ಭದ್ರಾವತಿ ನಗರದ ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಭದ್ರಾವತಿ : ನಗರದ ಹಿಂದೂಪರ ಕಾರ್ಯಕರ್ತರ ತಂಡ ಉತ್ತರ ಪ್ರದೇಶ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಪ್ರಸ್ತುತ ದೇಶದಲ್ಲಿ ಕುಂಭಮೇಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಕುಂಭಮೇಳ ಕುರಿತು ಹಲವು ರೀತಿ ವಿಭಿನ್ನ ಹೇಳಿಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಪ್ರಯಾಗ್ ರಾಜ್ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದುತ್ವ ಹಾಗೂ ಸನಾತನ ಧರ್ಮಕ್ಕೆ ಕುಂಭ ಮೇಳ ಕೊಡುಗೆ ಅಪಾರವಾಗಿದೆ. 144 ವರ್ಷಗಳ ಬಳಿಕ ಬಂದಿರುವ ಮಹಾ ಕುಂಭಮೇಳ ಹಿಂದುತ್ವ ಸನಾತನ ಪರಂಪರೆಯನ್ನು ಎತ್ತಿ ಸಾರುತ್ತಿದೆ ಎಂದು ತಿಳಿಸಿದ್ದಾರೆ.
ಹಿಂದೂಪರ ಕಾರ್ಯಕರ್ತರಾದ ರುದ್ರೇಶ್, ಕಿರಣ್, ಗಂಗಾಧರ್, ನವೀನ ಹಾಗೂ ಸೋಮ ಸೇರಿದಂತೆ ಇನ್ನಿತರರು ತಂಡದಲ್ಲಿ ಪಾಲ್ಗೊಂಡಿದ್ದಾರೆ.