ವಸತಿ ಶಾಲೆಯ ಪಿ. ಸಿಂಚನ ೬೨೦, ಎ.ಪಿ ಅಭಿಷೇಕ್ ೬೧೯ ಅಂಕ : ಎ.ಕೆ ನಾಗೇಂದ್ರಪ್ಪ
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ
ಭದ್ರಾವತಿ : ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು ೪,೦೩೮ ವಿದ್ಯಾರ್ಥಿಗಳು ಹಾಜರಿದ್ದು, ಈ ಪೈಕಿ ೩,೧೧೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕಿಗೆ ಶೇ.೭೭.೦೨ ಫಲಿತಾಂಶ ಲಭಿಸಿದ್ದು, ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದ್ದಾರೆ.
ಕಳೆದ ಬಾರಿ ಜಿಲ್ಲೆಯಲ್ಲಿ ೭ನೇ ಸ್ಥಾನ ಪಡೆದುಕೊಳ್ಳಲಾಗಿದ್ದು, ಈ ಬಾರಿ ೬ನೇ ಸ್ಥಾನ ಲಭಿಸಿದೆ. ಈ ಬಾರಿ ಒಟ್ಟು ೯೨೮ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ತಾಲೂಕಿನಲ್ಲಿ ಒಟ್ಟು ೧೧೨ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ.
ನಗರಸಭೆ ವ್ಯಾಪ್ತಿಯ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಸಿ. ಮಾನ್ಯ, ಲೋಯರ್ ಹುತ್ತಾ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ನೂರ್ ತೈಬಾ, ಪ್ರೇಕ್ಷಾ ಎಸ್. ಖಾಡ್ಗಡ್, ಸಾನಿಕಾ ಪಿ. ದೇವಾಂಗಮಠ್ ಮತ್ತು ಬಿ.ಎಸ್ ನಾಗಶ್ರೀ ೬೨೫ಕ್ಕೆ ೬೨೧ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಪೂರ್ಣಪ್ರಜ್ಞ ವಿದ್ಯಾಂಸ್ಥೆಯ ಪ್ರತೀಶ್ ಬಡಿಗೇರ್ ಮತ್ತು ನಿಕ್ಷಿತ್ ಎನ್. ರಾಜ್ ೬೨೦ ಅಂಕ ಪಡೆದಿದ್ದು, ಉಳಿದಂತೆ ಸರ್ಕಾರಿ ಶಾಲೆಗಳ ಪೈಕಿ ತಾಲೂಕಿನ ಕನಸಿಕಟ್ಟೆ ಅಂಬೇಡ್ಕರ್ ವಸತಿ ಶಾಲೆಯ ಪಿ. ಸಿಂಚನ ೬೨೦ ಅಂಕ, ದೊಡ್ಡೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎ.ಪಿ ಅಭಿಷೇಕ ೬೧೯ ಅಂಕ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪಿ. ಪ್ರತೀಕ್ಷಾ ೬೦೮ ಅಂಕ, ಸನ್ಯಾಸಿ ಕೋಡಮಗ್ಗಿ ಸರ್ಕಾರಿ ಪ್ರೌಢಶಾಲೆಯ ಡಿ.ಆರ್ ಕೃತಿಕ ೬೦೨ ಮತ್ತು ಅಂತರಗಂಗೆ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಂ ರಕ್ಷಾ ೬೦೦ ಅಂಕ ಪಡೆದುಕೊಂಡಿದ್ದಾರೆ ಎಂದರು.
ಪ್ರತಿ ವಿಷಯದಲ್ಲಿ ಕನ್ನಡ ೯೩, ಸಂಸ್ಕೃತ ೮, ಆಂಗ್ಲ ೨೯, ಹಿಂದಿ ೧೩೮, ಗಣಿತ ೧೭, ವಿಜ್ಞಾನ ೧೭ ಮತ್ತು ಸಮಾಜ ವಿಜ್ಞಾನ ೪೩ ವಿದ್ಯಾರ್ಥಿ ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ. ವಿಶೇಷ ಎಂದರೆ ಈ ಬಾರಿ ಜಿಲ್ಲೆಯಲ್ಲಿಯೇ ಪ್ರಥಮ ತಾಲೂಕಿನ ೧೭ ಪ್ರೌಢಶಾಲೆಗಳು ಶೇ.೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದರು.