ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ
ಭದ್ರಾವತಿ, ಮೇ. ೨೦: ಆರ್ಥಿಕವಾಗಿ ಹಿಂದುಳಿದ ಬಲಿಜ ಸಮಾಜದ ಕಡುಬಡವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಸಮಾಜದವರು ಅರಿಶಿನ-ಕುಂಕುಮ, ಬಳೆ, ಹೂ ಮಾರಾಟ ಸೇರಿದಂತೆ ಸಣ್ಣ ಸಣ್ಣ ಕಸಬುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಡುಬಡವರ ಸಂಕಷ್ಟಕ್ಕೆ ಸ್ಪಂದಿಸಿ ೫ ಸಾವಿರ ರು. ನೆರವು ಘೋಷಿಸಿದ್ದಾರೆ. ಇದೆ ರೀತಿಯಲ್ಲಿ ಬಲಿಜ ಸಮಾಜದವರ ನೆರವಿಗೆ ಮುಂದಾಗುವಂತೆ ಕೋರಲಾಗಿದೆ.
No comments:
Post a Comment