ಶುಕ್ರವಾರ, ನವೆಂಬರ್ 20, 2020

ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಗ್ರಹ.

ರಾಜು ಆರ್ ದೊಂಬಿದಾಸ

ಭದ್ರಾವತಿ, ಅ. ೨೦: ರಾಜ್ಯದಲ್ಲಿರುವ ದೊಂಬಿದಾಸ ಜನಾಂಗದ ಅಭಿವೃದ್ಧಿಗಾಗಿ ದೊಂಬಿದಾಸ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವಸೇನೆ ರಾಜ್ಯಾಧ್ಯಕ್ಷ ರಾಜು ಅರ್ ದೊಂಬಿದಾಸ ಅಗ್ರಹಿಸಿದ್ದಾರೆ.
ದೊಂಬಿದಾಸ ಜನಾಂಗದ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗದ ದೃಷ್ಟಿಯಿಂದ ನಿಗಮ ಸ್ಥಾಪಿಸಿ ಅನುದಾನದ ಮೀಸಲಿಡಬೇಕು. ಅರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

5 ಕಾಮೆಂಟ್‌ಗಳು:

  1. ಅಲೆಮಾರಿ ಸಮುದಾಯವಾದ ದೊಂಬಿದಾಸ ಜನಾಂಗದ ಕೂಗಿನ ಬಗ್ಗೆ ಕನ್ನಡ ಪ್ರಭದಲ್ಲಿ ಬರೆದು ಜನಾಂಗದ ಪರವಾಗಿ ಸಂಪದಕರಿಗೆ ಮತ್ತು ಮಾದ್ಯಮ ಮಿತ್ರರಿಗೆ ವಂದನೆಗಳು

    ಪ್ರತ್ಯುತ್ತರಅಳಿಸಿ
  2. ಕರ್ನಾಟಕ ರಾಜ್ಯ ಅಲೆಮಾರಿ ದೊಂಬಿದಾಸ ಯುವ ಸೇನೆ ವತಿಯಿಂದ ಆರ್ ರಾಜು ರಾಜ್ಯದ್ಯಕ್ಷರು ನಿಗಮ ಮಾಡುವುದನ್ನು ಆಗ್ರಹಿಸುವುದು ಸ್ವಾಗತಾರ್ಹ..
    ಸಂವಿಧಾನಬದ್ಧವಾಗಿ ನಿಗಮಗಳು ಮಾಡುವ ಉದ್ದೇಶ.. ಸಂವಿಧಾನದ ಅನುಕೂಲಗಳಿಂದ ವಂಚಿತರಾದ ತುಂಬಾ ಹಿಂದುಳಿದ ಆದಿವಾಸಿ ಅಲೆಮಾರಿ ಜನರಿಗೋಸ್ಕರ...DD balaga KR & R...

    ಪ್ರತ್ಯುತ್ತರಅಳಿಸಿ
  3. ಸಮಾಜದಲ್ಲಿ ಬಹುಸಂಖ್ಯಾತರಿಗೆ.. ನಿಗಮಗಳನ್ನು ಮಾಡುವುದರಿಂದ.. ಅಲ್ಪಸಂಖ್ಯಾತರಿಗೆ ವಂಚನೆಆಗುವುದಿಲ್ಲವೇ..?..?.. ಇದು ಸಂವಿಧಾನದ ವಿರೋಧವಲ್ಲ ವೇ... ಸಂವಿಧಾನ ಶಿಲ್ಪಿ ಡಾಕ್ಟರ್ ಅಂಬೇಡ್ಕರ್ ರವರು. ಕಂಡ ಕನಸು ನುಚ್ಚುನೂರು ಮಾಡುತ್ತಿರುವಿರಲ್ಲವೇ..?.. ಇದು ಸಂವಿಧಾನದ ನಿಯಮಗಳಿಗೆ ವಿರೋಧವಲ್ಲವೇ..?.. ನೀವು ಇದೇ ರೀತಿ ಬಹು ಸಂಖ್ಯಾತರೇಲ್ಲರೂ ಸೇರಿ.. ನಿಗಮಗಳನ್ನು ಮಾಡುತ್ತಾ ಹೋದರೆ .?.?.. ಅಲ್ಪಸಂಖ್ಯಾತರಾದ ನಮ್ಮದೊಂಬಿದಾಸ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ವೇ.. ನಮ್ಮಂತ ಅಲ್ಪಸಂಖ್ಯಾತ ನೂರಾರು ಕುಲ ಸಮುದಾಯಗಳು ಇಲ್ಲವೇ..?... ಮೊದಲು ಅವುಗಳಿಗೆ ನ್ಯಾಯ ಒದಗಿಸಿ.. ತದನಂತರ ನಿಮ್ಮ ನಿಗಮಗಳನ್ನು ಸ್ಥಾಪಿಸಿ ಸುರ ಸಾಮ್ರಾಜ್ಯವನ್ನೇ ಮೆರೆಯಿರಿ..!!!.. ಸಂವಿಧಾನದ ಮೂಲ ಉದ್ದೇಶ ಗೊತ್ತಿಲ್ಲವೇ...ಸಂವಿಧಾನದ ಮೂಲ ಉದ್ದೇಶಗಳನ್ನು ನೀವು ಗಾಳಿಗೆ ತೂರುತ್ತಿರುವಿರಲ್ಲ... ನಿಮ್ಮ ಸುರ ಅಸುರ ಸಾಮ್ರಾಜ್ಯವನ್ನು ಹೇಗೆ ಬೇಕಾದರೂ ಸ್ಥಾಪಿಸಿ.. ನಮಗೆ ಅದರ ಅವಶ್ಯಕತೆ ಇಲ್ಲ... ಸಂವಿಧಾನಬದ್ಧವಾಗಿ ನಮಗೆ ಬೇಕಾಗುವ... ಎಸ್ಟಿ ಕೋಟದಲ್ಲಿ ಊರೂರು ಅಲೆವ ದೊಂಬಿದಾಸ. ..ಆದಿವಾಸಿಗಳನ್ನು. ಅಲೆಮಾರಿಗಳನ್ನು.. ಸೇರಿಸಿ..

    ಪ್ರತ್ಯುತ್ತರಅಳಿಸಿ
  4. ನಿಗಮಗಳನ್ನುಮಾಡುವ ಮೂಲ ಉದ್ದೇಶ.. ಸಂವಿಧಾನ ಜಾರಿಯಾದ ಕಾಲದಲ್ಲಿ ಸಂವಿಧಾನಬದ್ಧವಾಗಿ ಯಾರಿಗೆ ಹಕ್ಕುಗಳು ಸಿಕ್ಕಿಲ್ಲವೋ.. ಯಾರು ಹಕ್ಕುಗಳಿಂದ ವಂಚಿತರಾಗಿದ್ದಾರೆ.. ಅಂತವರಿಗೆ ತಾತ್ಕಾಲಿಕವಾಗಿ ನಿಗಮಗಳನ್ನು ಸ್ಥಾಪಿಸಿ.... ಅವರ ಕುಲಶಾಸ್ತ್ರೀಯ ಅಧ್ಯಯನಗಳನ್ನು ವಿಶ್ವವಿದ್ಯಾಲಯಗಳಿಂದ ಮಾಡಿಸಿ... ಸರಿ-ತಪ್ಪುಗಳನ್ನು.. ವಿಂಗಡಿಸಿ.. ವಂಚಿತರಾದವರಿಗೆ... ಅರ್ಹರಿಗೆ... ಶೋಷಿತರಿಗೆ... ಅಲೆಮಾರಿಗಳಿಗೆ.. ಬಿಕಾರಿಗಳಿಗೆ.. ಸಂವಿಧಾನಬದ್ಧವಾಗಿ ಅವರನ್ನು ಎಸ್ಸಿ ಗೋ ಎಸ್ ಟಿ ಗೋ ಬಹುಬೇಗನೇ ಸೇರಿಸುವ ಉದ್ದೇಶ.... ಇಂಥ ಮೂಲ ಉದ್ದೇಶಗಳನ್ನ ಮರೆತು.. ಸಂವಿಧಾನದ ಮಹಾಶಿಲ್ಪಿ ಅಂಬೇಡ್ಕರ್ ಅವರ ಮಹಾ ಕನಸನ್ನು ನುಚ್ಚುನೂರು ಮಾಡುತ್ತಾ... ಬಹುಸಂಖ್ಯಾತರಿಗೆ ನಿಗಮಗಳನ್ನು ಮಾಡುತ್ತಾ ಹೋದರೆ.. ಇನ್ನೂ ನ್ಯಾಯಾಲಯಗಳು ಏಕೆ ಬೇಕು... ನಮ್ಮ ಸಂವಿಧಾನ ಏಕೆ ಬೇಕು... ಇದನ್ನು ಕೇಳುವ ಮಾಧ್ಯಮಗಳು ಎಲ್ಲಿ ಹೋದವು... ಇದನ್ನು ಪ್ರಶ್ನೆ ಮಾಡುವ ಮಹಾನುಭಾವರು ಎಲ್ಲಿ ಹೋದರು... ಕಾಟಾಚಾರಕ್ಕೆ ಸಂವಿಧಾನ ಎಂದು ಹೇಳುವ..ಅಳಿಸಿಕೋಳುವ ಸಕಾ೯ರಗಳು..ಇದ್ದರು..ಒಂದೇ..ಸಾತ್ತಾರು..ಒಂದೇ..

    ಪ್ರತ್ಯುತ್ತರಅಳಿಸಿ
  5. Super Sir nima aalochane olleyada Agali nivu maduva prayathna nimage yessasu tharali god blessesyour Raju sir

    ಪ್ರತ್ಯುತ್ತರಅಳಿಸಿ