![](https://blogger.googleusercontent.com/img/a/AVvXsEj31-QYc0BmLUftWQ3ri-fY0RlNsU-dipKAddcy8vx_WXJZ-Sk00yHCwoPX8yRxGSE4KHBUG7gYkFr4VN_GGBhacOwsSHV0TmQGlJ9JgsRlFDvYGbT3D-JtBKDLOO0WGXdM6PXJkWZgGg6Nc9j_fDAp_HDFxtk4ujCs0JuD7KfThBpQN4c7ncAFHaN7dA=w400-h195-rw)
ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ವೃಕ್ಷ ನೆಡುವ ಅಭಿಯಾನದಡಿ ಆಚರಿಸಲಾಯಿತು.
ಭದ್ರಾವತಿ, ಜೂ. ೬ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಅಗ್ನಿಶಾಮಕ ಠಾಣೆ ಸೇರಿದಂತೆ ವಿವಿಧೆಡೆ ಈ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ವೃಕ್ಷ ನೆಡುವ ಅಭಿಯಾನದಡಿ ೬೨೫ ಸಸಿಗಳ ವಿತರಣೆ :
ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ವೃಕ್ಷ ನೆಡುವ ಅಭಿಯಾನದಡಿ ಆಚರಿಸಲಾಯಿತು.
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ ಶಾಲೆ), ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್, ವಿಐಎಸ್‌ಎಲ್ ಟೆನಿಸ್ ಕ್ಲಬ್ ಮತ್ತು ಸಹಕಾರಿ ಬ್ಯಾಂಕ್ ಹಾಗು ಕಾರ್ಖಾನೆಯ ನೌಕರರು ಮತ್ತು ಕುಟುಂಬ ವರ್ಗದವರಿಗೆ ಒಟ್ಟು ೬೨೫ ಸಸಿಗಳನ್ನು ವಿತರಿಸಲಾಯಿತು.
ಇದಕ್ಕೂ ಮೊದಲು ಕಾರ್ಖಾನೆ ಆಡಳಿತ ಕಛೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಪಾಲಕ ನಿರ್ದೇಶಕ ಪರಿಸರ ಧ್ವಜಾರೋಹಣ ನೆರವೇರಿಸಿದರು. ಉಕ್ಕು ಪ್ರಾಧಿಕಾರದ ಪರಿಸರ ನೀತಿಯನ್ನು ಹಿರಿಯ ಪ್ರಬಂಧಕ ಪಾರ್ಥಸಾರಥಿ ಮಿಶ್ರ ವಾಚಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ. ಎಂ.ವೈ ಸುರೇಶ್, ಮಹಾಪ್ರಬಂಧಕ(ಸುರಕ್ಷತೆ) ಕೆ. ಹರಿಶಂಕರ್ ಮತ್ತು ಮಹಾಪ್ರಬಂಧಕ(ಎಂ.ಎಂ&ಸಿ.ಸಿ) ಎನ್.ಕೆ ಶಶಿಧರ್ ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಪರಿಸರ ಪ್ರತಿಜ್ಞೆ ಬೋಧಿಸಿದರು.
ಮಹಾಪ್ರಬಂಧಕ(ಇ.ಎಂ.ಡಿ & ಸಿ.ಈ ಪ್ಲಾಂಟ್) ಡಿ. ಲೋಕೆಶ್ವರ್ ಸ್ವಾಗತಿಸಿದರು. ಎಂ.ಜಿ.ಎಂ(ವಿಜಿಲೆನ್ಸ್) ಎಲ್. ಕುತಲನಾಥನ್ ನಿರೂಪಿಸಿದರು.
ಎಸ್‌ಎವಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಸ್. ಹರಿಣಾಕ್ಷಿ ಮತ್ತು ಮುಖ್ಯೋಪಾಧ್ಯಾಯಿನಿ ಅನುರಾಧ ಹಾಗು ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹಾಲಿಂಗಪ್ಪ, ಅಧ್ಯಾಪಕ ಗುರುಮೂರ್ತಿ ಸೇರಿದಂತೆ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಅಗ್ನಿಶಾಮಕ ಠಾಣೆಯಲ್ಲಿ ವಿಶ್ವ ಪರಿಸರ ದಿನ :
ನಗರದ ಬೈಪಾಸ್ ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ಠಾಣಾಧಿಕಾರಿ ವಸಂತಕುಮಾರ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಪ್ರಮುಖ ಅಗ್ನಿಶಾಮಕ ಬಾಬು ಎಸ್ ಗೌಡ, ಅಗ್ನಿಶಾಮಕ ಚಾಲಕ ಜಿ.ಟಿ ಶ್ರೀನಿವಾಸ್, ಅಗ್ನಿಶಾಮಕರಾದಂತಹ ವಿನೂತನ್, ಕರಿಯಣ್ಣ, ಹರೀಶ್, ರಾಜ ನಾಯ್ಕ್, ಹೊಸಳ್ಳಿ ತಿಪ್ಪೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿರುವ ನವಚೇತನ ಮತ್ತು ದಿವ್ಯ ವಿದ್ಯಾಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ನವಚೇತನ ಹಾಗು ದಿವ್ಯ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನ :
ನಗರದ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿರುವ ನವಚೇತನ ಮತ್ತು ದಿವ್ಯ ವಿದ್ಯಾಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ಜಾಗೃತಿ ಮೂಡಿಸುವ ಘೋಷವಾಕ್ಯಗಳನ್ನೊಳಗೊಂಡ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಕಡದಕಟ್ಟೆ, ಭಂಡಾರಹಳ್ಳಿ, ಐಟಿಐ ಸೇರಿದಂತೆ ಇನ್ನಿತರ ಮಾರ್ಗಗಳಲ್ಲಿ ಜಾಥಾ ನಡೆಸಿದರು. ನಂತರ ಶಾಲಾ ಕೈತೋಟದಲ್ಲಿ ಸಸಿಗಳನ್ನು ನೆಡಲಾಯಿತು. ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು,ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಭದ್ರಾವತಿಯಲ್ಲಿ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಯಲ್ಲಿರುವ ಗೌಸಿಯಾ ಈದ್‌ಗಾಹ್ ಮತ್ತು ಕಬರಸ್ತಾನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಕಬರ್‌ಸ್ತಾನದಲ್ಲಿ ವಿಶ್ವ ಪರಿಸರ ದಿನ :
ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಯಲ್ಲಿರುವ ಗೌಸಿಯಾ ಈದ್‌ಗಾಹ್ ಮತ್ತು ಕಬರಸ್ತಾನದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೆ.ಬಿ.ಟಿ ಬಾಬು ಹಾಗು ಕಬರಸ್ತಾನ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.