ಶರತ್‌ಕುಮಾರ್
ಭದ್ರಾವತಿ, ಜು. ೩೦: ಒಂದು ವಾರದ ಹಿಂದೆ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಾಲೂಕಿನ ಕೆಂಗಲ್ ಹನುಮಂತಯ್ಯ ನಗರ(ಕೆ.ಎಚ್ ನಗರ) ಗ್ರಾಮದ ನಿವಾಸಿ ಶರತ್ ಕುಮಾರ್ ಭಾನುವಾರ ಹೆಣವಾಗಿ ಪತ್ತೆಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಸ್ವಂತ ಕಾರಿನಲ್ಲಿ ಸ್ನೇಹಿತ ಗುರು ಜೊತೆ ತೆರಳಿದ್ದ ಶರತ್‌ಕುಮಾರ್ ಕಳೆದ ಭಾನುವಾರ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕೆಳಗೆಬಿದ್ದು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದ ಕೊಲ್ಲೂರಿನ ಪೊಲೀಸರು, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು, ಸ್ಥಳೀಯರು, ಸ್ನೇಹಿತರು ಶರತ್‌ಕುಮಾರ್ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದರು. ಅಲ್ಲದೆ ಕಾರ್ಖಾನೆಯಲ್ಲಿ ಡ್ರೋನ್ ನೆರವು ಪಡೆದುಕೊಳ್ಳಲಾಗಿತ್ತು. ಜಲಪಾತದಿಂದ ಸುಮಾರು ೪೦೦ ಮೀಟರ್ ಅಂತರದಲ್ಲಿ ಕಲ್ಲಿನ ಕೊರಕಲಲ್ಲಿ ಶರತ್‌ಕುಮಾರ್ ಮೃತದೇಹ ಪತ್ತೆಯಾಗಿದೆ.
ಬದುಕಿರುವ ಭರವಸೆ :
ಕುಟುಂಬಕ್ಕೆ ಆಧಾರವಾಗಿದ್ದ ಶರತ್‌ಕುಮಾರ್‌ಗೆ ಈಜು ಬರುವ ಹಿನ್ನಲೆಯಲ್ಲಿ ಮಗ ಬದುಕಿರುವ ಬಗ್ಗೆ ತಂದೆ ಮೇಸ್ತ್ರಿ ಮುನಿಸ್ವಾಮಿ ಕುಟುಂಬ ವರ್ಗದವರು ಭರವಸೆ ಹೊಂದಿದ್ದರು. ಆದರೆ ಇದೀಗ ಮೃತದೇಹ ಪತ್ತೆಯಾಗಿರುವುದು ಬರ ಸಿಡಿಲು ಬಡಿದಂತಾಗಿದೆ.
ಅಡಕೆ ತಟ್ಟೆ ತಯಾರಿಕಾ ಘಟಕ ನಿರ್ಮಿಸಿ ಸ್ವಯಂ ಉದ್ಯೋಗ ಆರಂಭಿಸಿ ಜೊತೆಗೆ ಹಿಟಾಚಿ ಯಂತ್ರ ಬಾಡಿಗೆಗೆ ಕಳುಹಿಸಿ
ಬರುವ ಆದಾಯದಲ್ಲಿ ಬದುಕು ಕಟ್ಟಿಕೊಳ್ಳುವ ಮೂಲಕ ಶರತ್‌ಕುಮಾರ್ ಕುಟುಂಬಕ್ಕೆ ಆಧಾರವಾಗಿದ್ದನು.
No comments:
Post a Comment