ಭದ್ರಾವತಿ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ದುರಸ್ತಿ ಮಾಡುವಾಗ ಕಾರ್ಮಿಕ ಸೆಂದಿಲ್‌ಕುಮಾರ್ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಭದ್ರಾವತಿ, ಮೇ. ೨೯: ನಗರದ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವು ಕಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಬಸವನಗುಡಿ ನಿವಾಸಿ ಸೆಂದಿಲ್‌ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದು, ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳನ್ನು ಮಿಕ್ಸರ್ ಮಾಡುವ ಯಂತ್ರವನ್ನು ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ರಾತ್ರಿ ಸುಮಾರು ೧೨.೩೦ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸೆಂದಿಲ್‌ಕುಮಾರ್‌ರವರ ದೇಹ ಯಂತ್ರಕ್ಕೆ ಸಿಲುಕಿ ಕಾಲು, ಕೈ ಹಾಗು ಹೊಟ್ಟೆ ಭಾಗ ಜಜ್ಜಿ ಹೋಗಿದೆ. ತಕ್ಷಣ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿದ್ದಾದರೂ ಯಾವುದೇ ಫಲಕಾರಿಯಾಗಲಿಲ್ಲ. ಈ ಸಂಬಂಧ ಸೆಂದಿಲ್‌ಕುಮಾರ್‌ರವರ ಪತ್ನಿ ಶಾಂತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.
No comments:
Post a Comment