ಭದ್ರಾವತಿ ನಗರದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸೋಮವಾರ ನರಕ ಚತುರ್ದಶಿ ಆಚರಣೆ ಜೊತೆಗೆ ಮನೆ ಮನೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೇರವೇರಿಸಲಾಯಿತು.
ಭದ್ರಾವತಿ: ನಗರದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸೋಮವಾರ ನರಕ ಚತುರ್ದಶಿ ಆಚರಣೆ ಜೊತೆಗೆ ಮನೆ ಮನೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೇರವೇರಿಸಲಾಯಿತು.
ದೀಪಾವಳಿ ಹಬ್ಬದ ೨ನೇ ದಿನ ನರಕ ಚತುದರ್ಶಿ ಆಚರಿಸಲಾಗುತ್ತದೆ. ಬೆಳಿಗ್ಗೆಯೇ ಮನೆ ಮನೆಗಳ ಮುಂದೆ ಸಗಣಿ ನೀರಿನಿಂದ ತಾರಸಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳನ್ನು ಬಿಡಿಸಿ ಮನೆಗಳನ್ನು ಹಸಿರು ತೋರಣಗಳಿಂದ ಸಿಂಗರಿಸಿ ಸಂಜೆ ದೇವರಿಗೆ ಪೂಜೆ ಸಲ್ಲಿಸಿ ಮನೆಯ ಸುತ್ತಮುತ್ತ ದೀಪ ಹಚ್ಚಿ ದೇವರನ್ನು ಆರಾಧಿಸಲಾಗುತ್ತಿದೆ.
ಈ ಬಾರಿ ಲಕ್ಷ್ಮೀಪೂಜೆ ಸಹ ಇದೆ ದಿನ ನೆರವೇರಿಸಲಾಯಿತು. ಮನೆ ಮನೆಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯನ್ನು ಅಲಂಕರಿಸಿ ಪೂಜಿಸಲಾಯಿತು.
ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಸಂಜೆ ಹಬ್ಬದ ಸಂಭ್ರಮ ಬೆಳಿಗ್ಗೆ ವ್ಯಾಪಾರ ವಹಿವಾಟು ಭರಾಟೆ ಹೆಚ್ಚಿನದ್ದಾಗಿತ್ತು. ಜನಸಂದಣಿ ಅಧಿಕವಾಗಿದ್ದು, ವಾಹನ ದಟ್ಟಣೆ ಕಂಡು ಬಂದಿತು. ಹಬ್ಬದ ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಜೆ ಹೆಚ್ಚಾಗಿರುವುದು ಕಂಡು ಬಂದಿತು.
ಈ ನಡುವೆ ಸಂಜೆ ವೇಳೆ ವ್ಯಾಪಕ ಮಳೆಯಾಗಿದ್ದು, ಹಬ್ಬದ ಸಂಭ್ರಮಕ್ಕೆ ಕೆಲ ಸಮಯ ಹಿನ್ನಡೆ ಉಂಟು ಮಾಡಿತು. ಮಳೆಯಿಂದಾಗಿ ಪಟಾಕಿ ಹಚ್ಚಿ ಸಂಭ್ರಮಿಸುವ ಕ್ಷಣ ಕ್ಷೀಣಿಸಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ