ಭದ್ರಾವತಿ ಜನ್ನಾಪುರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಕೋವಿಡ್-೧೯ ಗಂಟಲು ಮಾದರಿ ಸಂಗ್ರಹಿಸುತ್ತಿರುವುದು.
ಭದ್ರಾವತಿ, ಮೇ. ೮: ತಾಲೂಕಿನಲ್ಲಿ ಶನಿವಾರ ಒಟ್ಟು ೩೮ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದುವರೆಗೂ ಒಟ್ಟು ೪೦ ಮಂದಿ ಮೃತಪಟ್ಟಿದ್ದಾರೆ.
ಒಟ್ಟು ೧೮೦ ಮಂದಿಯ ಗಂಟಲು ಮಾದರಿ ಸಂಗ್ರಹಿಸಲಾಗಿದ್ದು, ೪೯ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ತೆರಳಿದ್ದಾರೆ. ಡಿಸಿಎಚ್‌ಸಿಯಲ್ಲಿ ೨೭, ಕೋವಿಡ್ ನಿಗಾ ಘಟಕದಲ್ಲಿ ೮, ಖಾಸಗಿ ಆಸ್ಪತ್ರೆಯಲ್ಲಿ ೮ ಹಾಗು ಮನೆಗಳಲ್ಲಿ ೨೫ ಮತ್ತು ಟ್ರಾನ್‌ಸಿಟ್ ಟು ಟ್ರೈಏಜ್ ನಲ್ಲಿ ೨೦ ಸೇರಿದಂತೆ ಒಟ್ಟು ೮೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಆತಂಕ ಕಂಡು ಬರುತ್ತಿದ್ದು, ಈ ನಡುವೆ ಕಳೆದ ೩ ದಿನಗಳ ಹಿಂದೆ ಸೋಂಕಿತರ ಸಂಖ್ಯೆ ಒಂದೇ ದಿನ ೨೬೦ಕ್ಕೆ ತಲುಪಿದ್ದು, ಪುನಃ ಏರಿಕೆ ಮತ್ತು ಇಳಿಕೆ ಕಂಡು ಬರುತ್ತಿದೆ. ಈ ನಡುವೆ ಗಂಟಲು ಮಾದರಿ ನೀಡಲು ಬರುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ.
No comments:
Post a Comment