ಭದ್ರಾವತಿ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಜೊತೆಗಿದ್ದವನೆ ಕುತ್ತಿಗೆ ಹಿಸುಕಿ ಹಾಗೂ ಹೊಟ್ಟೆಗೆ ಬಲವಾಗಿ ಒದ್ದು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. .
ತಾಲೂಕಿನ ಸಂಕ್ಲೀಪುರ ಗ್ರಾಮದಲ್ಲಿ ಎಂಪಿಎಂ ನೀಲಗಿರಿ ಮರ ಕಟಾವು ಕೆಲಸ ಮಾಡುತ್ತಿದ್ದ ರೂಪ(30) ಎಂಬಾಕೆ ಕೊಲೆಯಾಗಿರುವ ಮಹಿಳೆ
ಈಕೆ ಸಿಂಗಾರಿ(35) ಎಂಬಾತನ ಜತೆ ಕಳೆದ ಎರಡು ವರ್ಷದಿಂದ ಜೊತೆಯಲ್ಲಿ ವಾಸವಾಗಿದ್ದು, ಈ ಇಬ್ವರು ನೀಲಿಗಿರಿ ಕಟಾವು ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಸಂಜೆ ಮೇಸ್ತ್ರಿಯಿಂದ ಸಂಬಳವಾಗಿದ್ದು, ಇಬ್ಬರು ಮದ್ಯ ಸೇವಿಸಿ ಪರಸ್ಪರ ಗಲಾಟೆಗೆ ಬಿದ್ದಿದ್ದಾರೆ. ಗಲಾಟೆಯಿಂದಾಗಿ ಸಿಂಗಾರಿ ರೂಪಳ ಕುತ್ತಿಗೆ ಹಿಸುಕಿ ಹಾಗೂ ಕಾಲಿನಲ್ಲಿ ಒದ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು, ರೂಪ ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ನಿವಾಸಿ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಿಂಗಾರಿಯನ್ನ ಬಂಧಿಸಲಾಗಿದೆ.
No comments:
Post a Comment