ಭದ್ರಾವತಿ, ಸೆ. ೭: ಭಾರತೀಯ ಜನತಾಪಕ್ಷದ ಎಸ್.ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೆ.೮ರಂದು ತಾಲೂಕಿಗೆ ಆಗಮಿಸುತ್ತಿದ್ದು, ಸಂಜೆ ೬ ಗಂಟೆಗೆ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಎಸ್.ಸಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಇದಕ್ಕೂ ಮೊದಲು ತಾಲೂಕಿನ ಕೂಡ್ಲಿಗೆರೆ ಕಲ್ಪನಹಳ್ಳಿ ಗ್ರಾಮದಲ್ಲಿ ಸಂಜೆ ೪ ಗಂಟೆ ನಡೆಯಲಿರುವ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಎಸ್.ಸಿ ಮುಖಂಡರು ಪಾಲ್ಗೊಳ್ಳುವಂತೆ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಕೋರಿದ್ದಾರೆ.
No comments:
Post a Comment