ಭದ್ರಾವತಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಶುಕ್ರವಾರ ಟ್ಯಾಬ್ ಮೂಲಕ ಕಾಗದ ರಹಿತ ಬಜೆಟ್ ಮಂಡಿಸಿದರು.
ಭದ್ರಾವತಿ : ಈ ಬಾರಿ ನಗರಸಭೆ ವತಿಯಿಂದ ವಿಶಿಷ್ಟವಾಗಿ ೯೨.೬೫ ಲಕ್ಷ ರು. ಉಳಿತಾಯದ ಕಾಗದ ರಹಿತ ಬಜೆಟ್ ಶುಕ್ರವಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಟಿ ವಿ ಪ್ರಕಾಶ್ ಮಂಡಿಸಿದರು.
ಇದೇ ಮೊದಲ ಬಾರಿಗೆ ಟ್ಯಾಬ್ ಬಳಸಿ ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಿತು. ಪ್ರಾರಂಭಿಕ ಶಿಲ್ಕು ೩,೧೦೩.೪೦ ಲಕ್ಷ ರು., ನಿರೀಕ್ಷಿತ ಆದಾಯ ೬,೫೩೩.೨೫ ಲಕ್ಷ ರು , ಒಟ್ಟು ಆದಾಯ ೯,೬೩೬.೬೫ ಲಕ್ಷ ರು. ಗಳಾಗಿವೆ. ಉಳಿದಂತೆ ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆ ೫೪೫ ಲಕ್ಷ ರು., ಅಭಿವೃದ್ಧಿ ಶುಲ್ಕ ಮತ್ತು ಸೆಕ್ಷನ್ ೧೦೮ರ ಪುರಸಭೆ ಕಾಯ್ದೆ ೧೯೬೪ರಂತೆ(ಬಿ ಖಾತೆ) ೧೭೦ ಲಕ್ಷ ರು., ವಾಣಿಜ್ಯ ಮಳಿಗೆ ಬಾಡಿಗೆ ೨೦ ಲಕ್ಷ ರು., ಇತರೇ ಕಟ್ಟಡಗಳಿಂದ ಬಾಡಿಗೆ ೪ ಲಕ್ಷ ರು., ಉದ್ದಿಮೆ ಪರವಾನಿಗೆ ೨೦ ಲಕ್ಷ ರು., ಜಾಹೀರಾತು ಶುಲ್ಕ ೫ ಲಕ್ಷ ರು, ಇತರೆ ೨೩೪.೭೫ ಲಕ್ಷ ರು. ಹಾಗು ನೀರು ಬಳಕೆದಾರರ ಶುಲ್ಕ ೬೦೫ ಲಕ್ಷ ರು. ಸೇರಿದಂತೆ ೧೬೦೩.೭೫ ಲಕ್ಷ ರು. ಹಾಗು ಸರ್ಕಾರದ ವಿವಿಧ ಅನುದಾನಗಳಿಂದ ಎಸ್‌ಎಫ್‌ಸಿ ವೇತನ ೭೬೩ ಲಕ್ಷ ರು., ಎಸ್‌ಎಫ್‌ಸಿ ವಿದ್ಯುತ್ ಶುಲ್ಕ ೮೫೨ ಲಕ್ಷ ರು., ಎಸ್‌ಎಫ್‌ಸಿ ಮುಕ್ತಿ ನಿಧಿ/ವಿಶೇಷ ೫೪೧ ಲಕ್ಷ ರು., ಡೇ ನಲ್ಮ್ ೮೦ ಲಕ್ಷ ರು., ೧೫ನೇ ಹಣಕಾಸು ೭೫೧ ಲಕ್ಷ ರು., ಅಮೃತ್ ಯೋಜನೆ ೮೦೦ ಲಕ್ಷ ರು., ಸ್ವಚ್ಛ್ ಭಾರತ್/ಡಿಪಿಎಆರ್/ಇತ್ಯಾದಿ ೩೪೯.೭೫ ಲಕ್ಷ ರು., ಇತರೆ ಇಲಾಖೆಗಳಿಗೆ ಪಾವತಿಸಬೇಕಾದ ವಸೂಲಾತಿಗಳು ೬೪೨.೭೫ ಲಕ್ಷ ರು. ಹಾಗು ಗೃಹಭಾಗ್ಯ ಯೋಜನೆ ೧೫೦ ಲಕ್ಷ ರು. ಸೇರಿದಂತೆ ಒಟ್ಟು ೬೫೩೩.೫೦ ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ.
ಅಮೃತ್ ನಗರ ಯೋಜನೆ ೮೦೦ ಲಕ್ಷ ರು., ಮುಂದುವರೆದ ಕಾಮಗಾರಿಗಳು ೧,೨೫೭.೫೦ ಲಕ್ಷ ರು., ಸಿಬ್ಬಂದಿ ವೇತನ/ಭತ್ಯೆಗಳು/ಬಾಕಿ ಪಾವತಿಗಳು ೭೬೩ ಲಕ್ಷ ರು., ಬೀದಿ ದೀಪ ಹಗು ನೀರು ಸರಬರಾಜು ವಿದ್ಯುತ್(ಬಾಕಿ ಸೇರಿಕೊಂಡು) ೮೫೨ ಲಕ್ಷ ರು., ಹೊರ ಗುತ್ತಿಗೆ ಕಾರ್ಮಿಕರ ವಿಶೇಷ ವೇತನ ೧೯ ಲಕ್ಷ ರು., ಪೌರಕಾರ್ಮಿಕರ ದಿನಾಚರಣೆ/ಉಪಹಾರ/ಸುರಕ್ಷ ಸಲಕರಣೆಗಳು, ದಸರಾ ಹಬ್ಬ ೩೦ ಲಕ್ಷ ರು., ಇತರೆ ವಂತಿಕೆಗಳು ೪೦೫ ಲಕ್ಷ ರು., ಬಡತನ ನಿರ್ಮೂಲನಾ ಕಾರ್ಯಕ್ರಮ ೨೫೩.೭೫ ಲಕ್ಷ ರು., ಕ್ರೀಡೆ, ಸಾಂಸ್ಕೃತಿಕ ಕಾರ್ಯಕಮಗಳಿಗೆ ಪ್ರೋತ್ಸಾಹ ಧನ ೫ ಲಕ್ಷ ರು., ಕಛೇರಿ ವೆಚ್ಚ ೧೮೬.೧೫ ಲಕ್ಷ ರು., ದಾಸ್ತಾನು ಖರೀದಿ/ಎಸ್‌ಡಬ್ಲ್ಯೂಎಂ ಸಲಕರಣೆ ೧೧೦ ಲಕ್ಷ ರು., ಕಾನೂನು ಶುಲ್ಕ ೨೫ ಲಕ್ಷ ರು., ವಾಹನ ಬಾಡಿಗೆ ೧೦ ಲಕ್ಷ ರು., ಗೌರವಧನ/ಸಭಾ ವೆಚ್ಚಗಳು ೩೫ ಲಕ್ಷ ರು., ಕಟ್ಟಡಗಳ ದುರಸ್ತಿ/ನವೀಕರಣ ೫೬೨ ಲಕ್ಷ ರು., ಡೇ ನಲ್ಮ್ ಕಾರ್ಯಕ್ರಮ ೮೦ ಲಕ್ಷ ರು., ರಸ್ತೆ ಮತ್ತು ಚರಂಡಿಗಳು ೧೨೨೫ ಲಕ್ಷ ರು, ಬಸ್ ಶೆಲ್ಟರ್ ೨೧೭ ಲಕ್ಷ ರು, ಬೀದಿ ನಾಯಿಗಳ ಎಬಿಸಿ ಕಾರ್ಯಕ್ರಮಕ್ಕೆ ೧೫ ಲಕ್ಷ ರು., ಪ್ರಮುಖ ವೃತ್ತಗಳ ಅಭಿವೃದ್ಧಿ/ನಾಮಫಲಕಗಳು ೫೦ ಲಕ್ಷ ರು., ವಾಹನ ಯಂತ್ರೋಪಕರಣ ಮತ್ತು ಇತರೇ ೧೫೦.೨೦ ಲಕ್ಷ ರು., ಬೀದಿ ದೀಪ ನಿರ್ವಹಣೆ ೩೨೫ ಲಕ್ಷ ರು., ಸರ್ಕಾರಕ್ಕೆ ಪಾವತಿಸಬೇಕಾದ ಸೆಸ್, ಶಾಸನಬದ್ಧ ಪಾವತಿಗಳು ಹಾಗು ಗುತ್ತಿಗೆದಾರರ ಮರು ಪಾವತಿ ೮೬೭.೯೦ ಲಕ್ಷ ರು., ನೀರು ಸರಬರಾಜು ವಿಭಾಗ ೧೩೯ ಲಕ್ಷ ರು., ಮನೆ ಮನೆ ಕಸ ಸಂಗ್ರಹಣೆ ೧೦೦ ಲಕ್ಷ ರು, ಉದ್ಯಾನವನ ಅಭಿವೃದ್ಧಿ ೨೫೦ ಲಕ್ಷ ರು ಹಾಗು ಅಂಗನವಾಡಿ ಕಟ್ಟಡಗಳ ದುರಸ್ತಿ ೨೦ ಲಕ್ಷ ರು. ಸೇರಿದಂತೆ ಒಟ್ಟು ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
ಹೊಸ ಯೋಜನೆಗಳು :
* ೨೬ ಕೋ. ರು. ವೆಚ್ಚದಲ್ಲಿ ಹಳೇನಗರ ಬಸವೇಶ್ವರ ವೃತ್ತದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ.
* ೯೨ ಲಕ್ಷ ರು. ವೆಚ್ಚದಲ್ಲಿ ಪ್ರಮುಖ ವೃತ್ತಗಳ ಅಭಿವೃದ್ಧಿ.
* ಕೆ ಪಿ ಟಿ ಸಿ ಎಲ್ ಮಾದರಿಯಲ್ಲಿ ನೀರಿನ ಶುಲ್ಕ ವಸೂಲಾತಿ.
* ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ, ೮ ಈ ಘಟಕಗಳ ನಿರ್ಮಾಣ.
* ಬಯಲು ಮುಕ್ತ ಶೌಚ ನಗರ ಘೋಷಣೆ .
* ಅಂಗವಿಕಲರಿಗಾಗಿ ಪ್ರತ್ಯೇಕ ಸಮುದಾಯ ಭವನ .
ಹಳೇ ಯೋಜನೆಗಳು:
* ಮನೆ ಮನೆ ಕಸ ಸಂಗ್ರಹಣೆಗೆ ೧೦೦ ಲಕ್ಷ ರು. ಮೀಸಲು.
* ತಲಾ ೭.೫೦ ಲಕ್ಷ ರು. ಅನುದಾನದಲ್ಲಿ ೭೪ ಜನ ಪೌರಕಾರ್ಮಿಕರಿಗೆ ಗೃಹ ಭಾಗ್ಯ.
* ೪೦೦೦ ಜಿ+೩ ಗುಂಪು ಮನೆ ಯೋಜನೆ.
* ೧೮೦.೨೩ ಲಕ್ಷ ರು. ವೆಚ್ಚದಲ್ಲಿ ನಗರಸಭೆ ಬಿ ಮತ್ತು ಸಿ ಗ್ರೂಪ್ ಅಧಿಕಾರಿಗಳು,
ನೌಕರರಿಗೆ ವಸತಿ ಗೃಹ.
* ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ೨೧.೦೬ ಕೋ.ರು. ಹೆಚ್ಚುವರಿ ಅನುದಾನ.
ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿ ಸಹ ಉಳಿತಾಯ ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಾಗಿದ್ದು, ಅಲ್ಲದೆ ಹೊಸ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವರ್ಗ ಯಶಸ್ವಿಯಾಗಿದೆ.
ಪೌರಾಯುಕ್ತ ಮನೋಹರ್, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ, ಪರಿಸರ ಅಭಿಯಂತರ ಪ್ರಭಾಕರ್, ಇಂಜಿನಿಯರ್ ರಂಗರಾಜಪುರೆ, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.