ಭದ್ರಾವತಿ, ಜೂ. ೨೦: ವಾಸದ ಮನೆಯೊಂದರ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಹೊಸಮನೆ ಹನುಮಂತ ನಗರದ ನಿವಾಸಿ ಚಿನ್ನರಾಜು ಹಾಗೂ ಈತನ ಪತ್ನಿ ಮುನಿಯಮ್ಮ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಪೊಲೀಸರ ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ೧೦೫೦ ರು. ಮೌಲ್ಯದ ೨ ಲೀ ೭೦೦ ಎಂ.ಎಲ್ ಪ್ರಮಾಣದ ೯೦ ಎಂ.ಎಲ್‌ನ ಹೇವರ್ಡ್ಸ್ ಚೀರ‍್ಸ್ ವಿಸ್ಕಿ ೩೦ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment