ಹೀಗೆ ಎರಡು ದಶಕಗಳ ಹಿಂದೆ ಹೋರಾಟ ಒಂದರ ಮೂಲಕ ಪರಿಚಿತರಾದ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಅವರು ಇಂದಿಗೂ ನನ್ನ ನೆಚ್ಚಿನ ನಾಯಕರಾಗಿ ಉಳಿದುಕೊಂಡಿದ್ದಾರೆ. ಕೇವಲ ನನಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಅಪ್ಪಾಜಿಯೇ ನಾಯಕರಾಗಿದ್ದಾರೆಂದು ಯುವ ಮುಖಂಡ ಅಶೋಕ್‌ಕುಮಾರ್ ನೆನಪು ಮಾಡಿಕೊಳ್ಳುತ್ತಾರೆ.
ಅಪ್ಪಾಜಿಯವರ ಮೊದಲ ಪುಣ್ಯ ಸ್ಮರಣೆಯಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಅಶೋಕ್‌ಕುಮಾರ್, ಅಪ್ಪಾಜಿ ಅವರು ಹೊಂದಿದ್ದ ನೇರ ನುಡಿಯ ಹೋರಾಟದ ಗುಣಗಳು, ನಿಗರ್ತಿಕರು, ದೀನದಲಿತರ ಪರವಾದ ಗುಣಗಳು ಅಪ್ಪಾಜಿ ಅವರನ್ನು ನಮ್ಮ ಕುಟುಂಬ ಇಷ್ಟಪಡಲು ಕಾರಣವಾಗಿದೆ. ಇದೀಗ ಅಪ್ಪಾಜಿ ಅವರು ನಮ್ಮೊಂದಿಗೆ ಇಲ್ಲದಿರಬಹುದು. ಆದರೂ ಈಗಲೂ ಅವರೇ ನಮ್ಮ ನಾಯಕರು.
ನನ್ನ ತಾಯಿಯವರಾದ, ನಗರಸಭಾ ಸದಸ್ಯರಾದ ವಿಜಯರವರು ಸುಮಾರು ೩೦-೪೦ ವರ್ಷಗಳಿಂದ ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ನಗರಸಭೆಯೊಂದಿಗೆ ತುಂಬಾ ಹಳೇಯ ಬಾಂಧವ್ಯವನ್ನು ಹೊಂದಿದ್ದಾರೆ. ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಅಪ್ಪಾಜಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ಅಪ್ಪಾಜಿ ಅವರಂತೆ ನನ್ನ ತಾಯಿಯವರು ಸಹ ನೇರನುಡಿಯ ಮಾತುಗಾರಿಕೆ ಹೊಂದಿದ್ದರು. ಈ ನೇರನುಡಿ ಮಾತುಗಾರಿಕೆ ಗುಣವೇ ಅಪ್ಪಾಜಿ ಮತ್ತು ನನ್ನ ತಾಯಿ ಅವರ ನಡುವೆ ಇನ್ನೂ ಹೆಚ್ಚಿನ ನಂಟು ಬೆಳೆಯುವಂತೆ ಮಾಡಿತ್ತು.
ಅಪ್ಪಾಜಿ ಅವರನ್ನು ನಾವು ನಮ್ಮ ಕುಟುಂಬದ ಸದಸ್ಯರು ಎಂದು ಭಾವಿಸಿದ್ದೆವು ಹೊರತು ಅವರನ್ನು ಎಂದಿಗೂ ಶಾಸಕರಂತೆ ಕಂಡಿರಲಿಲ್ಲ. ಅವರ ಜೊತೆ ಮುನಿಸಿಕೊಳ್ಳುತ್ತಿದ್ದೆವು, ಜಗಳವಾಡುತ್ತಿದ್ದೆವು, ಆಮೇಲೆ ಒಂದಾಗುತ್ತಿದ್ದೆವು. ಹಾಗೆ ಅವರು ಕೂಡ ಅವರ ಬಿಡುವಿನ ಸಮಯದಲ್ಲಿ ನಮ್ಮ ಜೊತೆ ಮಾತನಾಡುತ್ತಿದ್ದರು ಮತ್ತು ನಮ್ಮನ್ನು ಭೇಟಿಯಾಗುತ್ತಿದ್ದರು. ಅಲ್ಲದೆ ಕುಟುಂಬದ ಸದಸ್ಯರ ಹಾಗೆ ನಮ್ಮನ್ನು ಕಾಣುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಮೇಲೆ ಅತಿ ಹೆಚ್ಚು ಪ್ರೀತಿ ಬರಲು ಕಾರಣವಾಗಿದೆ.
ನನ್ನ ಸಹೋದರ ಸಹ ಅಪ್ಪಾಜಿ ಅವರ ಹೋರಾಟದ ಗುಣಗಳಿಂದ ಪ್ರಭಾವಿತನಾಗಿ ಅವರೊಂದಿಗೆ ಗುರುತಿಸಿಕೊಂಡಿದ್ದು, ಜೊತೆಗೆ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟಾರೆ ಅಪ್ಪಾಜಿ ಅವರೊಂದಿಗಿನ ಸಂಬಂಧ ಹಾಗು ಜೆಡಿಎಸ್ ಪಕ್ಷದ ನಂಟು ನಮ್ಮ ಕುಟುಂಬಕ್ಕೆ ರಾಜಕೀಯ ಅಸ್ತಿತ್ವವನ್ನು ತಂದುಕೊಟ್ಟಿದೆ. ಅಪ್ಪಾಜಿ ಅವರ ಒಡನಾಟವನ್ನು ನಮ್ಮ ಕುಟುಂಬ ಎಂದಿಗೂ ದುರುಪಯೋಗಪಡಿಸಿಕೊಳ್ಳಲಿಲ್ಲ. ಜೊತೆಗೆ ವೈಯಕ್ತಿಕವಾಗಿ ಅವರಿಂದ ಏನನ್ನು ಸಹ ಬಯಸಲಿಲ್ಲ. ಅವರ ಮೇಲಿನ ಅಭಿಮಾನ ನಮ್ಮನ್ನು ಸಾಮಾನ್ಯ ಕಾರ್ಯಕರ್ತರಂತೆ ಅವರೊಂದಿಗೆ ಹಾಗು ಪಕ್ಷದೊಂದಿಗೆ ಇಂದಿಗೂ ಸೇವೆ ಸಲ್ಲಿಸುವಂತೆ ಮಾಡಿದೆ ಎಂದರು.
No comments:
Post a Comment