ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆಯನ್ನು ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ, ಪಿ. ಗಣೇಶ್‌ರಾವ್, ರೇಖಾ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೪: ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಕುಂದು-ಕೊರತೆಗಳ ಸಭೆ ಭಾನುವಾರ ನಡೆಯಿತು.
ಬಿಜೆಪಿ ಪಕ್ಷದ ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಸೂಡಾ ಸದಸ್ಯ ದೇವರಾಜ್ ಮಣ್ಣಿನಕೊಪ್ಪ ಸಂಘದ ಕುಂದು ಕೊರತೆ ಆಲಿಸುವ ಜೊತೆಗೆ ಪ್ರಸ್ತುತ ಸಂಘದ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಡಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಡಾ. ಪುಷ್ಪಲತಾ, ಸುಶೀಲಮ್ಮ, ಮೋಚಿಗಾರ ಜನಾಂಗದ ಮಹಿಳೆಯರ ಸಂಘದ ಅಧ್ಯಕ್ಷೆ ರೇಖಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment