. ಕುಮಾರ್, ಎಚ್.ಆರ್ ಸುರೇಶ್, ವಡಿವೇಲು, ಪಾಪಣ್ಣ, ಶಿವಾನಂದ ಸೇರಿದಂತೆ ಇನ್ನಿತರರುಉಪಸ್ಥಿತರಿದ್ದರು.
No comments:
Post a Comment