Tuesday, February 8, 2022

ಆರೋಗ್ಯ ರಕ್ಷಣೆಗೆ ಯೋಗಾಸನ, ಸೂರ್ಯ ನಮಸ್ಕಾರ ಸಹಕಾರಿ : ಡಾ. ಸೆಲ್ವರಾಜ್

ಭದ್ರಾವತಿಯಲ್ಲಿ ಶುಗರ್ ಟೌನ್ ಲಯನ್ಸ್ ಕ್ಲಬ್, ಲಯನ್ಸ್ ಯೋಗ ಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ರಥಸಪ್ತಮಿ ಅಂಗವಾಗಿ  ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
    ಭದ್ರಾವತಿ, ಫೆ. ೮: ಯೋಗಾಸನ ಮತ್ತು ಸೂರ್ಯ ನಮಸ್ಕಾರ ಅವುಗಳದ್ದೇ ಆದ ವೈದ್ಯಕೀಯ ಹಿನ್ನಲೆ ಹೊಂದಿವೆ ಎಂದು ವೈದ್ಯ ಡಾ. ಸೆಲ್ವರಾಜ್ ಹೇಳಿದರು.
    ಅವರು ಶುಗರ್ ಟೌನ್ ಲಯನ್ಸ್ ಕ್ಲಬ್, ಲಯನ್ಸ್ ಯೋಗ ಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ನ್ಯೂಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ರಥಸಪ್ತಮಿ ಅಂಗವಾಗಿ ಏರ್ಪಡಿಸಲಾಗಿದ್ದ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.  
    ನಮ್ಮ ಆರೋಗ್ಯ ರಕ್ಷಣೆಗೆ ಯೋಗಾಸನ ಮತ್ತು ಸೂರ್ಯ ನಮಸ್ಕಾರ ಸಹಕಾರಿಯಾಗಿವೆ. ಯೋಗಾಸನ ಮಾಡುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಅದನ್ನು ನಿರಂತರವಾಗಿ ಮಾಡಬೇಕು ಎನ್ನುವ ಮನೋಭಾವ ಬೆಳೆಯುವ ಜೊತೆಗೆ ಸೋಮಾರಿತನ ದೂರವಾಗುತ್ತದೆ. ಯೋಗಾಸನ ಮತ್ತು ಸೂರ್ಯ ನಮಸ್ಕಾರಕ್ಕೆ ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಇದರಲ್ಲಿ ತೊಡಗಿಸಿಕೊಳ್ಳಬಹುದಾಗಿದ್ದು,  ಯಾವ ವ್ಯಕ್ತಿ ನಿರಂತರ ಚಟುವಟಿಕೆಯಲ್ಲಿ ಇರುತ್ತಾನೋ ಆತನಿಗೆ ಮಾತ್ರ ಎಲ್ಲಾ ರೀತಿಯ ಕಾರ್ಯಗಳನ್ನು ಮಾಡಲು ಸಮಯ ಇರುತ್ತದೆ. ಆದರೆ ಬೇರೆಯವರಿಗೆ ಸಮಯ ಇಲ್ಲ ಎನ್ನುವುದು ಕೇವಲ ನೆಪ ಮಾತ್ರ ಎಂದರು.  
    ನಿತ್ಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಸತೀಶ್, ಸಂಧ್ಯಾ ಸೆಲ್ವರಾಜ್, ಜಯಮಾಲ ಪೈ, ಮಲ್ಲಿಕಾರ್ಜುನ್, ತಮ್ಮೇಗೌಡ, ಯೋಗೀಶ್, ಸತ್ಯಣ್ಣ. ಮಹೇಶ್, ಪ್ರದೀಪ್, ಲಿಂಗೋಜಿ, ರಶ್ಮಿ, ಲತಾ ಪಿ ಮೋರೆ, ಸಾವಿತ್ರಿ, ಸುಧಾ, ಕೃಷ್ಣಮೂರ್ತಿ ಹಾಗು ಲಯನ್ಸ್ ಮತ್ತು  ಪತಂಜಲಿ ಯೋಗ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment