ಭದ್ರಾವತಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
ಭದ್ರಾವತಿ, ಅ. ೧೦: ನಗರದ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಬಾಬು ಎಸ್. ಗೌಡರವರು ಇಲಾಖೆಯಲ್ಲಿ ಇದುವರೆಗೂ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂಬಡ್ತಿ ಹೊಂದಿರುವ ಇವರು ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ಎಸ್. ಗೌಡ ಮಾತನಾಡಿ, 'ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ'. ೧೦ ವರ್ಷದ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಿಬ್ಬಂದಿ ವಿನೂತನ್ ಮಾತನಾಡಿ, ಬಾಬುರವರು ಇಲಾಖೆಯಲ್ಲಿ ತಮ್ಮೊಂದಿಗೆ ೮ ವರ್ಷಗಳಿಂದ ಒಡನಾಡಿಯಾಗಿ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಸಿಬ್ಬಂದಿ ಡಿ.ಎನ್. ಸುರೇಶ್ ಮಾತನಾಡಿ, ಬಾಬುರವರು ಎಲ್ಲಾ ಸಿಬ್ಬಂದಿಗಳನ್ನು ಸಮಾನವಾಗಿ ಕಾಣುವ ಮೂಲಕ ಸಿಬ್ಬಂದಿಗಳ ವಸತಿಗೃಹಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳಿಂದ ಸ್ವೀಪರ್ ಕೆಲಸ ಮಾಡಿ ನಿವೃತ್ತ ಹೊಂದಿರುವ ಮಹಿಮೂಮ(ಕಾಕಮ್ಮ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಮುಖ ಅಗ್ನಿಶಾಮಕ ಕೆ.ಎಸ್. ರಮೇಶ್ ರವರು ಎಲ್ಲರನ್ನೂ ಸ್ವಾಗತಿಸಿದರು. ಅ.ಶಾ. ವಿನೂತನ್.ಎಂ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳಾದ ಹೆಚ್.ವಿ ಸುರೇಶಾಚಾರ್, ಎಸ್.ಎಚ್ ಕುಮಾರ್, ಜಿ.ಟಿ ಶ್ರೀನಿವಾಸ್, ಆರ್. ಕರಿಯಣ್ಣ, ಎಂ.ಸಿ ಮಹೇಂದ್ರ, ಎಚ್.ಎಂ ಹರೀಶ್, ಕೆ.ಎಚ್ ರಾಜಾನಾಯ್ಕ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ, ಕೆ.ಆರ್ ಶಂಕರ್, ಜಿ ಸುರೇಶ್, ಡಿ.ಜಿ ಸುನಿಲ್, ಮುಬಾರಕ್ ಮತ್ತು ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment