Thursday, December 31, 2020

ಭದ್ರಾವತಿ ತಾಲ್ಲೂಕಿನ ೩೫ ಗ್ರಾಮ ಪಂಚಾಯಿತಿಗಳ ಚುನಾವ ಫಲಿತಾಂಶ

ಭದ್ರಾವತಿ: ತಾಲ್ಲೂಕಿನ ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು ಅದರ ವಿವಿರಗಳು:-
ಸೈದರ್‌ಕಲ್ಲಳ್ಳಿ ಗ್ರಾಮ ಪಂಚಾಯಿತಿಯ ಸೈದರ್‌ಕಲ್ಲಳಿ ಕ್ಷೇತ್ರದಿಂದ ಚಂದ್ರಮ್ಮ, ರತ್ನಮ್ಮ, ಸುಪ್ರೀತ, ಜೆ.ಬಿ.ಗಂಗಾಧರ. ಕುರುಬರ ವಿಠಲಾಪುರ ಕ್ಷೇತ್ರದಿಂದ ಹೆಚ್.ಮಂಜುಳಾ, ಎಂ.ಮಲ್ಲೇಶಪ್ಪ. ಆದ್ರಿ ಹಳ್ಳಿ ಕ್ಷೇತ್ರದಿಂದ ಶಾರದ, ಎ.ವಿ.ಅಣ್ಣಪ್ಪ. ದಿಗ್ಗೇನಹಳ್ಳಿ ಕ್ಷೇತ್ರದಿಂದ ಹೆಚ್.ಸಿ.ನಂಜುಂಡಪ್ಪ.
ನಿಂಬೆಗೊಂದಿ ಗ್ರಾಪಂ ಯ ನಿಂಬೆಗೊಂದಿ-೧ ಕ್ಷೇತ್ರದಿಂದ ಹನುಮಂತಮ್ಮ, ಚಂದ್ರಮ್ಮ, ಎಂ.ಮಹಾದೇವಪ್ಪ ಎಲ್ಲರೂ ಅವಿರೋಧ ಆಯ್ಕೆ. ನಿಂಬೆಗೊಂದಿ ಕ್ಷೇತ್ರ-೨ ರಿಂದ ಜಯಮ್ಮ. ವಡೇರಪುರ ಕ್ಷೇತ್ರದಿಂದ ಎಸ್.ನಂದ್ಯಪ್ಪ, ಶಾಲಿನಿ. ಅರಶಿನಘಟ್ಟ ಕ್ಷೇತ್ರದಿಂದ ಹೆಚ್.ಎನ್.ರುದ್ರೇಶಪ್ಪ, ಕೆ.ಬಿ.ಉಮಾ. ಇಂದಿರಾ ನಗರ ಕ್ಷೇತ್ರದಿಂದ ಕೆ.ಭಜನಿ ನಾಯ್ಕ್.
ಆನವೇರಿ ಗ್ರಾಪಂ ಯ ಆನವೇರಿ-೧ ಕ್ಷೇತ್ರದಿಂದ ಜಿ.ಹೆಚ್.ನಟರಾಜ್ ಗೌಡ, ಬಿ.ಪಿ.ತೇಜಾವತಿ, ಶೋಭಾ ನಾಗರಾಜ್. ಆನವೇರಿ -೨ ಕ್ಷೇತ್ರದಿಂದ ಸುಜಾತ ಬಿ.ಆರ್.ಗಿರೀಶ್, ಎನ್.ನಂದೀಶ್, ಮುರಾರಿ. ಆನವೇರಿ -೩ ಕ್ಷೇತ್ರದಿಂದ ರೇಣುಕಮ್ಮ ಹನುಮಂತಪ್ಪ, ಆರ್.ಶ್ರೀನಿವಾಸ್. ಇಟ್ಟಿಗೇಹಳ್ಳಿ ಕ್ಷೇತ್ರದಿಂದ ಲಲಿತಮ್ಮ, ಆರ್.ತಿಪ್ಪೇಶ್, ಎಂ.ಮಮತ.
       ಗುಡಮಘಟ್ಟ ಗ್ರಾಪಂ ಯ ಗುಡಮಘಟ್ಟ ಕ್ಷೇತ್ರದಿಂದ ಹೆಚ್.ಆರ್.ಪುಟ್ಟಪ್ಪ, ಭಾವಿಮನೆ ಮಲ್ಲಿಕಾರ್ಜುನ್ ಬಿ.ಆರ್., ಹೆಚ್.ರಂಗಪ್ಪ, ಪುಷ್ಪಾ. ತಡಸ ಕ್ಷೇತ್ರದಿಂದ ಶೋಭ, ಟಿ.ಕೆ.ಕರಿಬಸಪ್ಪ. ಮಲ್ಲಿಗೇನಹಳ್ಳಿ ಕ್ಷೇತ್ರದಿಂದ ವಿ.ಲತಾ, ಸುಧಾ.
ಮಂಗೋಟೆ ಗ್ರಾಪಂ ಯ ಮಂಗೋಟೆ -೧ ಕ್ಷೇತ್ರದಿಂದ ಎ.ಕೆ.ನಾಗರಾಜ್, ಜಿ.ಎಸ್.ಮಲ್ಲೇಶ್. ಮಂಗೋಟೆ -೨ ಕ್ಷೇತ್ರದಿಂದ ನಿರ್ಮಲಮ್ಮ, ಹೆಚ್.ಡಿ.ರವಿ. ನಾಗಸಮುದ್ರ ಕ್ಷೇತ್ರದಿಂದ ಬಿ.ಎಂ.ಲೋಹಿತ್, ಆರ್.ಸವಿತ, ಎಂ.ಆರ್.ಶೃತಿ, ದ್ರಾಕ್ಷಾಯಿಣಿ.
ಸನ್ಯಾಸಿಕೋಡಮಗ್ಗೆ ಗ್ರಾಪಂ ಯ ಸನ್ಯಾಸಿಕೋಡಮಗ್ಗೆ - ೧ ಕ್ಷೇತ್ರದಿಂದ ಬಿ.ಎಂ.ನಾಗೇಶಪ್ಪ, ಆರ್.ಜಯಮ್ಮ, ಸಿ.ಇ.ಪ್ರಕಾಶ್. ಸನ್ಯಾಸಿಕೋಡಮಗ್ಗೆ -೨ ಕ್ಷೇತ್ರದಿಂದ ನೀಲಮ್ಮ, ಜಯಮ್ಮ, ವಿಜಯ್ ಕುಮಾರ್. ಕನಸಿನ ಕಟ್ಟೆ ಕ್ಷೇತ್ರದಿಂದ ಬಿ.ಶ್ರೀನಿವಾಸ, ಸಿ.ವೈ.ರಾಜು, ಎನ್.ಒ.ಮಂಗಳ, ಚಂದ್ರಮ್ಮ.
ಆಗರದಹಳ್ಳಿ ಗ್ರಾಪಂ ಯ ಆಗರದಹಳ್ಳಿ - ೧ ಕ್ಷೇತ್ರದಿಂದ ಚಂದ್ರಮ್ಮ, ಆಗರದಹಳ್ಳಿ-೨ ಕ್ಷೇತ್ರದಿಂದ ಪರಶುರಾಮ್, ಬಿ.ಬಸವರಾಜಪ್ಪ, ಜಲಜಾಕ್ಷಿ, ಆಗರದಹಳ್ಳಿ-೩ ಕ್ಷೇತ್ರದಿಂದ ವಿಜಯ, ಮಂಜುಳಾ, ಪಿ.ವೆಂಕಟೇಶ್, ಆಗರದಹಳ್ಳಿ -೪ ಕ್ಷೇತ್ರದಿಂದ ರತ್ನಮ್ಮ, ಎಸ್.ಶ್ರೀನಿವಾಸ. ಹಂಚಿನಸಿದ್ದಾಪುರ ಕ್ಷೇತ್ರದಿಂದ ಸಾವಿತ್ರಮ್ಮ, ಸರಿತಾ, ಹೆಚ್.ಎಂ.ಸಿದ್ದಪ್ಪ, ಯಶೋಧಾ ಭಾಯಿ.
ಯಡೇಹಳ್ಳಿ ಗ್ರಾಪಂ ಯ ಯಡೇಹಳ್ಳಿ- ೧ ಕ್ಷೇತ್ರದಿಂದ ಹೆಚ್.ಎಂ.ಚಂದ್ರಕಲಾ, ಸಿ.ಶಿವಲಿಂಗಪ್ಪ, ಕೆ.ಅನ್ನಪೂರ್ಣ. ಯಡೇಹಳ್ಳಿ -೨ ಕ್ಷೇತ್ರದಿಂದ ಮೀನಾಕ್ಷಮ್ಮ, ಮಹಮದ್ ಆಲಿ, ಸಾವಿತ್ರಮ್ಮ. ಯಡೇಹಳ್ಳಿ - ೩ ಕ್ಷೇತ್ರದಿಂದ ಟಿ.ಮಂಜುನಾಥ, ಬೋಮ್ಮಮ್ಮ, ಸಿ.ವಿಜಯಲಕ್ಷ್ಮಿ, ಪ್ರೇಮ ಮಂಜುನಾಥ. ಟಿ, ಯಡೇಹಳ್ಳಿ -೪ ಕ್ಷೇತ್ರದಿಂದ ತಿಪ್ಪೇಶ್ ಎನ್ ಯೆಡೇಹಳ್ಳಿ, ಮಂಜುನಾಥ ಪಿ ಯಡೇಹಳ್ಳಿ. ಚಂದ್ರನಕೆರೆ ಕ್ಷೇತ್ರದಿಂದ ಟಿ.ಲಕ್ಷ್ಮಣಪ್ಪ ತಿಮ್ಮಪ್ಪ ಡಿ, ಸಿ.ಬಿ.ಬಸವರಾಜಪ್ಪ.  
ಅರಹತೋಳು ಗ್ರಾಪಂ ಯ ಅರಹತೋಳಲು - ೧ ಕ್ಷೇತ್ರದಿಂದ ಅರಹತೋಳಲು ಕೆ.ರಂಗನಾಥ್, ಅಶ್ವಿನಿ ಪಿ ಬಿ ಚಂದ್ರಶೇಖರ್, ಅರಹತೋಳಲು - ೨ ಕ್ಷೇತ್ರದಿಂದ ಎಸ್.ಟಿ.ಸಂಗನಾಥ. ನಾಗಮ್ಮ ಅರಹತೋಳಲು. ಅರಹತೋಳಲು - ೩ ಆಶಾ, ಅರಹತೋಳಲು ಶಶಿಕಲಾ ಹಾಲೇಶಪ್ಪ, ಆರ್.ಪ್ರಭಾಕರ. ಅರಹತೋಳಲು-೪ ಕ್ಷೇತ್ರದಿಂದ ಕೆ.ರಾಜಪ್ಪ, ಲಕ್ಷ್ಮಿಭಾಯಿ.
ಕಲ್ಲಿಹಾಳ್ ಗ್ರಾಪಂ ಯ ಕಲ್ಲಿಹಾಳ್ ಕ್ಷೇತ್ರದಿಂದ ಜಿ.ಗಾಯಿತ್ರಿ, ಎ.ಜೆ.ಶ್ರೀನಿವಾಸ್ ಕುಮಾರ್, ಎಲ್.ದೀಪಾ, ನಾಗಮ್ಮ. ಬೋಮ್ಮನಕಟ್ಟೆ ಕ್ಷೇತ್ರದಿಂದ ಡಿ.ರಮ್ಯ, ನಾಗಲಕ್ಷ್ಮಿ. ದೊಂಬರಬೈರನಹಳ್ಳಿ ಕ್ಷೇತ್ರದಿಂದ ಹೆಚ್.ಬಸವರಾಜಪ್ಪ, ಬಿ,ಸಂಗಮೇಶ್, ಶಿಲ್ಪ, ಮಾರಪ್ಳರ ಸತೀಶ್ ಎಸ್.
ದಾಸರಕಲ್ಲಳ್ಳಿ ಗ್ರಾಪಂ ಯ ದಾಸರಹಲ್ಲಳ್ಳಿ ಕ್ಷೇತ್ರದಿಂದ ನೀಲಮ್ಮ, ಅನುಸೂಯ, ಕೇಶವ, ದಾದಾ ಪೀರ್. ಅಗಸನಹಳ್ಳಿ ಕ್ಷೇತ್ರದಿಂದ ಪ್ರಶಾಂತ ಆಳ್ವಾ, ಕಾವ್ಯ ಕೋಂ ಸುರಶ. ಅರದೋಟ್ಳು ಕ್ಷೇತ್ರದಿಂದ ಜಿ.ಎಸ್.ಪ್ರಶಾಂತ, ಎ.ಜಿ.ಮಲ್ಲನಗೌಡ, ಆರ್.ಜಯಲಕ್ಷ್ಮಿ, ವೀಣಾ.
ಮಾರಶೆಟ್ಟಿ ಹಳ್ಳಿ ಗ್ರಾಪಂ ಯ ಮಾರಶೆಟ್ಟಿ ಹಳ್ಳಿ -೧ ಕ್ಷೇತ್ರದಿಂದ ಕಿರಣ್ ಮೋರೆ, ಕೆ.ಬಸವರಾಜಪ್ಪ, ಎಂ.ನಿರ್ಮಲ. ಮಾರಶೆಟ್ಟಿ ಹಳ್ಳಿ -೨ ಕ್ಷೇತ್ರದಿಂದ ಜಿ.ಎನ್.ಓಬಳಮ್ಮ, ಪಿ.ರುದ್ರೇಶ್. ತಟ್ಟೆಹಳ್ಳಿ - ೧ ಕ್ಷೇತ್ರದಿಂದ ಜಿ.ಎನ್.ಪಂಚಾಕ್ಷರಪ್ಪ, ಹನುಮಂತಪ್ಪ, ಗಾಯಿತ್ರಿ. ತಟ್ಟೆಹಳ್ಳಿ - ೨ ಕ್ಷೇತ್ರದಿಂದ ಸಿ.ಮುದ್ದುವೀರಪ್ಪ, ಮಂಜುಳಾ ಪಿ ನಾಗರಾಜ್, ಎಂ.ಕೆ.ಸುನೀತ. ತಿಮ್ಲಾಪುರ ಕ್ಷೇತ್ರದಿಂದ ಲಲಿತಮ್ಮ ಹೊನ್ನಪ್ಪ್ ಹೆಚ್, ಹೆಚ್.ಶಾಲಿನಿ, ಟಿ.ಎನ್.ಭದ್ರಯ್ಯ.
ಅರಕೆರೆ ಗ್ರಾಪಂ ಯ ಅರಕೆರೆ -೧ ಕ್ಷೇತ್ರದಿಂದ ಎಸ್.ಎಲ್.ರವಿಕುಮಾರ್, ಹೆಚ್.ಬಿ.ಮಲ್ಲಪ್ಪ, ದ್ರಾಕ್ಷಾಯಣಮ್ಮ ಎಲ್ಲರೂ ಅವಿರೋಧ ಆಯ್ಕೆ. ಅರಕೆರೆ - ೨ ಕ್ಷೇತ್ರದಿಂದ ಆರ್.ಡಿ.ಶೇಖರಪ್ಪ, ಲಕ್ಷ್ಮೀಪತಿ, ಗಾಯಿತ್ರಿ ಎಲ್ಲರೂ ಅವಿರೋದ ಆಯ್ಕೇ. ಕಲ್ಲಾಪುರ ಕ್ಷೇತ್ರದಿಂದ ಎಂ.ಆಶಾ, ಆರ್.ರಂಗಪ್ಪ. ಹೊಸೂರು ಕ್ಷೇತ್ರದಿಂದ ರತ್ನಮ್ಮ ರುದ್ರೇಶಪ್ಪ. ದಾನವಾಡಿ ಕ್ಷೇತ್ರದಿಂದ ಟಿ.ಎಂ.ಗುರುಮೂರ್ತಿ, ಆರ್.ರತ್ನಮ್ಮ, ಆಶಾ.
ಅರಬಿಳಚಿ ಗ್ರಾಪಂ ಯ ಅರಬಿಳಚಿ -೧ ಕ್ಷೇತ್ರದಿಂದ ಹೆಚ್.ಎಸ್.ಮಂಜುನಾಥ, ಹೆಚ್.ಎಂ.ಸದಾಶಿವಪ್ಪ, ನಸೀಮಾ, ಶಾರದಮ್ಮ. ಅರಬಿಳಚಿ -೨ ಕ್ಷೇತ್ರದಿಂದ ಧನಂಜಯ ಹೆಚ್ ಜಯಣ್ಣ. ಅರಬಿಳಚಿ - ೩ ಕ್ಷೇತ್ರದಿಂದ ನಾಗಮ್ಮ, ಹೆಚ್.ಬಿ.ಕಿರಣ್ ಅವಿರೋಧ ಆಯ್ಕೆ. ಅರಬಿಳಚಿ-೧ ಕ್ಯಾಂಪ್ ಕ್ಷೇತ್ರದಿಂದ ಸುಶೀಲ, ಎ.ರಾಜು, ಅನ್ನಪೂರ್ಣ. ಅರಬಿಳಚಿ - ೨ ಕ್ಯಾಂಪ್ ಕ್ಷೇತ್ರದಿಂದ ಆಯೀಷಾ ಬಿಬಿ, ಎ.ಗುಣಶೇಖರ, ವಾಜಿಯಮ್ಮ ವೆಂಕಟೇಶ್ ಡಿ, ಎಸ್.ಶಬರೀಶ್.
ನಾಗತಿಬೆಳಗಲು ಗ್ರಾಪಂ ಯ ನಾಗತಿಬೆಳಗಲು-೧ ಕ್ಷೇತ್ರದಿಂದ ಲಕ್ಷ್ಮಮ್ಮ ನಂಜುಂಡಪ್ಪ, ಸುಮಲತ ನಾಗತಿಬೆಳಗಲು, ಎಂ.ಮಂಜುಳಾ. ನಾಗತಿಬೆಳಗಲು -೨ ತಾಂಡ ಕ್ಷೇತ್ರದಿಂದ ಎಸ್.ವೇಲುಸ್ವಾಮಿ, ಎಸ್.ನಂಜುಂಡಾ ನಾಯ್ಕ್, ಗೀತಾಭಾಯಿ. ಹೊಸಳ್ಳಿ ಕ್ಷೇತ್ರದಿಂದ ಎಂ.ಆರ್.ಮನೋಹರಿ, ಕೆ.ಹಾಲೇಶ್ ನಾಯ್ಕ. ತಳ್ಳಿಕಟ್ಟೆ ಕ್ಷೇತ್ರದಿಂದ ದೇವಕಿ ಭಾಯಿ, ಪಿ.ದಿನೇಶ್ ತಳ್ಳಿಕಟ್ಟೆ. ತಳ್ಳಿಕಟ್ಟೆ ಕುಮರಿನಾರಾಯಣಪುರ ಕ್ಷೇತ್ರದಿಂದ ಶ್ರೀರಾಮ.
ಕೂಡ್ಲಿಗೆರೆ ಗ್ರಾಪಂ ಯ ಕೂಡ್ಲಿಗೆರೆ-೧  ಕ್ಷೇತ್ರದಿಂದ ಉಮಾದೇವಿ ತಿಪ್ಪೇಶ್, ಗೌರಮ್ಮ ಎಸ್ ಮಹಾದೇವ್, ಸಿ.ವಿಶ್ವನಾಥ, ಆರ್.ಎನ್.ರುದ್ರೇಶ್. ಕುಡ್ಲಿಗೆರೆ -೨ ಆಟಗಾರಿ ಕ್ಯಾಂಪ್ ಕ್ಷೇತ್ರದಿಂದ ಎಂ.ಜಯಣ್ಣ, ಮಾಲಕ್ ಬಿ.ವೀರಪ್ಪನ್, ಸಿದ್ದಮ್ಮ ನಾಗೇಶ್, ಸ್ವಾಮಿನಾಥನ್.  ಕಲ್ಪನಹಳ್ಳಿ ಕ್ಷೇತ್ರದಿಂದ ಪಾರ್ವತಿ ಭಾಯಿ, ಕಬೇರ ನಾಯ್ಕ್, ನೀಲಾಭಾಯಿ. ಕೋಡಿಹಳ್ಳಿ ಕ್ಷೇತ್ರದಿಂದ ಜಿ.ಆರ್.ನಾಗರಾಜಪ್ಪ, ಭಾಗ್ಯ.
ಅತ್ತಿಗುಂದ ಗ್ರಾಪಂ ಯ ಅತ್ತಿಗುಂದ -೧ ಕ್ಷೇತ್ರದಿಂದ ಟಿ.ಮಹೇಶ್ ಕುಮಾರ್, ಮೋಹ್ಸಿನಾ ಭಾನು, ಎಸ್. ದೇವಿರಮ್ಮ.ಎಲ್ಲರೂ ಅವಿರೋಧ ಆಯ್ಕೆ.  ಅತ್ತಿಗುಂದ -೨ ಕ್ಷೇತ್ರದಿಂದ ಡಿ.ಸುಶೀಲಮ್ಮ, ಆರ್.ಸುಮಾ. ಸೀತಾರಾಮಪುರ ಕ್ಷೇತ್ರದಿಂದ ಮೋಹನಮ್ಮ, ಮಂಜಪ್ಪ, ಡಿ.ಪ್ರಭಾಕರ. ಬಸಲೀಕಟ್ಟೆ-೧  ಕ್ಷೇತ್ರದಿಂದ ಬೇಬಿ ಶಾಲೀನಿ, ಪುರುಷೋತ್ತಮ, ಬಸಲೀಕಟೆ-೨ ಕ್ಷೇತ್ರದಿಂದ ರತ್ನಮ್ಮ, ಡಿ.ಸರ್ದಾರ್.
ತಡಸ ಗ್ರಾಪಂ ಯ ತಡಸ ಕ್ಷೇತ್ರದಿಂದ ರಂಗಪ್ಪ, ರಿಜ್ವಾನ್, ಬಿ.ಕೇಶವ. ತಡಸ-೨ ಮಕಾನ್‌ಕಟ್ಟೆ ಕ್ಷೇತ್ರದಿಂದ ಜರೀನಾ ಭಾನು, ಯಾಸ್ಸೀನ್, ಸೈಯದ್ ಇಬ್ರಾಹಿಂ. ತಡಸ-೩ ಇಸ್ಸಾ ನಗರ ಕ್ಷೇತ್ರದಿಂದ ರುಕ್ಸದ್, ಬಿ.ನಾಜೀಮಾ, ಶಬ್ಬಿರ್ ಸಾಬ್. ಮತಿಘಟ್ಟ ಕ್ಷೇತ್ರದಿಂದ ರತ್ನಮ್ಮ, ಎಂ.ಇ.ಮಂಜುನಾಥ. ಹಾತಿಕಟ್ಟೆ ಕ್ಷೇತ್ರದಿಂದ ಕೆ.ವಿ.ನಾಗರತ್ನಮ್ಮ, ಎಂ.ನರಸಿಂಹಮೂರ್ತಿ.
ದೋಣಭಘಟ್ಟ ಗ್ರಾಪಂ ಯ ದೋಣಭಘಟ್ಟ-೧ ಕ್ಷೇತ್ರದಿಂದ ಜೋಹರ್ ಭಾನು, ಎಂ.ಡಿ.ಕಲೀಂ, ದೋಣಭಘಟ್ಟ-೨ ಕ್ಷೇತ್ರದಿಂದ ಅಜೀಜಾ ಭಾನು, ಜುಲ್ಫಿಯಾಜ್ ಭಾನು, ಆಸೀಫ್ ಆಲಿ, ಮುಸ್ತಾಫ, ದೋಣಭಘಟ್ಟ-೩ ಕ್ಷೇತ್ರದಿಂದ ಕಲೀಲ್ ಸಾಬ್ ಬುಡೇನ್ ಸಾಬ್, ಶಭಾನ ಭಾನು. ದೋಣಭಘಟ್ಟ-೪ ಕ್ಷೇತ್ರದಿಂದ ಫರ‍್ಹಾಭಾನು, ಗುಲ್ಜಾರ್ ಬಾನು, ಹಾಜೀರಾಬಿ. ದೋಣಭಘಟ್ಟ-೫ ಕ್ಷೇತ್ರದಿಂದ ಕೌಸರ್ ಭಾನು. ದೋಣಭಘಟ್ಟ-೬ ಕ್ಷೇತ್ರದಿಂದ ಮಲ್ಲಮ್ಮ, ರಸೂಲ್ ಭಾನು, ನಜೀಭಾ ಸುಲ್ತಾನ, ಶಮೀಮ್ ಭಾನು. ದೋಣಭಘಟ್ಟ-೭ ಕ್ಷೇತ್ರದಿಂದ ಹಾಲಮ್ಮ, ರೀಜ್ವಾನ ಖಾನಂ, ಲೀಯಾಖತ್ ಆಲಿ.
ಬಿಳಕಿ ಗ್ರಾಪಂ ಯ ಬಿಳಕಿ ಕ್ಷೇತ್ರದಿಂದ ಡಿ.ಎ.ಶಿವಕುಮಾರ್, ಸುಶೀಲಾ ಭಾಯಿ, ಆರ್.ಗಣೇಶ. ಹೋಳೆನೇರಳೆಕೆರೆ ಕ್ಷೇತ್ರದಿಂದ ಆಶ್ಮತ್ ಉನ್ನೀಸ, ಮಹಮದ್ ಶಬ್ಬೀರ್, ನವಲೇ ಬಸವಾಪುರ ಕ್ಷೇತ್ರದಿಂದ ಎಸ್.ಸವೀತ, ಆರ್.ಹೇಮಣ್ಣ, ಹೆಚ್.ವಿ.ನಾಗಮ್ಮ. ಪದ್ಮೇನಹಳ್ಳಿ  ಕ್ಷೇತ್ರದಿಂದ ಪಾಪಿ ಭಾಯಿ, ಪಿ.ಬಿ.ಮಂಜುನಾಥ.
ಕಾಗೇಕೋಡಮಗ್ಗೆ ಗ್ರಾಪಂ ಯ ಕಾಗೇಕೋಡಮಗ್ಗೆ -೧ ಕ್ಷೇತ್ರದಿಂದ ಸೈಯದ್ ಅಬೀದ್, ಸೈಯದ್ ನಜ್ರುಲ್ಲಾ, ಶಿವಲಿಂಗೇಗೌಡ, ಟಿ.ಎಸ್.ಶಕೀಲಾ ಭಾನು. ಕಾಗೇಕೋಡಮಗ್ಗೆ -೨ ತಾಂಡ ಕ್ಷೇತ್ರದಿಂದ ಕೆ.ರೂಪಾ, ಶೋಭಾ. ತಿಪ್ಲಾಪುರ ಕ್ಷೇತ್ರದಿಂದ ಶಭನಂ ಭಾನು, ಜಬೀವುಲ್ಲಾ, ಮುಕ್ತೀಯಾರ್ ಅಹಮದ್, ಬಾಬಳ್ಳಿ ಕ್ಷೇತ್ರದಿಂದ ರಸೂಲ್ ಖಾನ್, ಫಮೀದಾ ಬಾನು, ಧನಲಕ್ಷ್ಮಿ.
ಅರಳಿಹಳ್ಳಿ ಗ್ರಾಪಂ ಯ ಅರಳಿಹಳ್ಳಿ-೧ ಕ್ಷೇತ್ರದಿಂದ ಪಾರ್ಥ, ತೇನ್‌ಮುರಳಿ, ಜಿ.ಸುಜಾತ, ಆಯೀಷಾ ಭಾನು. ಅರಳಿಹಳ್ಳಿ-೨ ಕ್ಷೇತ್ರದಿಂದ ಡಿ.ಪಳನಿ, ಆರ್.ಪುಟ್ಟಸ್ವಾಮಿ. ಅರಳಿಹಳ್ಳಿ-೩ ಕ್ಷೇತ್ರದಿಂದ ಕೋಮಲ, ರುದ್ರೇಶ್, ಅನಿತಾ ಯಾನೆ ಪುಷ್ಪಾ ಹೆಚ್.
ಕಲ್ಲಳ್ಳಿ ಗ್ರಾಪಂ ಯ ಕಲ್ಲಳ್ಳಿ ಕ್ಷೇತ್ರದಿಂದ ಸಾವಿತ್ರಿ, ಕೆ.ವಿ.ಧನಂಜಯ. ಹಾಗಲಮನೆ ಕ್ಷೇತ್ರದಿಂದ ಪುನೀತ್ ಕುಮಾರ್. ಸಂಕ್ಲೀಪುರ ಕ್ಷೇತ್ರದಿಂದ ಮಂಜುಳಾ, ಆರ್.ಧರ್ಮಪ್ಪ. ಸಿರಿಯೂರು ಕ್ಷೇತ್ರದಿಂದ ಸುಭ್ರದಾ ಭಾಯಿ, ಬಿ.ಆನಂದ, ಶೋಭಾ ಭಾಯಿ. ವೀರಾಪುರ ಕ್ಷೇತ್ರದಿಂದ ಉಮೇಶ್, ಗಾಯಿತ್ರಿ.
ಅಂತರಗಂಗೆ ಗ್ರಾಪಂ ಯ ಅಂತರಗಂಗೆ -೧ ಕ್ಷೇತ್ರದಿಂದ ಬಿ.ನಾಗೇಶ್, ಗೀತಾ. ಅಂತರಗಂಗೆ-೨ ಕ್ಷೇತ್ರದಿಂದ ಸಿ.ಶ್ರೀಧರ್, ಸವಿತ, ಮಂಜುಳಾ. ಅಂತರಗಂಗೆ-೩ ಜಿ.ಮಂಜಪ್ಪ, ಟಿ.ಆರ್.ಶೋಭಾ. ಉಕ್ಕುಂದ ಕ್ಷೇತ್ರದಿಂದ ದೇವಿಕಾ, ಎಸ್.ಅನು. ದೇವರನರಸೀಪುರ ಕ್ಷೇತ್ರದಿಂದ ಎಸ್.ಎಂ.ಆನಂದ ಕುಮಾರ್, ರವಿ, ಗಂಗಮ್ಮ, ಹೆಚ್.ಶಾಂತ. ಕಾಚಗೋಂಡನಹಳ್ಳಿ ಕ್ಷೇತ್ರದಿಂದ ಜಿ.ಆನಂದಪ್ಪ, ಬಿ,ಮೋನಿಷಾ.
ದೊಡ್ಡೇರಿ ಗ್ರಾಪಂ ಯ ದೊಡ್ಡೇರಿ ಕ್ಷೇತ್ರದಿಂದ ಮಧು ಸಿ ಲೇಪಾಕ್ಷ, ಡಿ.ಬಿ.ಗಣೇಶ್. ಬಿಸಲ ಮನೆ ಕ್ಷೇತ್ರದಿಂದ ಶ್ರೀನಿವಾಸ ರಾವ್, ಗೌರಿ. ಗಂಗೂರು ಕ್ಷೇತ್ರದಿಂದ ಜೆ.ಬಿ.ಜಾನು. ಬಂಡೀಗುಡ್ಡ ಕ್ಷೇತ್ರದಿಂದ ಗಂಗಮ್ಮ, ಬೆಳ್ಳಿಗೆರೆ ಕ್ಷೇತ್ರದಿಂದ ಆಘಾ ಶರೀಫ್, ಕೆ.ಮಂಜು, ರಾಮಕ್ಕ.
ಯರೇಹಳ್ಳಿ ಗ್ರಾಪಂ ಯ ಯರೇಹಳ್ಳಿ-೧ ಕ್ಷೇತ್ರದಿಂದ ಸರೋಜಮ್ಮ, ಎಸ್.ಸಂಗಮ್ಮ, ವಿ.ಚಂದ್ರಶೇಖರ್, ಯರೇಹಳ್ಳಿ -೨ ಗಾಂದೀನಗರ ಕ್ಷೇತ್ರದಿಂದ ಉಮಾ, ಶಾಂತ ಭಾಯಿ, ಯರೇಹಳ್ಳಿ-೩ ತಾಷ್ಕೇಂಟ ನಗರ ಕ್ಷೇತ್ರದಿಂದ ಸುಮಿತ್ರಾ, ಎಂ.ಶ್ವೇತ. ಕೊರಲಕೊಪ್ಪ-೧ ಕ್ಷೇತ್ರದಿಂದ ಆರ್.ಚೇತನ್ ಕುಮಾರ್. ಕೊರಲಕೊಪ್ಪ -೨ ಕ್ಷೇತ್ರದಿಂದ ಸರಜ, ಟಿ.ಆರ್.ಶಿವರಾಮ್, ಕೊರಲಕೊಪ್ಪ -೩ ಕೆಹೆಚ್ ನಗರ ಕ್ಷೇತ್ರದಿಂದ ಎನ್.ಉಮೇಶ್, ಮಾಲತಿ.
ಮಾವಿನಕೆರೆ ಗ್ರಾಪಂ ಯ ಮಾವಿನಕೆರೆ -೧ ಕ್ಷೇತ್ರದಿಂದ ಪ್ರೇಮ, ಎಂ.ಆರ್,ಅಭಿನಂದನ್. ಮಾವಿನಕೆರೆ -೨ ಕಾಲೋನಿ ಕ್ಷೇತ್ರದಿಂದ ಮಂಗಳ, ಎನ್.ಶ್ರೀಧರ್ ಶೆಟ್ಟಿ, ಆರ್.ಆನಂತ. ಹಡ್ಲಘಟ್ಟ ಕ್ಷೇತ್ರದಿಂದ ನಿರ್ಮಲ. ಮಸರಹಳ್ಳಿ ಕ್ಷೇತ್ರದಿಂದ ಆನಂದ ಕುಮಾರಿ, ಸಿ.ಲೋಕೇಶ. ಕೆಂಚೇನಹಳ್ಳಿ ಕ್ಷೇತ್ರದಿಂದ ಸುರೇಶ್, ನೇತ್ರಾವತಿ.
ಬಾರಂದೂರು ಗ್ರಾಪಂ ಯ ಬಾರಂದೂರು -೧ ಕ್ಷೇತ್ರದಿಂದ ಸುಮಾ ಪರಮೇಶ್, ನೀಲಮ್ಮ, ಬಿ.ವಿ.ಗೋಪಾಲ ರಾವ್ ಬರ್ಗೆ. ಬಾರಂದೂರು -೨ ಕ್ಷೇತ್ರದಿಂದ ಪ್ರೇಮ, ಕೆಂಚಮ್ಮ, ಜಿ.ಚೇತನ್. ಹಳ್ಳಿಕೆರೆ -೧ ಕ್ಷೇತ್ರದಿಂದ ನಾಗರತ್ನಮ್ಮ, ಜಯಮ್ಮ, ಕೆ.ದೀಪಕ್. ಹಳ್ಳಿಕೆರೆ -೨ ಕ್ಷೇತ್ರದಿಂದ ಬಿ.ಹೇಮಂತ ಕುಮಾರ್, ಆರ್.ರಾಘವೇಂದ್ರ.
ಕಂಬದಾಳ್ ಹೊಸೂರು ಗ್ರಾಪಂ ಯ ಕಂಬದಾಳ್ ಹೊಸೂರು ಕ್ಷೇತ್ರದಿಂದ ನೇತ್ರಾವತಿ, ಪಾರ್ವತಮ್ಮ, ಸೋಮಪ್ಪ, ಜಿ.ಎನ್.ವೀರೇಶ್ ಗೌಳಿ. ಹೊನ್ನಟ್ಟಿ ಹಳದಮ್ಮ, ಹುಣಸೇಕಟ್ಟೆ-೧ ಕ್ಷೇತ್ರದಿಂದ ಆದೀಲ್ ಬಾಷ, ವಡಿವೇಲ್, ಹುಣಸೇಕಟ್ಟೆ -೨ ಸುಭಾಷ್ ನಗರ ಕ್ಷೇತ್ರದಿಂದ ನಿರ್ಮಲ, ಕೆ.ಶೀಲ, ಶ್ವೇತ ಗಾಯಕ್ವಾಡ್. ಹುಣಸೇಕಟ್ಟೆ -೩ ರಂಗನಾಥ ಪುರ ಕ್ಷೇತ್ರದಿಂದ ಬಿ.ಎಸ್.ಗಂಗಾರಾಮ್, ಎಸ್.ಆರ್.ಶಕುಂತಲ. ತಮ್ಮಡಿ ಹಳ್ಳಿ ಕ್ಷೇತ್ರದಿಂದ ಜಿ.ಸಂತೋಷ್, ಕಾಳನಕಟ್ಟೆ ಕ್ಷೇತ್ರದಿಂದ ದಯಾನಂದ.
ಕಾರೇಹಳ್ಳಿ ಗ್ರಾಪಂ ಯ ಕಾರೇಹಳ್ಳಿ -೧ ಕ್ಷೇತ್ರದಿಂದ ಕೆ.ಹೆಚ್.ಧರ್ಮರಾಯ, ಪಾರ್ವತಮ್ಮ, ಶಾಂತೀಭಾಯಿ, ಕಾರೇಹಳ್ಳಿ -೨ ಕೆ.ಜೆ.ಯೋಗೀಶ್, ಜಯಮ್ಮ. ಬೋಮ್ಮೇನಹಳ್ಳಿ ಕ್ಷೇತ್ರದಿಂದ ಹೆಚ್.ಕೆ.ಅಂಬಿಕಾ, ಕೆ.ಎಂ.ತಿಮ್ಮಯ್ಯ, ಬಿ.ಎನ್.ರಾಜು. ಕಾಳಿಂಗನಹಳ್ಳಿ ಕ್ಷೇತ್ರದಿಂದ ವಿ.ವೆಂಕಟೇಶ್, ರೂಪಶ್ರೀ, ಜಿ.ಮಮತ.
ಅರಳಿಕೊಪ್ಪ ಗ್ರಾಪಂ ಯ ಅರಳಿಕೊಪ್ಪ ಕ್ಷೇತ್ರದಿಂದ ದೀಪಾ, ಸೂರ‍್ಯಾ ನಾಯ್ಕ್, ಗಂಗೂರು ಕ್ಷೇತ್ರದಿಂದ ಲತಾ, ಶಿವಕುಮಾರ್, ಬಾಳೇಮಾರನಹಳ್ಳಿ-೧ ಕ್ಷೇತ್ರದಿಂದ ಜೆ.ಮೋಹನ್ ಕುಮಾರ್, ಬಾಳೇಮಾರನಹಳ್ಳಿ -೨ ಲಕ್ಷ್ಮೀಸಾಗರ ಕ್ಷೇತ್ರದಿಂದ ತಿಪ್ಪಮ್ಮ, ಬಾಗ್ಯಮ್ಮ, ಲಕ್ಷ್ಮೀಭಾಯಿ, ಎಸ್.ಉತ್ತರೇಶ್. ತಾರೀಕಟ್ಟೆ ಕ್ಷೇತ್ರದಿಂದ ಬಿ.ರಾಜ, ಬಿ.ಸುರೇಶ, ಚಿಕ್ಕಗೋಪ್ಪೇನಹಳ್ಳಿ ಕ್ಷೇತ್ರದಿಂದ ಕಾವೇರಿ ಬಾಯಿ, ಯಶೋಧ ಭಾಯಿ, ಕೆ.ರಘುಪ್ರಸಾದ್. ಸಿಂಗನಮನೆ -೧ ಕ್ಷೇತ್ರದಿಂದ ಪ್ರವೀಣಾ, ಮಂಜುಳಾ. ಸಿಂಗನಮನೆ-೨ ಕ್ಷೇತ್ರದಿಂದ ಆರ್.ಈಶ್ವರ್, ಜಿ.ಪಿ.ಲತಾ, ಕೆ.ಟಿ.ಗಿರೀಶ. ಬಿಆರ್‌ಪ್ರಾಜಕ್ಟ್ - ೧ ಕ್ಷೇತ್ರದಿಂದ ಲಕ್ಷ್ಮಿ, ಕೆ.ಅವಿನಾಶ್, ಬಿಆರ್‌ಪ್ರಾಜಕ್ಟ್ -೨ ಕ್ಷೇತ್ರದಿಂದ ಶಿವಶಂಕರ್ ಆರ್ ಡಿಲ್ಲಿ, ಎಂ.ಸಿ.ಕವಿತ, ಕವಿತ ಪುಟ್ಟೇಗೌಡ. ಗ್ಯಾರೇಜ್ ಕ್ಯಾಂಪ್ ಕ್ಷೇತ್ರದಿಂದ ಬಿ.ಮಂಜುನಾಥ, ಮಂಜುಳಾ, ಶಂಕರಘಟ್ಟ ಕ್ಷೇತ್ರದಿಂದ ಕೆ.ಬಿ.ಸುಜಾತ, ಆಶ್ವೀನಿ, ಎಸ್.ಸಿ.ಪುನೀತ್, ಶಾಂತಿ ನಗರ-೧ ಕ್ಷೇತ್ರದಿಂದ ಲಕ್ಷ್ಮೀ, ಎಸ್.ಚಂದನ, ಸರವಣ. ಶಾಂತಿನಗರ -೨ ಕ್ಷೇತ್ರದಿಂದ ಲಲಿತ, ಎನ್.ಆನಂದ್, ಲಕ್ಷ್ಮಮ್ಮ.
ಹಿರೊಯೂರು ಗ್ರಾಪಂ ಯ ಹಿರಿಯೂರು -೧ ಕ್ಷೇತ್ರದಿಂದ ರಾಮಮೂರ್ತಿ, ಜಿ,ಗಂಗಮ್ಮ, ಹಿರಿಯೂರು-೨ ಕ್ಷೇತ್ರದಿಂದ ಅನಿತ, ಜಿ.ಪವಿತ್ರ, ಸಂತೋಷ್. ಹಿರಿಯೂರು-೩ ಕ್ಷೇತ್ರದಿಂದ ಎಲ್.ಕೃಷ್ಣೇಗೌಢ, ಹೆಚ್.ಎಸ್.ಪಲ್ಲವಿ. ನಂಜಾಪುರ ಕ್ಷೇತ್ರದಿಂದ ಎಂ.ನಾಗವೇಣಿ, ಜೆ.ಕಿರಣ್ ರಾಜ್.
ಮೈದೊಳಲು ಗ್ರಾಪಂ ಯ ಮೈದೊಳಲು-೧  ಕ್ಷೇತ್ರದಿಂದ ವಿನೋದ, ಅರ್ಪಿತ, ಎಂ.ಎಸ್.ಲಕ್ಷ್ಮೀಕಾಂತ. ಮೈದೊಳಲು -೨ ಕ್ಷೇತ್ರದಿಂದ ರೇಣುಕಾ ಭಾಯಿ ಮಹಾದೇವ ರಾವ್, ಕೃಷ್ಣೋಜಿರಾವ್. ಮೈದೊಳಲು-೩ ಕ್ಯಾಂಪ್ ಕ್ಷೇತ್ರದಿಂದ ಟಿ.ಪೂಜಾ, ಚಂದ್ರೋಜಿರಾವ್, ಗೀತಮ್ಮ. ಕಲ್ಲಜ್ಜನಾಳ್ ಕ್ಷೇತ್ರದಿಂದ ರಾಮಪ್ಪ, ಗೀತಮ್ಮ ಮಲ್ಲೇಶಪ್ಪ. ಮಲ್ಲಾಪುರ ಕ್ಷೇತ್ರದಿಂದ ಎನ್.ನಾಗೇಶ್ವರ ರಾವ್, ಚಂದ್ರೋಜಿ ರಾವ್, ರತ್ನಮ್ಮ ಅವಿರೋಧ ಆಯ್ಕೆ.
ತಾವರೆಘಟ್ಟ ಗ್ರಾಪಂ ಯ ತಾವರೆಘಟ್ಟ ಕ್ಷೇತ್ರದಿಂದ ರೇಖಾ ಸಂದ್ಯಾ, ಜಿ.ಎಸ್.ಮಹೇಶ್ವರಪ್ಪ, ಆರ್.ಆನಿತ. ಗೊಣೀಬೀಡು ಕ್ಷೇತ್ರದಿಂದ ಜಿ.ಬಿ.ಸುಬ್ರಮಣಿ, ಸ್ವಾಥಿ ನಾಗೇಂದ್ರ ನಾಯ್ಕ್, ಎಲ್.ದೇವ್ಲಾ ನಾಯ್ಕ್. ಮಲ್ಲಿಗೇನಹಳ್ಳಿ ಕ್ಷೇತ್ರದಿಂದ ಶೋಭಾ ಈಶ್ವರ ಗೌಡ, ಪುಷ್ಪಾ ಹನುಮಂತ, ಜಿ.ಆರ್.ಮಂಜುನಾಥ. ಮಾಳೇನಹಳ್ಳಿ ಕ್ಷೇತ್ರದಿಂದ ಎಂ.ವಿಲೋಕೇಶ್, ಲತಾ ಆಡವಿ, ಗಿರೀಶ್ ಬಿ ಮಾಳೇನಹಳ್ಳಿ. ನೆಲ್ಲಿಸರ ಕ್ಷೇತ್ರದಿಂದ ಸುಜಾತ ಎಸ್ ಕುಮಾರ್, ಸೋಮೇಶ್ ರವರುಗಳು ಆಯ್ಕೇಯಾಗಿದ್ದಾರೆ.


ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳ ಮಾರಾಟ : ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಮನವಿ
ಭದ್ರಾವತಿ, ಡಿ. ೩೧: ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ನಗರದ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಹಳೇನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆ ಮುಂಭಾಗದಲ್ಲಿರುವ ಔಷಧಿ ಅಂಗಡಿಯೊಂದರಲ್ಲಿ 'ನೈಟ್ರೋವಿಟ್ ೧೦ಎಂ.ಜಿ' ಎಂಬ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ನಿಗದಿಪಡಿಸಲಾಗಿರುವ ದರದ ಬದಲಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮಾತ್ರೆಗಳ ಸೇವನೆಯಿಂದ ಅಪ್ರಾಪ್ತ ಬಾಲಕರು ದಾರಿ ತಪ್ಪುತ್ತಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರ ವಿರದ್ಧ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕೆಂದು ಆಗ್ರಹಿಸಲಾಗಿದೆ.
ಜನಪರ ವೇದಿಕೆ ಜಿಲ್ಲಾ ಕಾರ್ಯಧ್ಯಕ್ಷ ಕೆ. ಸುದೀಪ್‌ಕುಮಾರ್, ತಾಲೂಕು ಅಧ್ಯಕ್ಷ ಎಸ್.ಎಸ್ ಬೈರಪ್ಪ, ಮುಕುಂದಪ್ಪ, ಜಿಲ್ಲಾ ಮುಖಂಡರಾದ ಫ್ರಾನ್ಸಿಸ್, ಪ್ರಸನ್ನಕುಮಾರ್, ಮಹಮದ್ ಶಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿತ್ರ: ಡಿ೩೧-ಬಿಡಿವಿಟಿ
ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.



Wednesday, December 30, 2020

ಭದ್ರಾವತಿ ಗ್ರಾ.ಪಂ. ಚುನಾವಣೆ : ಬಹುತೇಕ ಹಿಂದಿನ ಸದಸ್ಯರೇ ಪುನಃ ಆಯ್ಕೆ

ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಸೇರಿರುವುದು.
     ಭದ್ರಾವತಿ, ಡಿ. ೩೦: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಮಧ್ಯಾಹ್ನ ೧ ಗಂಟೆ ವೇಳೆಗೆ ಶೇ.೫೦ರಷ್ಟು ಫಲಿತಾಂಶ ಹೊರಬಿದ್ದಿದೆ.
      ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.  ಫಲಿತಾಂಶದ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿದ್ದಾರೆ. ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ಸಿ.ಆರ್ ಶಿವರಾಮ್ ಮತ್ತು ಮಾವಿನಕೆರೆ ಗ್ರಾ.ಪಂ. ಕೆಂಚೇನಹಳ್ಳಿ ಕ್ಷೇತ್ರ-೫ರಿಂದ ಸುರೇಶ್ ತಲಾ ೪ನೇ ಬಾರಿಗೆ, ಅಂತರಗಂಗೆ ಗ್ರಾ.ಪಂ. ಕ್ಷೇತ್ರ-೧ರಿಂದ ಬಿ. ನಾಗೇಶ್ ಮತ್ತು ಯರೇಹಳ್ಳಿ ಗ್ರಾ.ಪಂ. ಕ್ಷೇತ್ರ-೧ರಿಂದ ಈ ಚಂದ್ರಶೇಖರ್ ಹಾಗು ಕ್ಷೇತ್ರ-೩ರಿಂದ ಎನ್. ಉಮೇಶ್ ತಲಾ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಿರಿಯೂರು ಗ್ರಾ.ಪಂ.ಯಲ್ಲಿ ಗಂಗಮ್ಮ ೪ನೇ ಬಾರಿಗೆ ಮತ್ತು ಪವಿತ್ರ ಜಿ. ಮಂಜುನಾಥ್ ೨ನೇ ಬಾರಿಗೆ, ಸಿಂಗನಮನೆ ಗ್ರಾ.ಪಂ.ಯಲ್ಲಿ ಗಿರೀಶ್ ಮತ್ತು ಪ್ರವೀಣ್ ಮರು ಆಯ್ಕೆಯಾಗಿದ್ದಾರೆ. ಇದೆ ರೀತಿ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಗಮನ ಸೆಳೆದ ಗ್ರಾಮ ಪಂಚಾಯಿತಿ:
    ಈ ಬಾರಿ ಚುನಾವಣೆಯಲ್ಲಿ ಯರೇಹಳ್ಳಿ ಪಂಚಾಯಿತಿ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿದೆ. ಮುಖ್ಯವಾಗಿ ಕುಟುಂಬ ಸದಸ್ಯರ ಸ್ಪರ್ಧೆಯಲ್ಲಿ ಒಂದು ಕ್ಷೇತ್ರದಲ್ಲಿ ಅಪ್ಪ ಸಿ.ಆರ್ ಶಿವರಾಂ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಮಗ ರಘು ಸೋಲು ಕಂಡಿದ್ದಾರೆ. ಇದೆ ರೀತಿ ಎಪಿಎಂಸಿ ನಿರ್ದೇಶಕ ಎನ್. ಉಮೇಶ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಇವರ ನಾದಿನಿ(ತಮ್ಮನ ಪತ್ನಿ) ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಗ್ರಾಮ ಪಂಚಾಯಿತಿ ಹಿಂದಿನ ಅವಧಿಯ ೩ ಸದಸ್ಯರು ಮರು ಆಯ್ಕೆಯಾಗಿದ್ದಾರೆ.
     ಬಹತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಗರ ಗೆಲುವು:
   ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅನುಕಂಪದ ಅಲೆ ಕಂಡು ಬಂದಿದ್ದು, ಕೂಡ್ಲಿಗೆರೆ, ಹಿರಿಯೂರು ಮತ್ತು ಸಿಂಗನಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಾಯ್ದುಕೊಂಡಿದೆ ಎನ್ನಲಾಗಿದೆ.
    ೨ ಮತ ಅಂತರದಿಂದ ಗೆಲುವು : ಮರು ಮತದಾನಕ್ಕೆ ಮನವಿ    
ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಯೊಬ್ಬರು ೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಮಾಡುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅರಹತೊಳಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪತ್ರಕರ್ತ ರಂಗನಾಥ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಕೆಲಸ ಮಾಡುವ ವ್ಯಕ್ತಿಯೋರ್ವನ ಪತ್ನಿ ಲಕ್ಷ್ಮಿ ಎಂಬುವರು ಇದೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದೆ ಮೊದಲ ಬಾರಿಗೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಒಟ್ಟು ೧೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಪೈಕಿ ಕಲ್ಲಹಳ್ಳಿ ಕ್ಷೇತ್ರದಿಂದ ಕೆ.ವಿ ಧನಂಜಯ, ನಾಗತಿ ಬೆಳಗಲು ಕ್ಷೇತ್ರದಿಂದ ಲಕ್ಷ್ಮಮ್ಮ ಮತ್ತು ಮಂಜುಳ ಹಾಗು ಬಿಆರ್‌ಪಿಯಲ್ಲಿ ಲತಾ ಒಟ್ಟು ೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೧೦ ಕ್ಷೇತ್ರಗಳಲ್ಲಿ ೨ನೇ ಸ್ಥಾನ ಕಾಯ್ದುಕೊಂಡು ಗಮನೆ ಸೆಳೆದಿದೆ.
   ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಉಳಿದಂತೆ ೩೭೫ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು ೧೦೭೦ ಅಭ್ಯರ್ಥಿಗಳು ಕಣದಲ್ಲಿದ್ದರು.  
     ಒಟ್ಟು ೭೫ ಟೇಬಲ್‌ಗಳ ಎಣಿಕೆ ನಡೆದಿದ್ದು, ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಹಾಗು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಬೆಂಬಲಿಗರು ಸಂಭ್ರಮಿಸಿದರು.


ಭದ್ರಾವತಿ ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ೪ನೇ ಬಾರಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಅಭ್ಯರ್ಥಿ ಸಿ.ಆರ್ ಶಿವರಾಮ್.






Tuesday, December 29, 2020

ಗ್ರಾ.ಪಂ. ಚುನಾವಣೆ : ೭೫ ಟೇಬಲ್, ೨೨೫ ಮಂದಿ ಸಿಬ್ಬಂದಿ, ೧೨೦ ಪೊಲೀಸರು

ಭದ್ರಾವತಿ: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ೧೦೭೦ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.
    ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಡಿ.೨೨ರಂದು ನಡೆದ ಚುನಾವಣೆಯ ಮತದಾನದಲ್ಲಿ ಒಟ್ಟು ೧,೧೯,೩೫೯ ಮತದಾರರ ಪೈಕಿ ೯೮,೬೧೪ ಮಂದಿ ಮತ ಚಲಾಯಿಸುವ ಮೂಲಕ ಶೇ.೮೨.೬೨ ಮತದಾನ ನಡೆದಿದೆ. ಈ ಪೈಕಿ ೪೯,೪೩೯ ಮಹಿಳೆಯರು, ೪೯,೧೭೫ ಪುರುಷರು ಒಳಗೊಂಡಿದ್ದಾರೆ. 
    ತಾಲೂಕಿನ ನಿಂಬೆಗೊಂದಿ ಗ್ರಾಮ ಪಂಚಾಯಿತಿಯ ಇಂದಿರಾನಗರದ ಮತಗಟ್ಟೆ ನಂ. ೯ರಲ್ಲಿ ಅತಿಹೆಚ್ಚಿನ ಮತದಾನ ನಡೆದಿದೆ. ಒಟ್ಟು ೪೫೯ ಮತದಾರರಲ್ಲಿ ೪೩೭ ಮತದಾರರು ಮತ ಚಲಾಯಿಸಿದ್ದು, ಶೇ. ೯೫.೨೧ ರಷ್ಟು ಮತದಾನ ನಡೆದಿದೆ. ಇದೆ ರೀತಿ ಅರಳಿಬಿಳಚಿ ಗ್ರಾಮ ಪಂಚಾಯಿತಿಯ ಅರಬಿಳಚಿ ಕ್ಯಾಂಪ್-೧ರ ಮತಗಟ್ಟೆ ನಂ.೭೫ಎ ಒಟ್ಟು ೫೧೭ ಮತದಾರರಿದ್ದು, ಈ ಪೈಕಿ ಅತಿ ಕಡಿಮೆ ೩೧೦ ಮತದಾರರು ಮತ ಚಲಾಯಿಸಿದ್ದು, ಶೇ. ೫೯.೯೬ರಷ್ಟು ಮತದಾನ ನಡೆದಿದೆ.
    ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೩೭೫ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಕೂಡ್ಲಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿ ಹೆಚ್ಚು ೧೯ ಅಭ್ಯರ್ಥಿಗಳು ಕಣದಲ್ಲಿರುವುದು ಗಮನ ಸೆಳೆದಿದೆ.
       ೭೫ ಟೇಬಲ್‌ಗಳಲ್ಲಿ ಮತ ಎಣಿಕೆ :
   ಈ ಬಾರಿ ೭೫ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಟೇಬಲ್‌ಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಂಜೆ ಸುಮಾರು ೬ಕ್ಕೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.




vivo ಸ್ಮಾರ್ಟ್‌ಫೋನ್‌ನಿಂದ ಕಳುಹಿಸಲಾಗಿದೆ

೪೦೦೦ ಜಿ+೩ ಗುಂಪು ಮನೆ ಯೋಜನೆ : ಉಳಿತಾಯ ಖಾತೆ ತೆರೆಯಲು ತಾಂತ್ರಿಕ ಸಮಸ್ಯೆ

ಭದ್ರಾವತಿ, ಡಿ. ೨೯: ನಗರಸಭೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ೪೦೦೦ ಜಿ+೩ ಗುಂಪು ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ಮೊತ್ತ ಜಮಾ ಮಾಡಲು ನಗರಸಭೆ ಕಛೇರಿಯ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ತಾಂತ್ರಿಕ ತೊಂದರೆ ಎದುರಾಗಿದೆ.
    ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಡಿ.೨೮ರೊಳಗೆ ಮೊದಲನೇ ಕಂತಿನ ವಂತಿಕೆ ರು.೧೦,೦೦೦ ಜಮಾ ಮಾಡಲು  ನಗರಸಭೆ ಕಛೇರಿಯ ಯೂನಿಯನ್ ಬ್ಯಾಂಕ್ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಈ ಹಿಂದೆ ಆಶ್ರಯ ಸಮಿತಿ ತೀರ್ಮಾನದಂತೆ ಸೂಚಿಸಲಾಗಿತ್ತು. ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸುವುದಾಗಿ ಪೌರಾಯುಕ್ತರು ಮನೋಹರ್ ತಿಳಿಸಿದ್ದಾರೆ.

ಕುವೆಂಪು ಹುಟ್ಟುಹಬ್ಬದ ಅಂಗವಾಗಿ ‘ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ’ಕ್ಕೆ ಚಾಲನೆ

ಕನ್ನಡ ಕಾಯಕಪಡೆ ಜಿಲ್ಲಾ ಸದಸ್ಯ ಅಪರಂಜಿ ಶಿವರಾಜ್ ನೇತೃತ್ವದಲ್ಲಿ ಜಾಗೃತಿ ಜಾಥಾ

ಭದ್ರಾವತಿ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
ಭದ್ರಾವತಿ, ಡಿ. ೨೯: ಕನ್ನಡ ಕಾಯಕ ವರ್ಷ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಕೈಗೊಂಡಿರುವ 'ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ'ಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
   ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
    ಅಲ್ಲದೆ ಬಿ.ಎಚ್ ರಸ್ತೆಯಲ್ಲಿ ಜಾಥಾ ನಡೆಸುವ ಮೂಲಕ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಹಣಕಾಸು ಸಂಸ್ಥೆಗಳು, ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಕ್ಲಿನಿಕ್‌ಗಳು, ಎಲ್ಲಾ ಸಂಘ-ಸಂಸ್ಥೆಗಳು ಶುದ್ಧ ಕನ್ನಡ ನಾಮಫಲಕ ಅನಾವರಣಗೊಳಿಸುವಂತೆ ಜಾಗೃತಿ ಮೂಡಿಸಲಾಯಿತು.
    ಕನ್ನಡ ಕಾಯಕ ಪಡೆ ಜಿಲ್ಲಾ ಸದಸ್ಯ, ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ಅಭಿಯಾನದ ನೇತೃತ್ವ ವಹಿಸಿದ್ದರು. ಸುನಿತಾ, ಶಿಮಮೂರ್ತಿ, ಕುಂಚ ಕಲಾವಿದ ರಾಜು, ರಾಜಶೇಖರ್, ನಂಜುಂಡಪ್ಪ, ಶಿವಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಮನವಿ

ಭದ್ರಾವತಿ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು
    ಭದ್ರಾವತಿ, ಡಿ. ೨೯: ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು.
     ನಗರಸಭೆ ಎಲ್ಲಾ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮುಂದಿನ ೫೦ ವರ್ಷಗಳಿಗೆ ಪರಿಶುದ್ಧ ಹಾಗು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ, ಹಳೇಯ ಟ್ಯಾಂಕ್‌ಗಳನ್ನು ದುರಸ್ತಿಗೊಳಿಸುವುದು, ವಿತರಣಾ ಕೊಳವೆಗಳನ್ನು ಬದಲಿಸುವುದು, ಹಳೇನಗರ ಮತ್ತು ನ್ಯೂಟೌನ್ ಭಾಗದ ತಲಾ ಒಂದೊಂದು ಪಂಪ್‌ಹೌಸ್‌ಗಳಲ್ಲಿ ವಿದೇಶಿ ಜಪಾನ್ ತಂತ್ರಜ್ಞಾನದ ಮೈಕ್ರೋ ಫೈಬರ್ ಫಿಲ್ಟರ್ ಅಳವಡಿಕೆ ಸ್ಕ್ಯಾಡಾ ಸ್ಕೀಂ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳುವುದು.
     ನ್ಯೂಟೌನ್ ಭಾಗದ ಜನ್ನಾಪುರ ಎನ್‌ಟಿಬಿ ಮತ್ತು ಸಂಪಿಗೆ ಲೇಔಟ್, ಬೊಮ್ಮನಕಟ್ಟೆ, ಕಡದಕಟ್ಟೆ, ಸಿದ್ದಾಪುರ ಸೇರಿದಂತೆ ಒಳಚರಂಡಿ ಕಾಮಗಾರಿ ನಡೆಯದಿರುವ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
    ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.