ಜಿಲ್ಲಾಧಿಕಾರಿಯಿಂದ ಚುನಾವಣಾಧಿಕಾರಿಗಳ ನೇಮಕ
ಭದ್ರಾವತಿ, ಫೆ. ೩: ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದವು. ಕಳೆದ ವಾರದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಯಾದ ನಂತರ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ. ಈ ನಡುವೆ ಫೆ.೧೪ರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಒಟ್ಟು ೩೭ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ೫ ಅಧಿಕಾರಿಗಳಿಗೆ ತಲಾ ೫ ಗ್ರಾಮ ಪಂಚಾಯಿತಿಗಳು ಮತ್ತು ೩ ಅಧಿಕಾರಿಗಳಿಗೆ ತಲಾ ೪ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸುವ ಜವಾಬ್ದಾರಿ ವಹಿಸಲಾಗಿದೆ.
ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಆನವೇರಿ, ಗುಡುಮಘಟ್ಟ ಮತ್ತು ಮಂಗೋಟೆ ಗ್ರಾ. ಪಂ.ಗಳಿಗೆ ತಾ.ಪಂ. ಸಹಾಯಕ ನಿರ್ದೇಶಕ ಚೇತನ್, ಸನ್ಯಾಸಿಕೋಡಮಗ್ಗೆ, ಆಗರದಹಳ್ಳಿ, ಯಡೇಹಳ್ಳಿ, ಅರಹತೊಳಲು ಮತ್ತು ಕಲ್ಲಿಹಾಳ್ ಗ್ರಾ.ಪಂ.ಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ ಶಶಿಧರ್, ದಾಸರಕಲ್ಲಹಳ್ಳಿ, ಮಾರಶೆಟ್ಟಿಹಳ್ಳಿ, ಅರಕೆರೆ, ಅರಬಿಳಚಿ ಮತ್ತು ನಾಗತಿಬೆಳಗಲು ಗ್ರಾ.ಪಂ.ಗಳಿಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್‌ರಾಜ್, ಕೂಡ್ಲಿಗೆರೆ, ಅತ್ತಿಗುಂದ, ಕೋಮಾರನಹಳ್ಳಿ, ತಡಸ ಮತ್ತು ದೊಣಬಘಟ್ಟ ಗ್ರಾ.ಪಂ.ಗಳಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಬಿಳಿಕಿ, ಕಾಗೇಕೋಡಮಗ್ಗೆ, ಅರಳಿಹಳ್ಳಿ, ವೀರಾಪುರ ಮತ್ತು ಕಲ್ಲಹಳ್ಳಿ ಗ್ರಾ.ಪಂ.ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯರವರನ್ನು ನೇಮಕಗೊಳಿಸಲಾಗಿದೆ.
ಅಂತರಗಂಗೆ, ದೊಡ್ಡೇರಿ, ಯರೇಹಳ್ಳಿ ಮತ್ತು ಮಾವಿನಕೆರೆ ಗ್ರಾ.ಪಂ.ಗಳಿಗೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ಬಾರಂದೂರು, ಕಂಬದಾಳು ಹೊಸೂರು, ಕಾರೇಹಳ್ಳಿ ಮತ್ತು ಅರಳಿಕೊಪ್ಪ ಗ್ರಾ.ಪಂ.ಗಳಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಹಾಗು ಸಿಂಗನಮನೆ, ಹಿರಿಯೂರು, ಮೈದೊಳಲು ಮತ್ತು ತಾವರಘಟ್ಟ ಗ್ರಾ.ಪಂ.ಗಳಿಗೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್‌ರವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ತಾಲೂಕಿನ ಪ್ರತಿಯೊಂದು ಗ್ರಾ.ಪಂ. ಸಹ ಇದೀಗ ಎಲ್ಲರ ಗಮನ ಸೆಳೆದಿವೆ.