ಭದ್ರಾವತಿ ಬಿ.ಎಚ್ ರಸ್ತೆ ಬಾರಂದೂರು ಚೆಕ್ ಪೋಸ್ಟ್ ಬಳಿ ಹಾಳಾದ ರಸ್ತೆಯನ್ನು ಕಾಗದನಗರ ಠಾಣೆ ಪೊಲೀಸರು ದುರಸ್ತಿ ಪಡಿಸುತ್ತಿರುವುದು.
ಭದ್ರಾವತಿ, ಸೆ. ೧೩: ರಸ್ತೆಗಳು ಹಾಳಾದ್ದಲ್ಲಿ ಅವುಗಳನ್ನು ಸಂಬಂಧಿಸಿದ ಇಲಾಖೆಗಳೇ ಬಂದು ದುರಸ್ತಿಪಡಿಸಬೇಕೆಂಬ ಧೋರಣೆ ಹೊಂದಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಕಾಳಜಿ ಹೊಂದಿ ಪೊಲೀಸರೇ ರಸ್ತೆ ದುರಸ್ತಿ ಕಾರ್ಯಗೊಂಡು ಗಮನ ಸೆಳೆದಿರುವ ಘಟನೆ ನಡೆದಿದೆ.
ನಗರದ ಬಿ.ಎಚ್ ರಸ್ತೆ ಬಾರಂದೂರು ಚೆಕ್ ಪೋಸ್ಟ್ ಬಳಿ ರಸ್ತೆ ಹಾಳಾಗಿದ್ದು, ಈ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ ಯಾರು ಸಹ ರಸ್ತೆಯನ್ನು ದುರಸ್ತಿ ಪಡಿಸುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಅಪಘಾತಗಳು ನಡೆದಾಗ ಸಂಬಂಧಿಸಿದ ಇಲಾಖೆಗಳನ್ನು ದೂರುತ್ತಾರೆ.
ಈ ಭಾಗ ಕಾಗದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿನ್ನಲೆಯಲ್ಲಿ ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಾದ ಮಹೇಶ್, ಅಶೋಕ್, ನಟರಾಜ್, ಮೋಹನ್ ಮತ್ತು ವೆಂಕಟೇಶ್ ಇವರುಗಳು ರಸ್ತೆ ದುರಸ್ತಿ ಕೈಗೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
No comments:
Post a Comment