ಮಾಜಿ ಶಾಸಕರಾದ ಅಪ್ಪಾಜಿ ಅವರೊಂದಿಗೆ ನನ್ನದು ಸುಮಾರು ಇಪ್ಪತ್ತೈದು ವರ್ಷಗಳ ಒಡನಾಟ. ಅಪ್ಪಾಜಿ ಅವರಲ್ಲಿನ ಬಡವರ ಬಗೆಗಿನ ಕಾಳಜಿ, ಹೋರಾಟದ ಗುಣಗಳಿಂದ ಆಕರ್ಷಿತನಾಗಿ ಅವರ ಒಡನಾಟ ಬಯಸಿದೆ ಎಂದು ನೆನಪು ಮಾಡಿಕೊಳ್ಳುತ್ತಾರೆ ನಗರಸಭೆ ವಾರ್ಡ್ ನಂ.೧೯ರ ನಗರಸಭಾ ಸದಸ್ಯ ಬಸವರಾಜ ಬಿ ಆನೆಕೊಪ್ಪ.
ಅಪ್ಪಾಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಬಸವರಾಜ್ ಬಿ ಆನೆಕೊಪ್ಪ ಅವರು, ನಾನು ಎಂದಿಗೂ ವೈಯಕ್ತಿಕವಾಗಿ ಅವರೊಂದಿಗೆ ಅಧಿಕಾರಕ್ಕಾಗಿ ಇರಲಿಲ್ಲ. ಅವರ ಅಭಿಮಾನಿಯಾಗಿ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಅವರೊಂದಿಗಿದ್ದೆ. ಎಲ್ಲಾ ತಳ ಸಮುದಾಯದ ಬಡ ವರ್ಗದವರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಧೀಮಂತ ನಾಯಕ ಅಪ್ಪಾಜಿ ಅವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ನಾನು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷನಾದ ನಂತರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸುಮಾರು ೨ ಕೋ. ರು. ಅನುದಾನ ಬಿಡುಗಡೆ ಮಾಡಿಸಿದ್ದರು. ಅಲ್ಲದೆ ಗ್ರಾಮಾಂತರ ಭಾಗದಲ್ಲಿ ಸಮಾಜದ ಸುಮಾರು ೫-೬ ಸಮುದಾಯ ಭವನಗಳ ನಿರ್ಮಾಣಕ್ಕೆ ಸುಮಾರು ಹನ್ನೆರಡು ಲಕ್ಷ ರು. ಮಂಜೂರಾತಿ ಮಾಡಿಸಿದ್ದರು. ಕೇವಲ ನನ್ನ ಸಮಾಜಕ್ಕೆ ಮಾತ್ರವಲ್ಲ ಇದೇ ರೀತಿ ಎಲ್ಲಾ ಸಮಾಜಕ್ಕೂ ಅಪ್ಪಾಜಿಯವರು ನೆರವಾಗಿದ್ದರು.
ಅವರಿಂದ ನಾನು ಎಂದಿಗೂ ವೈಯಕ್ತಿಕ ಲಾಭವನ್ನು ಬಯಸಲಿಲ್ಲ. ಕೊನೆ ಘಳಿಗೆಯಲ್ಲಿ ಅವರ ನಿಧನದ ನಂತರ ಅವರ ಆಶೀರ್ವಾದದಿಂದ ನಾನೂ ಸಹ ನಗರಸಭಾ ಸದಸ್ಯನಾಗಿ ಆಯ್ಕೆಯಾಗುವ ಮೂಲಕ ಜನಸೇವೆ ಮಾಡಲು ಅವಕಾಶ ಲಭಿಸಿದೆ. ನನಗೆ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಅಪ್ಪಾಜಿಯವರ ಹೋರಾಟದ ಗುಣಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ಜನ ಸೇವೆಯಲ್ಲಿ ತೊಡಗುತ್ತೇನೆ ಎಂದರು.
No comments:
Post a Comment