ಕಲಾವತಿ
ಭದ್ರಾವತಿ, ಆ. ೧೭: ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೋವಿ ಕಾಲೋನಿ ೩ನೇ ಕ್ರಾಸ್ ಬಲಭಾಗ ನಿವಾಸಿ, ಸರ್.ಎಂ.ವಿ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿನಿ ಲೀಲಾವತಿ(೧೮) ನಾಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಲೀಲಾವತಿ ಆ.೧೪ರಿಂದ ಕಾಣೆಯಾಗಿದ್ದು, ೪.೫ ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕೈಯಲ್ಲಿ ಎಲ್ ಆಕಾರದ ಹಚ್ಚೆ ಗುರುತು ಇರುತ್ತದೆ. ಬೋವಿ ಕಾಲೋನಿ ಲೋಕೇಶ್‌ರವರ ಪುತ್ರಿಯಾಗಿದ್ದು, ಕಾಣೆಯಾದಾಗ ಸರ್‌ಎಂವಿ ಕಾಲೇಜಿನ ಸಮವಸ್ತ್ರ, ನೀಲಿ ಬಣ್ಣದ ಪ್ಯಾಂಟ್ ಮತ್ತು ಕೋಟು, ತೆಳು ನೀಲಿ ಬಣ್ಣದ ಟಾಪ್ ಧರಿಸಿದ್ದು, ಡಿಪ್ಲೋಮಾ ಪೂರೈಸಿ ಕಳೆದ ೧೫ ದಿನಗಳಿಂದ ನಗರಸಭೆ ವತಿಯಿಂದ ವೃತ್ತಿ ತರಬೇತಿ ಶಿಕ್ಷಣ ಪಡೆಯುತ್ತಿದ್ದರು.
ಯಾರಿಗಾದರೂ ಸುಳಿವು ಕಂಡು ಬಂದಲ್ಲಿ ತಕ್ಷಣ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಅಥವಾ ಮೊ: ೭೬೧೯೨೬೦೭೬೧ ಸಂಖ್ಯೆ ಕರೆ ಮಾಡಬಹುದಾಗಿದೆ.
No comments:
Post a Comment