ಭದ್ರಾವತಿ, ಸೆ. ೩: ತಾಲೂಕಿನಲ್ಲಿ ಕೋವಿಡ್-೧೯ ಸೋಂಕು ಪುನಃ ಹೆಚ್ಚಳವಾಗುತ್ತಿದ್ದು, ಶುಕ್ರವಾರ ಸೋಂಕಿನ ಪ್ರಮಾಣ ೫ಕ್ಕೆ ಏರಿಕೆಯಾಗಿದೆ.
ಗುರುವಾರ ಕೇವಲ ೨ ಸೋಂಕು ಪತ್ತೆಯಾಗಿತ್ತು. ಒಂದೇ ದಿನ ೩ಕ್ಕೆ ಏರಿಕೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೩ ಹಾಗು ನಗರ ಭಾಗದಲ್ಲಿ ೨ ಸೋಂಕು ಪತ್ತೆಯಾಗಿದೆ. ಸೆ.೧ರಂದು ದಾಖಲೆಯ ೧೦೧೦ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಇದುವರೆಗೂ ೨೬೦ ಮಂದಿ ಮೃತಪಟ್ಟಿದ್ದಾರೆ.
No comments:
Post a Comment