ವಂಚನೆಗೊಳಗಾದ ರುದ್ರೇಶ್ ಕುಟುಂಬದಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ
ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಹಾಗು ಅವರ ಅಜ್ಜಿಯವರಿಗೆ ದತ್ತಕ ಪತ್ರದ ಮೂಲಕ ಬಂದಂತಹ ವ್ಯವಸಾಯದ ಸ್ವತ್ತುಗಳು ಮತ್ತು ನಿವೇಶನ ಹಾಗು ಮನೆಯ ಸ್ವತ್ತುಗಳನ್ನು ಎಂ.ಎಸ್ ಶಿವಕುಮಾರ್ ಮತ್ತು ಈತನ ಪತ್ನಿ ಎಸ್. ಸುಮಾರವರು ಕಬಳಿಸಲು ಅಕ್ರಮ ದಾರಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದು ಆಸ್ತಿ ಹಕ್ಕನ್ನು ಖಾತ್ರಿಪಡಿಸಲಾಗಿದೆ. ಈ ನಡುವೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಚಾಲ್ತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ವಂಚಿಸಲಾಗುತ್ತಿದೆ ಎಂದು ಧರಣಿ ಸತ್ಯಾಗ್ರಹ ಕೈಗೊಂಡಿರುವ ರುದ್ರೇಶ್ ಕುಟುಂಬದವರು ಆರೋಪಿಸಿದರು.
ಶಿವಕುಮಾರ್ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಸೆಸ್‌ಮೆಂಟ್ ರಿಜಿಸ್ಟರ್‌ನಲ್ಲಿ ಸ್ವ ಹಸ್ತದಿಂದ ಬರೆದುಕೊಂಡು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದು, ಇದು ತನಿಖೆಯಿಂದ ದೃಢಪಟ್ಟಿರುವುದರಿಂದ ಈ ಸಂಬಂಧ ಖಾತೆಯು ದೃಢೀಕೃತವಾದುದ್ದಲ್ಲ ಹಾಗು ಎಂ.ಆರ್.ನಂ. ದಾಖಲು ಆಗಿರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಂಬರಹ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತಕ್ಷಣ ಸರ್ಕಾರಿ ಕಛೇರಿ ಹಾಗು ಅಧಿಕಾರಿಗಳಿಗೆ ವಂಚಿಸಿರುವ ಶಿವಕುಮಾರ್ ಮತ್ತು ಆತನ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಖಾತೆ ರದ್ದುಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಯಿತು.
ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ ವೀರೇಶ್, ಹಿರಯಣ್ಣಯ್ಯ, ನಾಗರಾಜ್, ಬಸವರಾಜ, ರುದ್ರೇಶ್‌ರವರ ತಾಯಿ ಗಂಗಮ್ಮ, ಮುಖಂಡರಾದ ಬಿ.ಎನ್ ರಾಜು, ಬಿ.ವಿ ಗಿರೀಶ್, ಕೆ. ಮಂಜುನಾಥ್ ಹಾಗು ಡಿ.ಬಿ ಹಳ್ಳಿ ಗ್ರಾಮದ ಪ್ರಮುಖರು ಸೇರಿದಂತೆ ಇತರರು ಧರಣಿ ಸತ್ಯಾಗ್ರಹದಲ್ಲಿ ನೈತಿಕ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.
No comments:
Post a Comment