ಒಟ್ಟು ೫ ಮಂದಿ ಕೆಲಸಕ್ಕೆ ತೆರಳಿರುವ ಬಗ್ಗೆ ಮಾಹಿತಿ, ಇಬ್ಬರು ಮೃತಪಟ್ಟಿರುವುದು ಖಚಿತ
ಮಂಜುನಾಥ
ಪ್ರವೀಣ್ ಕುಮಾರ್
ಭದ್ರಾವತಿ, ಜ. ೨೨: ಹುಣಸೋಡು ಕಲ್ಲು ಗಣಿಗಾರಿಕೆ ಬಳಿ ಗುರುವಾರ ರಾತ್ರಿ ನಡೆದಿರುವ ಸ್ಪೋಟ ಪ್ರಕರಣದಲ್ಲಿ ತಾಲೂಕಿನ ಅಂತರಗಂಗೆ ವ್ಯಾಪ್ತಿಯ ಇಬ್ಬರು ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿದೆ.
ಒಟ್ಟು ೫ ಮಂದಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ಪೈಕಿ ಅಂತರಗಂಗೆ ತಾಲೂಕು ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಕ್ರಾಸ್ ನಿವಾಸಿ ಮಂಜುನಾಥ(೩೮) ಮತ್ತು ಬಸವನಗುಡಿ ಮೊದಲನೇ ಕ್ರಾಸ್ ನಿವಾಸಿ ಪ್ರವೀಣ್‌ಕುಮಾರ್(೪೦) ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಳಿದ ೩ ಮಂದಿ ಪುನಿತ್, ನಾಗರಾಜ್ ಮತ್ತು ಶಶಿಕುಮಾರ್ ಎಂಬುವರ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಮಂಜುನಾಥ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತ ತಾಯಿ, ಹೆಂಡತಿ ಹಾಗು ೪ ವರ್ಷದ ಹೆಣ್ಣು ಮಗು ಮತ್ತು ೧೫ ವರ್ಷದ ಗಂಡು ಮಗನೊಂದಿಗೆ ವಾಸವಾಗಿದ್ದನು ಎನ್ನಲಾಗಿದೆ. ೪ ಜನ ಸಹೋದರಿಯರನ್ನು ಹೊಂದಿದ್ದು, ಕುಟುಂಬಕ್ಕೆ ಈತನೇ ಆಧಾರವಾಗಿದ್ದನು. ಸಾವಿನ ಸುದ್ದಿ ತಿಳಿಯುತ್ತಿದ್ದದಂತೆ ಈತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂಜುನಾಥ್ ಹುಣಸೋಡು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿರುವ ಬಗ್ಗೆ ನಿಖರವಾದ ಮಾಹಿತಿ ಯಾರಿಗೂ ತಿಳಿದಿರಲಿಲ್ಲ.
ಪ್ರವೀಣ್‌ಕುಮಾರ್ ಈತನು ಸಹ ತಾಯಿ, ಹೆಂಡತಿ ಹಾಗು ೬ ಗಂಡು ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದು, ಪ್ರಸ್ತುತ ಈತನ ಹೆಂಡತಿ ಗರ್ಭೀಣಿಯಾಗಿದ್ದಾಳೆ ಎಂಬ ಮಾಹಿತಿ ತಿಳಿದು ಬಂದಿದೆ. ಈತ ಮೊದಲು ಹಾಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದನು. ಆ ನಂತರ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ಇತರ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದನು ಎನ್ನಲಾಗಿದೆ. ಈತನ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಾಗಿದೆ. ಅಲ್ಲದೆ ಹುಣಸೋಡು ಗ್ರಾಮಕ್ಕೆ ಕೆಲಸಕ್ಕೆ ತೆರಳಿದ್ದ ೫ ಮಂದಿಯಲ್ಲಿ ಉಳಿದ ೪ ಮಂದಿ ಈತನ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬುದು ಸ್ಥಳೀಯರಿಂದ ತಿಳಿದು ಬಂದಿದೆ. ಆದರೆ ಕಲ್ಲು ಗಣಿಗಾರಿಕೆ ಕೆಲಸಕ್ಕೆ ೫ ಮಂದಿ ಹೋಗಿರುವ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಕಲ್ಲು ಗಣಿಗಾರಿಕೆ ಕೆಲಸಕ್ಕೆ ಕರೆದುಕೊಂಡು ಹೋದವರು ಯಾರು, ಹೇಗೆ ಹೋದರು. ಎಷ್ಟು ದಿನದಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಇತ್ಯಾದಿ ಮಾಹಿತಿ ತಿಳಿದು ಬರಬರಬೇಕಾಗಿದೆ.
No comments:
Post a Comment