ಸೈಲ್ ಸ್ವರ್ಣ ಜಯಂತಿ ಲಾಂಛನ
ಭದ್ರಾವತಿ, ಮೇ. ೨೮ : ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಭಾರತೀಯ ಉಕ್ಕು ಪ್ರಾಧಿಕಾರ) ೨೪ನೇ ಜನವರಿ, ೧೯೭೩ ರಂದು ಆರಂಭಗೊಂಡಿದ್ದು, ತನ್ನ ೫೦ನೇ ವರ್ಷಾಚರಣೆ ಸೈಲ್ ಸ್ವರ್ಣ ಜಯಂತಿ ಅಂಗವಾಗಿ 'ಕಳೆದ ಐದು ದಶಕಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸೈಲ್‌ನ ಕೊಡುಗೆ'.ಎಂಬ ವಿಷಯ ಕುರಿತು ದ್ವಿಭಾಷಾ ಕಥೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ.
ಈ ಸ್ಪರ್ಧೆಯು ಸೃಜನಶೀಲತೆ ಮತ್ತು ಬರವಣಿಗೆ ಕೌಶಲ್ಯವನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು, ಸ್ಪರ್ಧೆಯ ವಿವರಗಳು ಕಂಪನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಅದರ ವೆಬ್‌ಸೈಟ್ www.sail.co.in ನಲ್ಲಿ ಲಭ್ಯವಿದೆ. ಆ.೨೫ ಇಮೇಲ್ ಮೂಲಕ ಸ್ಪರ್ಧೆಗೆ ನಮೂದುಗಳನ್ನು ಸ್ವೀಕರಿಸುವ ಕೊನೆಯ ದಿನವಾಗಿದ್ದು, ಆದರೆ ಕರಡು ಪ್ರತಿಗಳನ್ನು ಆ. ೩೧ರವರೆಗೆ ಸ್ವೀಕರಿಸಲಾಗುತ್ತದೆ. ಪ್ರತಿ ನಮೂದನ್ನು sailstory2022@gmail.com ಮತ್ತು ಪೋಸ್ಟ್ (ಕರಡು ಪ್ರತಿ) ಎರಡೂ ಇಮೇಲ್ ಮೂಲಕ ಸಲ್ಲಿಸಬೇಕು. ವಿಜೇತರನ್ನು ಸೈಲ್‌ನ ಮೇಲೆ ತಿಳಿಸಲಾದ ವೆಬ್‌ಸೈಟ್ ಮತ್ತು ಅದರ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಘೋಷಿಸಲಾಗುತ್ತದೆ ಮತ್ತು ಪ್ರಮಾಣಪತ್ರಗಳು ಮತ್ತು ಆಕರ್ಷಕ ಬಹುಮಾನಗಳೊಂದಿಗೆ ನೀಡಲಾಗುತ್ತದೆ.
No comments:
Post a Comment