ಭದ್ರಾವತಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಯಿತು.
ಭದ್ರಾವತಿ, ಜೂ. ೨೫ : ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಅಂದಿನ ಪ್ರಧಾನಿ ಮಂತ್ರಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಭಾನುವಾರ ಬಿಜೆಪಿ ತಾಲೂಕು ಮಂಡಲ ವತಿಯಿಂದ ಕರಾಳ ದಿನ ಆಚರಿಸಲಾಯಿತು.
ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರು ಮಾತನಾಡಿ, ತುರ್ತು ಪರಿಸ್ಥಿತಿ ಇಂದಿರಾಗಾಂಧಿ ಸರ್ಕಾರದ ದುರಾಡಳಿತದ ಕರಾಳ ದಿನಗಳ ಕಹಿ ನೆನಪು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಭವಿಷ್ಯದಲ್ಲಿ ಆ ರೀತಿಯ ಸಂದರ್ಭ ದೇಶ ಎದುರಿಸುವ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.
ಡಾ. ಧನಂಜಯ ಸರ್ಜಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ವಿ. ಕದಿರೇಶ್, ನಾಗಭೂಷಣ್, ರಾಘವೇಂದ್ರ, ರಂಗಸ್ವಾಮಿ, ರಾಮಲಿಂಗಯ್ಯ, ಮಧುಕರ್ ಕಾನಿಟ್ಕರ್, ಕೊಟ್ರಪ್ಪ ರೆಡ್ಡಿ, ಬಿ.ಎಚ್ ರುದ್ರಪ್ಪ, ಭಾರತಮ್ಮ, ಶ್ರೀಧರ್ ಮಾರ್ಷಮ್, ರಂಗಪ್ಪ ಹೊಳೆಹೊನ್ನೂರು, ಕೃಷ್ಣ ಹೊಳೆಹೊನ್ನೂರು. ಪರಶುರಾಮ್ ಹರಿರಾವ್ ಕದಂ, ಕೇಶವ ಸಾಗರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment