ನಾನು ಹುಟ್ಟಿದ್ದು ಜಿಂಕ್‌ಲೈನ್‌ನಲ್ಲಿ, ಬಾಲ್ಯದಿಂದಲೂ ಪ್ರೀತಿಯ ಒಡನಾಟ ಹೊಂದಿರುವ ಹಾಗು ಈಗಲೂ ನನ್ನ ನೆಚ್ಚಿನ ನಾಯಕರಾಗಿ ಉಳಿದುಕೊಂಡಿರುವ ಏಕೈಕ ನಾಯಕ ಎಂದರೆ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರು ಮಾತ್ರ ಎಂದು ನೆನಪು ಮಾಡಿಕೊಳ್ಳುತ್ತಾರೆ ಜಿಂಕ್ ನಿವಾಸಿ, ದಿವಂಗತ ಮಂಜುನಾಥ್ ಹಾಗು ಹೇಮಾವತಿ ಅವರ ಪುತ್ರ ದಿಲೀಪ್.
ಅಪ್ಪಾಜಿ ಅವರ ಮೊದಲ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ದಿಲೀಪ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪಾಜಿ ಹಾಗು ನಮ್ಮ ಕುಟುಂಟಕ್ಕೆ ತುಂಬಾ ಹಳೇಯದಾದ ಆತ್ಮೀಯ ಒಡನಾಟವಿದ್ದು, ಅಪ್ಪಾಜಿ ಅವರಲ್ಲಿನ ಜಾತ್ಯಾತೀತ ಮನೋಭಾವ, ಬಡವರ ಬಗೆಗಿನ ಕಾಳಜಿ ಇಂದಿಗೂ ನಮ್ಮನ್ನು ಆಕರ್ಷಿಸುತ್ತಿದೆ. ಈ ಕಾರಣಕ್ಕಾಗಿ ಅವರೊಂದಿಗೆ ನಮ್ಮ ಕುಟುಂಬ ಗುರುತಿಸಿಕೊಂಡಿದೆ. ಇದೆ ರೀತಿ ಅಪ್ಪಾಜಿ ಅವರು ನಮ್ಮ ಕುಟುಂಬಕ್ಕೆ ಎಲ್ಲಾ ರೀತಿಯಿಂದಲೂ ನೆರವಾಗಿದ್ದರು.
ಅಪ್ಪಾಜಿ ಹಾಗು ಜೆಡಿಎಸ್ ಪಕ್ಷ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಈ ಕಾರಣಕ್ಕಾಗಿ ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅಪ್ಪಾಜಿ ಅವರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಇದರ ಫಲವಾಗಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ನನ್ನ ಪತ್ನಿ ಪಲ್ಲವಿ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವ ಮೂಲಕ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಪ್ಪಾಜಿ ಅವರನ್ನು ಎಂದಿಗೂ ನಾನು ಹಾಗು ನನ್ನ ಕುಟುಂಬ ಮರೆಯಲು ಸಾಧ್ಯವಿಲ್ಲ.
No comments:
Post a Comment