ಧನಂಜಯ
ಭದ್ರಾವತಿ, ಸೆ. ೧೨: ನಗರದ ಮೈಸೂರು ಕಾಗದ ಕಾರ್ಖಾನೆಯ ನೌಕರರ ಧನಂಜಯ(೪೨) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಪತ್ನಿ, ಓರ್ವ ಪುತ್ರ ಹೊಂದಿದ್ದು, ಕಾಗದನಗರದ ೧ನೇ ವಾರ್ಡ್‌ನ ಕಾರ್ಖಾನೆಯ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಎಂಪಿಎಂ ಕಾರ್ಖಾನೆಯ ಟಿ.ಜಿ ಹೌಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಧನಂಜಯ ಅವರನ್ನು ವಾರ್ತಾ ಇಲಾಖೆಯ ಬಳ್ಳಾರಿ ಕಛೇರಿಯ ಎಂಸಿಎ(ಮಾರ್ಕೇಟಿಂಗ್ ಕನ್ಸಲ್ಟೆನ್ಸಿ ಏಜೆನ್ಸಿ) ವಿಭಾಗದಲ್ಲಿ ನಿಯೋಜನೆ ಮೇಲೆ ನೇಮಕಗೊಳಿಸಲಾಗಿತ್ತು.
ದ್ವಿಚಕ್ರವಾಹನದಲ್ಲಿ ಭದ್ರಾವತಿ ಬರುವಾಗ ಚಿತ್ರದುರ್ಗದ ಹೊಳಲ್ಕೆರೆ ಬಳಿ ಅಘಘಾತಗೊಂಡು ಮೃತಪಟ್ಟಿದ್ದಾರೆ. ಮೃತರ ನಿಧನಕ್ಕೆ ಎಂಪಿಎಂ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.
No comments:
Post a Comment