ಎಸಿಬಿ ಬಲೆಗೆ ಡಾಟಾ ಎಂಟ್ರಿ ಆಪರೇಟರ್ ವೇಣು
ಭದ್ರಾವತಿ, ಜ. ೧೯: ಇಲ್ಲಿನ ಸಿದ್ದರೂಢನಗರದ ವಾಣಿಜ್ಯ ತೆರಿಗೆ ಇಲಾಖೆ ಕಛೇರಿಯಲ್ಲಿ ದಿನಗೂಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಡಾಟಾ ಎಂಟ್ರಿ ಆಪರೇಟರ್ ವೇಣು(೩೬) ಎಂಬಾತ ಶಾಮಿಯಾನ ಅಂಗಡಿಯೊಂದರ ಜಿಎಸ್‌ಟಿ ನೋಂದಣಿಗಾಗಿ ರು. ೨,೫೦೦ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
ಪೊಲೀಸ್ ಉಪಾಧೀಕ್ಷಕ ಪಿ. ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಠಾಣಾಧಿಕಾರಿ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ್, ರಘುನಾಯ್ಕ್, ನಾಗರಾಜ್, ಸುರೇಂದ್ರ, ಹರೀಶ್ ಮತ್ತು ಯೋಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment