Thursday, December 31, 2020
ಭದ್ರಾವತಿ ತಾಲ್ಲೂಕಿನ ೩೫ ಗ್ರಾಮ ಪಂಚಾಯಿತಿಗಳ ಚುನಾವ ಫಲಿತಾಂಶ
ಭದ್ರಾವತಿ: ತಾಲ್ಲೂಕಿನ ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು ಅದರ ವಿವಿರಗಳು:-
ಸೈದರ್‌ಕಲ್ಲಳ್ಳಿ ಗ್ರಾಮ ಪಂಚಾಯಿತಿಯ ಸೈದರ್‌ಕಲ್ಲಳಿ ಕ್ಷೇತ್ರದಿಂದ ಚಂದ್ರಮ್ಮ, ರತ್ನಮ್ಮ, ಸುಪ್ರೀತ, ಜೆ.ಬಿ.ಗಂಗಾಧರ. ಕುರುಬರ ವಿಠಲಾಪುರ ಕ್ಷೇತ್ರದಿಂದ ಹೆಚ್.ಮಂಜುಳಾ, ಎಂ.ಮಲ್ಲೇಶಪ್ಪ. ಆದ್ರಿ ಹಳ್ಳಿ ಕ್ಷೇತ್ರದಿಂದ ಶಾರದ, ಎ.ವಿ.ಅಣ್ಣಪ್ಪ. ದಿಗ್ಗೇನಹಳ್ಳಿ ಕ್ಷೇತ್ರದಿಂದ ಹೆಚ್.ಸಿ.ನಂಜುಂಡಪ್ಪ.
ನಿಂಬೆಗೊಂದಿ ಗ್ರಾಪಂ ಯ ನಿಂಬೆಗೊಂದಿ-೧ ಕ್ಷೇತ್ರದಿಂದ ಹನುಮಂತಮ್ಮ, ಚಂದ್ರಮ್ಮ, ಎಂ.ಮಹಾದೇವಪ್ಪ ಎಲ್ಲರೂ ಅವಿರೋಧ ಆಯ್ಕೆ. ನಿಂಬೆಗೊಂದಿ ಕ್ಷೇತ್ರ-೨ ರಿಂದ ಜಯಮ್ಮ. ವಡೇರಪುರ ಕ್ಷೇತ್ರದಿಂದ ಎಸ್.ನಂದ್ಯಪ್ಪ, ಶಾಲಿನಿ. ಅರಶಿನಘಟ್ಟ ಕ್ಷೇತ್ರದಿಂದ ಹೆಚ್.ಎನ್.ರುದ್ರೇಶಪ್ಪ, ಕೆ.ಬಿ.ಉಮಾ. ಇಂದಿರಾ ನಗರ ಕ್ಷೇತ್ರದಿಂದ ಕೆ.ಭಜನಿ ನಾಯ್ಕ್.
ಆನವೇರಿ ಗ್ರಾಪಂ ಯ ಆನವೇರಿ-೧ ಕ್ಷೇತ್ರದಿಂದ ಜಿ.ಹೆಚ್.ನಟರಾಜ್ ಗೌಡ, ಬಿ.ಪಿ.ತೇಜಾವತಿ, ಶೋಭಾ ನಾಗರಾಜ್. ಆನವೇರಿ -೨ ಕ್ಷೇತ್ರದಿಂದ ಸುಜಾತ ಬಿ.ಆರ್.ಗಿರೀಶ್, ಎನ್.ನಂದೀಶ್, ಮುರಾರಿ. ಆನವೇರಿ -೩ ಕ್ಷೇತ್ರದಿಂದ ರೇಣುಕಮ್ಮ ಹನುಮಂತಪ್ಪ, ಆರ್.ಶ್ರೀನಿವಾಸ್. ಇಟ್ಟಿಗೇಹಳ್ಳಿ ಕ್ಷೇತ್ರದಿಂದ ಲಲಿತಮ್ಮ, ಆರ್.ತಿಪ್ಪೇಶ್, ಎಂ.ಮಮತ.
ಗುಡಮಘಟ್ಟ ಗ್ರಾಪಂ ಯ ಗುಡಮಘಟ್ಟ ಕ್ಷೇತ್ರದಿಂದ ಹೆಚ್.ಆರ್.ಪುಟ್ಟಪ್ಪ, ಭಾವಿಮನೆ ಮಲ್ಲಿಕಾರ್ಜುನ್ ಬಿ.ಆರ್., ಹೆಚ್.ರಂಗಪ್ಪ, ಪುಷ್ಪಾ. ತಡಸ ಕ್ಷೇತ್ರದಿಂದ ಶೋಭ, ಟಿ.ಕೆ.ಕರಿಬಸಪ್ಪ. ಮಲ್ಲಿಗೇನಹಳ್ಳಿ ಕ್ಷೇತ್ರದಿಂದ ವಿ.ಲತಾ, ಸುಧಾ.
ಮಂಗೋಟೆ ಗ್ರಾಪಂ ಯ ಮಂಗೋಟೆ -೧ ಕ್ಷೇತ್ರದಿಂದ ಎ.ಕೆ.ನಾಗರಾಜ್, ಜಿ.ಎಸ್.ಮಲ್ಲೇಶ್. ಮಂಗೋಟೆ -೨ ಕ್ಷೇತ್ರದಿಂದ ನಿರ್ಮಲಮ್ಮ, ಹೆಚ್.ಡಿ.ರವಿ. ನಾಗಸಮುದ್ರ ಕ್ಷೇತ್ರದಿಂದ ಬಿ.ಎಂ.ಲೋಹಿತ್, ಆರ್.ಸವಿತ, ಎಂ.ಆರ್.ಶೃತಿ, ದ್ರಾಕ್ಷಾಯಿಣಿ.
ಸನ್ಯಾಸಿಕೋಡಮಗ್ಗೆ ಗ್ರಾಪಂ ಯ ಸನ್ಯಾಸಿಕೋಡಮಗ್ಗೆ - ೧ ಕ್ಷೇತ್ರದಿಂದ ಬಿ.ಎಂ.ನಾಗೇಶಪ್ಪ, ಆರ್.ಜಯಮ್ಮ, ಸಿ.ಇ.ಪ್ರಕಾಶ್. ಸನ್ಯಾಸಿಕೋಡಮಗ್ಗೆ -೨ ಕ್ಷೇತ್ರದಿಂದ ನೀಲಮ್ಮ, ಜಯಮ್ಮ, ವಿಜಯ್ ಕುಮಾರ್. ಕನಸಿನ ಕಟ್ಟೆ ಕ್ಷೇತ್ರದಿಂದ ಬಿ.ಶ್ರೀನಿವಾಸ, ಸಿ.ವೈ.ರಾಜು, ಎನ್.ಒ.ಮಂಗಳ, ಚಂದ್ರಮ್ಮ.
ಆಗರದಹಳ್ಳಿ ಗ್ರಾಪಂ ಯ ಆಗರದಹಳ್ಳಿ - ೧ ಕ್ಷೇತ್ರದಿಂದ ಚಂದ್ರಮ್ಮ, ಆಗರದಹಳ್ಳಿ-೨ ಕ್ಷೇತ್ರದಿಂದ ಪರಶುರಾಮ್, ಬಿ.ಬಸವರಾಜಪ್ಪ, ಜಲಜಾಕ್ಷಿ, ಆಗರದಹಳ್ಳಿ-೩ ಕ್ಷೇತ್ರದಿಂದ ವಿಜಯ, ಮಂಜುಳಾ, ಪಿ.ವೆಂಕಟೇಶ್, ಆಗರದಹಳ್ಳಿ -೪ ಕ್ಷೇತ್ರದಿಂದ ರತ್ನಮ್ಮ, ಎಸ್.ಶ್ರೀನಿವಾಸ. ಹಂಚಿನಸಿದ್ದಾಪುರ ಕ್ಷೇತ್ರದಿಂದ ಸಾವಿತ್ರಮ್ಮ, ಸರಿತಾ, ಹೆಚ್.ಎಂ.ಸಿದ್ದಪ್ಪ, ಯಶೋಧಾ ಭಾಯಿ.
ಯಡೇಹಳ್ಳಿ ಗ್ರಾಪಂ ಯ ಯಡೇಹಳ್ಳಿ- ೧ ಕ್ಷೇತ್ರದಿಂದ ಹೆಚ್.ಎಂ.ಚಂದ್ರಕಲಾ, ಸಿ.ಶಿವಲಿಂಗಪ್ಪ, ಕೆ.ಅನ್ನಪೂರ್ಣ. ಯಡೇಹಳ್ಳಿ -೨ ಕ್ಷೇತ್ರದಿಂದ ಮೀನಾಕ್ಷಮ್ಮ, ಮಹಮದ್ ಆಲಿ, ಸಾವಿತ್ರಮ್ಮ. ಯಡೇಹಳ್ಳಿ - ೩ ಕ್ಷೇತ್ರದಿಂದ ಟಿ.ಮಂಜುನಾಥ, ಬೋಮ್ಮಮ್ಮ, ಸಿ.ವಿಜಯಲಕ್ಷ್ಮಿ, ಪ್ರೇಮ ಮಂಜುನಾಥ. ಟಿ, ಯಡೇಹಳ್ಳಿ -೪ ಕ್ಷೇತ್ರದಿಂದ ತಿಪ್ಪೇಶ್ ಎನ್ ಯೆಡೇಹಳ್ಳಿ, ಮಂಜುನಾಥ ಪಿ ಯಡೇಹಳ್ಳಿ. ಚಂದ್ರನಕೆರೆ ಕ್ಷೇತ್ರದಿಂದ ಟಿ.ಲಕ್ಷ್ಮಣಪ್ಪ ತಿಮ್ಮಪ್ಪ ಡಿ, ಸಿ.ಬಿ.ಬಸವರಾಜಪ್ಪ.
ಅರಹತೋಳು ಗ್ರಾಪಂ ಯ ಅರಹತೋಳಲು - ೧ ಕ್ಷೇತ್ರದಿಂದ ಅರಹತೋಳಲು ಕೆ.ರಂಗನಾಥ್, ಅಶ್ವಿನಿ ಪಿ ಬಿ ಚಂದ್ರಶೇಖರ್, ಅರಹತೋಳಲು - ೨ ಕ್ಷೇತ್ರದಿಂದ ಎಸ್.ಟಿ.ಸಂಗನಾಥ. ನಾಗಮ್ಮ ಅರಹತೋಳಲು. ಅರಹತೋಳಲು - ೩ ಆಶಾ, ಅರಹತೋಳಲು ಶಶಿಕಲಾ ಹಾಲೇಶಪ್ಪ, ಆರ್.ಪ್ರಭಾಕರ. ಅರಹತೋಳಲು-೪ ಕ್ಷೇತ್ರದಿಂದ ಕೆ.ರಾಜಪ್ಪ, ಲಕ್ಷ್ಮಿಭಾಯಿ.
ಕಲ್ಲಿಹಾಳ್ ಗ್ರಾಪಂ ಯ ಕಲ್ಲಿಹಾಳ್ ಕ್ಷೇತ್ರದಿಂದ ಜಿ.ಗಾಯಿತ್ರಿ, ಎ.ಜೆ.ಶ್ರೀನಿವಾಸ್ ಕುಮಾರ್, ಎಲ್.ದೀಪಾ, ನಾಗಮ್ಮ. ಬೋಮ್ಮನಕಟ್ಟೆ ಕ್ಷೇತ್ರದಿಂದ ಡಿ.ರಮ್ಯ, ನಾಗಲಕ್ಷ್ಮಿ. ದೊಂಬರಬೈರನಹಳ್ಳಿ ಕ್ಷೇತ್ರದಿಂದ ಹೆಚ್.ಬಸವರಾಜಪ್ಪ, ಬಿ,ಸಂಗಮೇಶ್, ಶಿಲ್ಪ, ಮಾರಪ್ಳರ ಸತೀಶ್ ಎಸ್.
ದಾಸರಕಲ್ಲಳ್ಳಿ ಗ್ರಾಪಂ ಯ ದಾಸರಹಲ್ಲಳ್ಳಿ ಕ್ಷೇತ್ರದಿಂದ ನೀಲಮ್ಮ, ಅನುಸೂಯ, ಕೇಶವ, ದಾದಾ ಪೀರ್. ಅಗಸನಹಳ್ಳಿ ಕ್ಷೇತ್ರದಿಂದ ಪ್ರಶಾಂತ ಆಳ್ವಾ, ಕಾವ್ಯ ಕೋಂ ಸುರಶ. ಅರದೋಟ್ಳು ಕ್ಷೇತ್ರದಿಂದ ಜಿ.ಎಸ್.ಪ್ರಶಾಂತ, ಎ.ಜಿ.ಮಲ್ಲನಗೌಡ, ಆರ್.ಜಯಲಕ್ಷ್ಮಿ, ವೀಣಾ.
ಮಾರಶೆಟ್ಟಿ ಹಳ್ಳಿ ಗ್ರಾಪಂ ಯ ಮಾರಶೆಟ್ಟಿ ಹಳ್ಳಿ -೧ ಕ್ಷೇತ್ರದಿಂದ ಕಿರಣ್ ಮೋರೆ, ಕೆ.ಬಸವರಾಜಪ್ಪ, ಎಂ.ನಿರ್ಮಲ. ಮಾರಶೆಟ್ಟಿ ಹಳ್ಳಿ -೨ ಕ್ಷೇತ್ರದಿಂದ ಜಿ.ಎನ್.ಓಬಳಮ್ಮ, ಪಿ.ರುದ್ರೇಶ್. ತಟ್ಟೆಹಳ್ಳಿ - ೧ ಕ್ಷೇತ್ರದಿಂದ ಜಿ.ಎನ್.ಪಂಚಾಕ್ಷರಪ್ಪ, ಹನುಮಂತಪ್ಪ, ಗಾಯಿತ್ರಿ. ತಟ್ಟೆಹಳ್ಳಿ - ೨ ಕ್ಷೇತ್ರದಿಂದ ಸಿ.ಮುದ್ದುವೀರಪ್ಪ, ಮಂಜುಳಾ ಪಿ ನಾಗರಾಜ್, ಎಂ.ಕೆ.ಸುನೀತ. ತಿಮ್ಲಾಪುರ ಕ್ಷೇತ್ರದಿಂದ ಲಲಿತಮ್ಮ ಹೊನ್ನಪ್ಪ್ ಹೆಚ್, ಹೆಚ್.ಶಾಲಿನಿ, ಟಿ.ಎನ್.ಭದ್ರಯ್ಯ.
ಅರಕೆರೆ ಗ್ರಾಪಂ ಯ ಅರಕೆರೆ -೧ ಕ್ಷೇತ್ರದಿಂದ ಎಸ್.ಎಲ್.ರವಿಕುಮಾರ್, ಹೆಚ್.ಬಿ.ಮಲ್ಲಪ್ಪ, ದ್ರಾಕ್ಷಾಯಣಮ್ಮ ಎಲ್ಲರೂ ಅವಿರೋಧ ಆಯ್ಕೆ. ಅರಕೆರೆ - ೨ ಕ್ಷೇತ್ರದಿಂದ ಆರ್.ಡಿ.ಶೇಖರಪ್ಪ, ಲಕ್ಷ್ಮೀಪತಿ, ಗಾಯಿತ್ರಿ ಎಲ್ಲರೂ ಅವಿರೋದ ಆಯ್ಕೇ. ಕಲ್ಲಾಪುರ ಕ್ಷೇತ್ರದಿಂದ ಎಂ.ಆಶಾ, ಆರ್.ರಂಗಪ್ಪ. ಹೊಸೂರು ಕ್ಷೇತ್ರದಿಂದ ರತ್ನಮ್ಮ ರುದ್ರೇಶಪ್ಪ. ದಾನವಾಡಿ ಕ್ಷೇತ್ರದಿಂದ ಟಿ.ಎಂ.ಗುರುಮೂರ್ತಿ, ಆರ್.ರತ್ನಮ್ಮ, ಆಶಾ.
ಅರಬಿಳಚಿ ಗ್ರಾಪಂ ಯ ಅರಬಿಳಚಿ -೧ ಕ್ಷೇತ್ರದಿಂದ ಹೆಚ್.ಎಸ್.ಮಂಜುನಾಥ, ಹೆಚ್.ಎಂ.ಸದಾಶಿವಪ್ಪ, ನಸೀಮಾ, ಶಾರದಮ್ಮ. ಅರಬಿಳಚಿ -೨ ಕ್ಷೇತ್ರದಿಂದ ಧನಂಜಯ ಹೆಚ್ ಜಯಣ್ಣ. ಅರಬಿಳಚಿ - ೩ ಕ್ಷೇತ್ರದಿಂದ ನಾಗಮ್ಮ, ಹೆಚ್.ಬಿ.ಕಿರಣ್ ಅವಿರೋಧ ಆಯ್ಕೆ. ಅರಬಿಳಚಿ-೧ ಕ್ಯಾಂಪ್ ಕ್ಷೇತ್ರದಿಂದ ಸುಶೀಲ, ಎ.ರಾಜು, ಅನ್ನಪೂರ್ಣ. ಅರಬಿಳಚಿ - ೨ ಕ್ಯಾಂಪ್ ಕ್ಷೇತ್ರದಿಂದ ಆಯೀಷಾ ಬಿಬಿ, ಎ.ಗುಣಶೇಖರ, ವಾಜಿಯಮ್ಮ ವೆಂಕಟೇಶ್ ಡಿ, ಎಸ್.ಶಬರೀಶ್.
ನಾಗತಿಬೆಳಗಲು ಗ್ರಾಪಂ ಯ ನಾಗತಿಬೆಳಗಲು-೧ ಕ್ಷೇತ್ರದಿಂದ ಲಕ್ಷ್ಮಮ್ಮ ನಂಜುಂಡಪ್ಪ, ಸುಮಲತ ನಾಗತಿಬೆಳಗಲು, ಎಂ.ಮಂಜುಳಾ. ನಾಗತಿಬೆಳಗಲು -೨ ತಾಂಡ ಕ್ಷೇತ್ರದಿಂದ ಎಸ್.ವೇಲುಸ್ವಾಮಿ, ಎಸ್.ನಂಜುಂಡಾ ನಾಯ್ಕ್, ಗೀತಾಭಾಯಿ. ಹೊಸಳ್ಳಿ ಕ್ಷೇತ್ರದಿಂದ ಎಂ.ಆರ್.ಮನೋಹರಿ, ಕೆ.ಹಾಲೇಶ್ ನಾಯ್ಕ. ತಳ್ಳಿಕಟ್ಟೆ ಕ್ಷೇತ್ರದಿಂದ ದೇವಕಿ ಭಾಯಿ, ಪಿ.ದಿನೇಶ್ ತಳ್ಳಿಕಟ್ಟೆ. ತಳ್ಳಿಕಟ್ಟೆ ಕುಮರಿನಾರಾಯಣಪುರ ಕ್ಷೇತ್ರದಿಂದ ಶ್ರೀರಾಮ.
ಕೂಡ್ಲಿಗೆರೆ ಗ್ರಾಪಂ ಯ ಕೂಡ್ಲಿಗೆರೆ-೧ ಕ್ಷೇತ್ರದಿಂದ ಉಮಾದೇವಿ ತಿಪ್ಪೇಶ್, ಗೌರಮ್ಮ ಎಸ್ ಮಹಾದೇವ್, ಸಿ.ವಿಶ್ವನಾಥ, ಆರ್.ಎನ್.ರುದ್ರೇಶ್. ಕುಡ್ಲಿಗೆರೆ -೨ ಆಟಗಾರಿ ಕ್ಯಾಂಪ್ ಕ್ಷೇತ್ರದಿಂದ ಎಂ.ಜಯಣ್ಣ, ಮಾಲಕ್ ಬಿ.ವೀರಪ್ಪನ್, ಸಿದ್ದಮ್ಮ ನಾಗೇಶ್, ಸ್ವಾಮಿನಾಥನ್. ಕಲ್ಪನಹಳ್ಳಿ ಕ್ಷೇತ್ರದಿಂದ ಪಾರ್ವತಿ ಭಾಯಿ, ಕಬೇರ ನಾಯ್ಕ್, ನೀಲಾಭಾಯಿ. ಕೋಡಿಹಳ್ಳಿ ಕ್ಷೇತ್ರದಿಂದ ಜಿ.ಆರ್.ನಾಗರಾಜಪ್ಪ, ಭಾಗ್ಯ.
ಅತ್ತಿಗುಂದ ಗ್ರಾಪಂ ಯ ಅತ್ತಿಗುಂದ -೧ ಕ್ಷೇತ್ರದಿಂದ ಟಿ.ಮಹೇಶ್ ಕುಮಾರ್, ಮೋಹ್ಸಿನಾ ಭಾನು, ಎಸ್. ದೇವಿರಮ್ಮ.ಎಲ್ಲರೂ ಅವಿರೋಧ ಆಯ್ಕೆ. ಅತ್ತಿಗುಂದ -೨ ಕ್ಷೇತ್ರದಿಂದ ಡಿ.ಸುಶೀಲಮ್ಮ, ಆರ್.ಸುಮಾ. ಸೀತಾರಾಮಪುರ ಕ್ಷೇತ್ರದಿಂದ ಮೋಹನಮ್ಮ, ಮಂಜಪ್ಪ, ಡಿ.ಪ್ರಭಾಕರ. ಬಸಲೀಕಟ್ಟೆ-೧ ಕ್ಷೇತ್ರದಿಂದ ಬೇಬಿ ಶಾಲೀನಿ, ಪುರುಷೋತ್ತಮ, ಬಸಲೀಕಟೆ-೨ ಕ್ಷೇತ್ರದಿಂದ ರತ್ನಮ್ಮ, ಡಿ.ಸರ್ದಾರ್.
ತಡಸ ಗ್ರಾಪಂ ಯ ತಡಸ ಕ್ಷೇತ್ರದಿಂದ ರಂಗಪ್ಪ, ರಿಜ್ವಾನ್, ಬಿ.ಕೇಶವ. ತಡಸ-೨ ಮಕಾನ್‌ಕಟ್ಟೆ ಕ್ಷೇತ್ರದಿಂದ ಜರೀನಾ ಭಾನು, ಯಾಸ್ಸೀನ್, ಸೈಯದ್ ಇಬ್ರಾಹಿಂ. ತಡಸ-೩ ಇಸ್ಸಾ ನಗರ ಕ್ಷೇತ್ರದಿಂದ ರುಕ್ಸದ್, ಬಿ.ನಾಜೀಮಾ, ಶಬ್ಬಿರ್ ಸಾಬ್. ಮತಿಘಟ್ಟ ಕ್ಷೇತ್ರದಿಂದ ರತ್ನಮ್ಮ, ಎಂ.ಇ.ಮಂಜುನಾಥ. ಹಾತಿಕಟ್ಟೆ ಕ್ಷೇತ್ರದಿಂದ ಕೆ.ವಿ.ನಾಗರತ್ನಮ್ಮ, ಎಂ.ನರಸಿಂಹಮೂರ್ತಿ.
ದೋಣಭಘಟ್ಟ ಗ್ರಾಪಂ ಯ ದೋಣಭಘಟ್ಟ-೧ ಕ್ಷೇತ್ರದಿಂದ ಜೋಹರ್ ಭಾನು, ಎಂ.ಡಿ.ಕಲೀಂ, ದೋಣಭಘಟ್ಟ-೨ ಕ್ಷೇತ್ರದಿಂದ ಅಜೀಜಾ ಭಾನು, ಜುಲ್ಫಿಯಾಜ್ ಭಾನು, ಆಸೀಫ್ ಆಲಿ, ಮುಸ್ತಾಫ, ದೋಣಭಘಟ್ಟ-೩ ಕ್ಷೇತ್ರದಿಂದ ಕಲೀಲ್ ಸಾಬ್ ಬುಡೇನ್ ಸಾಬ್, ಶಭಾನ ಭಾನು. ದೋಣಭಘಟ್ಟ-೪ ಕ್ಷೇತ್ರದಿಂದ ಫರ‍್ಹಾಭಾನು, ಗುಲ್ಜಾರ್ ಬಾನು, ಹಾಜೀರಾಬಿ. ದೋಣಭಘಟ್ಟ-೫ ಕ್ಷೇತ್ರದಿಂದ ಕೌಸರ್ ಭಾನು. ದೋಣಭಘಟ್ಟ-೬ ಕ್ಷೇತ್ರದಿಂದ ಮಲ್ಲಮ್ಮ, ರಸೂಲ್ ಭಾನು, ನಜೀಭಾ ಸುಲ್ತಾನ, ಶಮೀಮ್ ಭಾನು. ದೋಣಭಘಟ್ಟ-೭ ಕ್ಷೇತ್ರದಿಂದ ಹಾಲಮ್ಮ, ರೀಜ್ವಾನ ಖಾನಂ, ಲೀಯಾಖತ್ ಆಲಿ.
ಬಿಳಕಿ ಗ್ರಾಪಂ ಯ ಬಿಳಕಿ ಕ್ಷೇತ್ರದಿಂದ ಡಿ.ಎ.ಶಿವಕುಮಾರ್, ಸುಶೀಲಾ ಭಾಯಿ, ಆರ್.ಗಣೇಶ. ಹೋಳೆನೇರಳೆಕೆರೆ ಕ್ಷೇತ್ರದಿಂದ ಆಶ್ಮತ್ ಉನ್ನೀಸ, ಮಹಮದ್ ಶಬ್ಬೀರ್, ನವಲೇ ಬಸವಾಪುರ ಕ್ಷೇತ್ರದಿಂದ ಎಸ್.ಸವೀತ, ಆರ್.ಹೇಮಣ್ಣ, ಹೆಚ್.ವಿ.ನಾಗಮ್ಮ. ಪದ್ಮೇನಹಳ್ಳಿ ಕ್ಷೇತ್ರದಿಂದ ಪಾಪಿ ಭಾಯಿ, ಪಿ.ಬಿ.ಮಂಜುನಾಥ.
ಕಾಗೇಕೋಡಮಗ್ಗೆ ಗ್ರಾಪಂ ಯ ಕಾಗೇಕೋಡಮಗ್ಗೆ -೧ ಕ್ಷೇತ್ರದಿಂದ ಸೈಯದ್ ಅಬೀದ್, ಸೈಯದ್ ನಜ್ರುಲ್ಲಾ, ಶಿವಲಿಂಗೇಗೌಡ, ಟಿ.ಎಸ್.ಶಕೀಲಾ ಭಾನು. ಕಾಗೇಕೋಡಮಗ್ಗೆ -೨ ತಾಂಡ ಕ್ಷೇತ್ರದಿಂದ ಕೆ.ರೂಪಾ, ಶೋಭಾ. ತಿಪ್ಲಾಪುರ ಕ್ಷೇತ್ರದಿಂದ ಶಭನಂ ಭಾನು, ಜಬೀವುಲ್ಲಾ, ಮುಕ್ತೀಯಾರ್ ಅಹಮದ್, ಬಾಬಳ್ಳಿ ಕ್ಷೇತ್ರದಿಂದ ರಸೂಲ್ ಖಾನ್, ಫಮೀದಾ ಬಾನು, ಧನಲಕ್ಷ್ಮಿ.
ಅರಳಿಹಳ್ಳಿ ಗ್ರಾಪಂ ಯ ಅರಳಿಹಳ್ಳಿ-೧ ಕ್ಷೇತ್ರದಿಂದ ಪಾರ್ಥ, ತೇನ್‌ಮುರಳಿ, ಜಿ.ಸುಜಾತ, ಆಯೀಷಾ ಭಾನು. ಅರಳಿಹಳ್ಳಿ-೨ ಕ್ಷೇತ್ರದಿಂದ ಡಿ.ಪಳನಿ, ಆರ್.ಪುಟ್ಟಸ್ವಾಮಿ. ಅರಳಿಹಳ್ಳಿ-೩ ಕ್ಷೇತ್ರದಿಂದ ಕೋಮಲ, ರುದ್ರೇಶ್, ಅನಿತಾ ಯಾನೆ ಪುಷ್ಪಾ ಹೆಚ್.
ಕಲ್ಲಳ್ಳಿ ಗ್ರಾಪಂ ಯ ಕಲ್ಲಳ್ಳಿ ಕ್ಷೇತ್ರದಿಂದ ಸಾವಿತ್ರಿ, ಕೆ.ವಿ.ಧನಂಜಯ. ಹಾಗಲಮನೆ ಕ್ಷೇತ್ರದಿಂದ ಪುನೀತ್ ಕುಮಾರ್. ಸಂಕ್ಲೀಪುರ ಕ್ಷೇತ್ರದಿಂದ ಮಂಜುಳಾ, ಆರ್.ಧರ್ಮಪ್ಪ. ಸಿರಿಯೂರು ಕ್ಷೇತ್ರದಿಂದ ಸುಭ್ರದಾ ಭಾಯಿ, ಬಿ.ಆನಂದ, ಶೋಭಾ ಭಾಯಿ. ವೀರಾಪುರ ಕ್ಷೇತ್ರದಿಂದ ಉಮೇಶ್, ಗಾಯಿತ್ರಿ.
ಅಂತರಗಂಗೆ ಗ್ರಾಪಂ ಯ ಅಂತರಗಂಗೆ -೧ ಕ್ಷೇತ್ರದಿಂದ ಬಿ.ನಾಗೇಶ್, ಗೀತಾ. ಅಂತರಗಂಗೆ-೨ ಕ್ಷೇತ್ರದಿಂದ ಸಿ.ಶ್ರೀಧರ್, ಸವಿತ, ಮಂಜುಳಾ. ಅಂತರಗಂಗೆ-೩ ಜಿ.ಮಂಜಪ್ಪ, ಟಿ.ಆರ್.ಶೋಭಾ. ಉಕ್ಕುಂದ ಕ್ಷೇತ್ರದಿಂದ ದೇವಿಕಾ, ಎಸ್.ಅನು. ದೇವರನರಸೀಪುರ ಕ್ಷೇತ್ರದಿಂದ ಎಸ್.ಎಂ.ಆನಂದ ಕುಮಾರ್, ರವಿ, ಗಂಗಮ್ಮ, ಹೆಚ್.ಶಾಂತ. ಕಾಚಗೋಂಡನಹಳ್ಳಿ ಕ್ಷೇತ್ರದಿಂದ ಜಿ.ಆನಂದಪ್ಪ, ಬಿ,ಮೋನಿಷಾ.
ದೊಡ್ಡೇರಿ ಗ್ರಾಪಂ ಯ ದೊಡ್ಡೇರಿ ಕ್ಷೇತ್ರದಿಂದ ಮಧು ಸಿ ಲೇಪಾಕ್ಷ, ಡಿ.ಬಿ.ಗಣೇಶ್. ಬಿಸಲ ಮನೆ ಕ್ಷೇತ್ರದಿಂದ ಶ್ರೀನಿವಾಸ ರಾವ್, ಗೌರಿ. ಗಂಗೂರು ಕ್ಷೇತ್ರದಿಂದ ಜೆ.ಬಿ.ಜಾನು. ಬಂಡೀಗುಡ್ಡ ಕ್ಷೇತ್ರದಿಂದ ಗಂಗಮ್ಮ, ಬೆಳ್ಳಿಗೆರೆ ಕ್ಷೇತ್ರದಿಂದ ಆಘಾ ಶರೀಫ್, ಕೆ.ಮಂಜು, ರಾಮಕ್ಕ.
ಯರೇಹಳ್ಳಿ ಗ್ರಾಪಂ ಯ ಯರೇಹಳ್ಳಿ-೧ ಕ್ಷೇತ್ರದಿಂದ ಸರೋಜಮ್ಮ, ಎಸ್.ಸಂಗಮ್ಮ, ವಿ.ಚಂದ್ರಶೇಖರ್, ಯರೇಹಳ್ಳಿ -೨ ಗಾಂದೀನಗರ ಕ್ಷೇತ್ರದಿಂದ ಉಮಾ, ಶಾಂತ ಭಾಯಿ, ಯರೇಹಳ್ಳಿ-೩ ತಾಷ್ಕೇಂಟ ನಗರ ಕ್ಷೇತ್ರದಿಂದ ಸುಮಿತ್ರಾ, ಎಂ.ಶ್ವೇತ. ಕೊರಲಕೊಪ್ಪ-೧ ಕ್ಷೇತ್ರದಿಂದ ಆರ್.ಚೇತನ್ ಕುಮಾರ್. ಕೊರಲಕೊಪ್ಪ -೨ ಕ್ಷೇತ್ರದಿಂದ ಸರಜ, ಟಿ.ಆರ್.ಶಿವರಾಮ್, ಕೊರಲಕೊಪ್ಪ -೩ ಕೆಹೆಚ್ ನಗರ ಕ್ಷೇತ್ರದಿಂದ ಎನ್.ಉಮೇಶ್, ಮಾಲತಿ.
ಮಾವಿನಕೆರೆ ಗ್ರಾಪಂ ಯ ಮಾವಿನಕೆರೆ -೧ ಕ್ಷೇತ್ರದಿಂದ ಪ್ರೇಮ, ಎಂ.ಆರ್,ಅಭಿನಂದನ್. ಮಾವಿನಕೆರೆ -೨ ಕಾಲೋನಿ ಕ್ಷೇತ್ರದಿಂದ ಮಂಗಳ, ಎನ್.ಶ್ರೀಧರ್ ಶೆಟ್ಟಿ, ಆರ್.ಆನಂತ. ಹಡ್ಲಘಟ್ಟ ಕ್ಷೇತ್ರದಿಂದ ನಿರ್ಮಲ. ಮಸರಹಳ್ಳಿ ಕ್ಷೇತ್ರದಿಂದ ಆನಂದ ಕುಮಾರಿ, ಸಿ.ಲೋಕೇಶ. ಕೆಂಚೇನಹಳ್ಳಿ ಕ್ಷೇತ್ರದಿಂದ ಸುರೇಶ್, ನೇತ್ರಾವತಿ.
ಬಾರಂದೂರು ಗ್ರಾಪಂ ಯ ಬಾರಂದೂರು -೧ ಕ್ಷೇತ್ರದಿಂದ ಸುಮಾ ಪರಮೇಶ್, ನೀಲಮ್ಮ, ಬಿ.ವಿ.ಗೋಪಾಲ ರಾವ್ ಬರ್ಗೆ. ಬಾರಂದೂರು -೨ ಕ್ಷೇತ್ರದಿಂದ ಪ್ರೇಮ, ಕೆಂಚಮ್ಮ, ಜಿ.ಚೇತನ್. ಹಳ್ಳಿಕೆರೆ -೧ ಕ್ಷೇತ್ರದಿಂದ ನಾಗರತ್ನಮ್ಮ, ಜಯಮ್ಮ, ಕೆ.ದೀಪಕ್. ಹಳ್ಳಿಕೆರೆ -೨ ಕ್ಷೇತ್ರದಿಂದ ಬಿ.ಹೇಮಂತ ಕುಮಾರ್, ಆರ್.ರಾಘವೇಂದ್ರ.
ಕಂಬದಾಳ್ ಹೊಸೂರು ಗ್ರಾಪಂ ಯ ಕಂಬದಾಳ್ ಹೊಸೂರು ಕ್ಷೇತ್ರದಿಂದ ನೇತ್ರಾವತಿ, ಪಾರ್ವತಮ್ಮ, ಸೋಮಪ್ಪ, ಜಿ.ಎನ್.ವೀರೇಶ್ ಗೌಳಿ. ಹೊನ್ನಟ್ಟಿ ಹಳದಮ್ಮ, ಹುಣಸೇಕಟ್ಟೆ-೧ ಕ್ಷೇತ್ರದಿಂದ ಆದೀಲ್ ಬಾಷ, ವಡಿವೇಲ್, ಹುಣಸೇಕಟ್ಟೆ -೨ ಸುಭಾಷ್ ನಗರ ಕ್ಷೇತ್ರದಿಂದ ನಿರ್ಮಲ, ಕೆ.ಶೀಲ, ಶ್ವೇತ ಗಾಯಕ್ವಾಡ್. ಹುಣಸೇಕಟ್ಟೆ -೩ ರಂಗನಾಥ ಪುರ ಕ್ಷೇತ್ರದಿಂದ ಬಿ.ಎಸ್.ಗಂಗಾರಾಮ್, ಎಸ್.ಆರ್.ಶಕುಂತಲ. ತಮ್ಮಡಿ ಹಳ್ಳಿ ಕ್ಷೇತ್ರದಿಂದ ಜಿ.ಸಂತೋಷ್, ಕಾಳನಕಟ್ಟೆ ಕ್ಷೇತ್ರದಿಂದ ದಯಾನಂದ.
ಕಾರೇಹಳ್ಳಿ ಗ್ರಾಪಂ ಯ ಕಾರೇಹಳ್ಳಿ -೧ ಕ್ಷೇತ್ರದಿಂದ ಕೆ.ಹೆಚ್.ಧರ್ಮರಾಯ, ಪಾರ್ವತಮ್ಮ, ಶಾಂತೀಭಾಯಿ, ಕಾರೇಹಳ್ಳಿ -೨ ಕೆ.ಜೆ.ಯೋಗೀಶ್, ಜಯಮ್ಮ. ಬೋಮ್ಮೇನಹಳ್ಳಿ ಕ್ಷೇತ್ರದಿಂದ ಹೆಚ್.ಕೆ.ಅಂಬಿಕಾ, ಕೆ.ಎಂ.ತಿಮ್ಮಯ್ಯ, ಬಿ.ಎನ್.ರಾಜು. ಕಾಳಿಂಗನಹಳ್ಳಿ ಕ್ಷೇತ್ರದಿಂದ ವಿ.ವೆಂಕಟೇಶ್, ರೂಪಶ್ರೀ, ಜಿ.ಮಮತ.
ಅರಳಿಕೊಪ್ಪ ಗ್ರಾಪಂ ಯ ಅರಳಿಕೊಪ್ಪ ಕ್ಷೇತ್ರದಿಂದ ದೀಪಾ, ಸೂರ‍್ಯಾ ನಾಯ್ಕ್, ಗಂಗೂರು ಕ್ಷೇತ್ರದಿಂದ ಲತಾ, ಶಿವಕುಮಾರ್, ಬಾಳೇಮಾರನಹಳ್ಳಿ-೧ ಕ್ಷೇತ್ರದಿಂದ ಜೆ.ಮೋಹನ್ ಕುಮಾರ್, ಬಾಳೇಮಾರನಹಳ್ಳಿ -೨ ಲಕ್ಷ್ಮೀಸಾಗರ ಕ್ಷೇತ್ರದಿಂದ ತಿಪ್ಪಮ್ಮ, ಬಾಗ್ಯಮ್ಮ, ಲಕ್ಷ್ಮೀಭಾಯಿ, ಎಸ್.ಉತ್ತರೇಶ್. ತಾರೀಕಟ್ಟೆ ಕ್ಷೇತ್ರದಿಂದ ಬಿ.ರಾಜ, ಬಿ.ಸುರೇಶ, ಚಿಕ್ಕಗೋಪ್ಪೇನಹಳ್ಳಿ ಕ್ಷೇತ್ರದಿಂದ ಕಾವೇರಿ ಬಾಯಿ, ಯಶೋಧ ಭಾಯಿ, ಕೆ.ರಘುಪ್ರಸಾದ್. ಸಿಂಗನಮನೆ -೧ ಕ್ಷೇತ್ರದಿಂದ ಪ್ರವೀಣಾ, ಮಂಜುಳಾ. ಸಿಂಗನಮನೆ-೨ ಕ್ಷೇತ್ರದಿಂದ ಆರ್.ಈಶ್ವರ್, ಜಿ.ಪಿ.ಲತಾ, ಕೆ.ಟಿ.ಗಿರೀಶ. ಬಿಆರ್‌ಪ್ರಾಜಕ್ಟ್ - ೧ ಕ್ಷೇತ್ರದಿಂದ ಲಕ್ಷ್ಮಿ, ಕೆ.ಅವಿನಾಶ್, ಬಿಆರ್‌ಪ್ರಾಜಕ್ಟ್ -೨ ಕ್ಷೇತ್ರದಿಂದ ಶಿವಶಂಕರ್ ಆರ್ ಡಿಲ್ಲಿ, ಎಂ.ಸಿ.ಕವಿತ, ಕವಿತ ಪುಟ್ಟೇಗೌಡ. ಗ್ಯಾರೇಜ್ ಕ್ಯಾಂಪ್ ಕ್ಷೇತ್ರದಿಂದ ಬಿ.ಮಂಜುನಾಥ, ಮಂಜುಳಾ, ಶಂಕರಘಟ್ಟ ಕ್ಷೇತ್ರದಿಂದ ಕೆ.ಬಿ.ಸುಜಾತ, ಆಶ್ವೀನಿ, ಎಸ್.ಸಿ.ಪುನೀತ್, ಶಾಂತಿ ನಗರ-೧ ಕ್ಷೇತ್ರದಿಂದ ಲಕ್ಷ್ಮೀ, ಎಸ್.ಚಂದನ, ಸರವಣ. ಶಾಂತಿನಗರ -೨ ಕ್ಷೇತ್ರದಿಂದ ಲಲಿತ, ಎನ್.ಆನಂದ್, ಲಕ್ಷ್ಮಮ್ಮ.
ಹಿರೊಯೂರು ಗ್ರಾಪಂ ಯ ಹಿರಿಯೂರು -೧ ಕ್ಷೇತ್ರದಿಂದ ರಾಮಮೂರ್ತಿ, ಜಿ,ಗಂಗಮ್ಮ, ಹಿರಿಯೂರು-೨ ಕ್ಷೇತ್ರದಿಂದ ಅನಿತ, ಜಿ.ಪವಿತ್ರ, ಸಂತೋಷ್. ಹಿರಿಯೂರು-೩ ಕ್ಷೇತ್ರದಿಂದ ಎಲ್.ಕೃಷ್ಣೇಗೌಢ, ಹೆಚ್.ಎಸ್.ಪಲ್ಲವಿ. ನಂಜಾಪುರ ಕ್ಷೇತ್ರದಿಂದ ಎಂ.ನಾಗವೇಣಿ, ಜೆ.ಕಿರಣ್ ರಾಜ್.
ಮೈದೊಳಲು ಗ್ರಾಪಂ ಯ ಮೈದೊಳಲು-೧ ಕ್ಷೇತ್ರದಿಂದ ವಿನೋದ, ಅರ್ಪಿತ, ಎಂ.ಎಸ್.ಲಕ್ಷ್ಮೀಕಾಂತ. ಮೈದೊಳಲು -೨ ಕ್ಷೇತ್ರದಿಂದ ರೇಣುಕಾ ಭಾಯಿ ಮಹಾದೇವ ರಾವ್, ಕೃಷ್ಣೋಜಿರಾವ್. ಮೈದೊಳಲು-೩ ಕ್ಯಾಂಪ್ ಕ್ಷೇತ್ರದಿಂದ ಟಿ.ಪೂಜಾ, ಚಂದ್ರೋಜಿರಾವ್, ಗೀತಮ್ಮ. ಕಲ್ಲಜ್ಜನಾಳ್ ಕ್ಷೇತ್ರದಿಂದ ರಾಮಪ್ಪ, ಗೀತಮ್ಮ ಮಲ್ಲೇಶಪ್ಪ. ಮಲ್ಲಾಪುರ ಕ್ಷೇತ್ರದಿಂದ ಎನ್.ನಾಗೇಶ್ವರ ರಾವ್, ಚಂದ್ರೋಜಿ ರಾವ್, ರತ್ನಮ್ಮ ಅವಿರೋಧ ಆಯ್ಕೆ.
ತಾವರೆಘಟ್ಟ ಗ್ರಾಪಂ ಯ ತಾವರೆಘಟ್ಟ ಕ್ಷೇತ್ರದಿಂದ ರೇಖಾ ಸಂದ್ಯಾ, ಜಿ.ಎಸ್.ಮಹೇಶ್ವರಪ್ಪ, ಆರ್.ಆನಿತ. ಗೊಣೀಬೀಡು ಕ್ಷೇತ್ರದಿಂದ ಜಿ.ಬಿ.ಸುಬ್ರಮಣಿ, ಸ್ವಾಥಿ ನಾಗೇಂದ್ರ ನಾಯ್ಕ್, ಎಲ್.ದೇವ್ಲಾ ನಾಯ್ಕ್. ಮಲ್ಲಿಗೇನಹಳ್ಳಿ ಕ್ಷೇತ್ರದಿಂದ ಶೋಭಾ ಈಶ್ವರ ಗೌಡ, ಪುಷ್ಪಾ ಹನುಮಂತ, ಜಿ.ಆರ್.ಮಂಜುನಾಥ. ಮಾಳೇನಹಳ್ಳಿ ಕ್ಷೇತ್ರದಿಂದ ಎಂ.ವಿಲೋಕೇಶ್, ಲತಾ ಆಡವಿ, ಗಿರೀಶ್ ಬಿ ಮಾಳೇನಹಳ್ಳಿ. ನೆಲ್ಲಿಸರ ಕ್ಷೇತ್ರದಿಂದ ಸುಜಾತ ಎಸ್ ಕುಮಾರ್, ಸೋಮೇಶ್ ರವರುಗಳು ಆಯ್ಕೇಯಾಗಿದ್ದಾರೆ.
ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳ ಮಾರಾಟ : ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ
ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್ ಮನವಿ
ಭದ್ರಾವತಿ, ಡಿ. ೩೧: ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ನಗರದ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಹಳೇನಗರದ ಸಾರ್ವಜನಿಕ ಸರ್ಕಾರಿ ಅಸ್ಪತ್ರೆ ಮುಂಭಾಗದಲ್ಲಿರುವ ಔಷಧಿ ಅಂಗಡಿಯೊಂದರಲ್ಲಿ 'ನೈಟ್ರೋವಿಟ್ ೧೦ಎಂ.ಜಿ' ಎಂಬ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ನಿಗದಿಪಡಿಸಲಾಗಿರುವ ದರದ ಬದಲಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಮಾತ್ರೆಗಳ ಸೇವನೆಯಿಂದ ಅಪ್ರಾಪ್ತ ಬಾಲಕರು ದಾರಿ ತಪ್ಪುತ್ತಿದ್ದು, ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರ ವಿರದ್ಧ ಕಾನೂನು ಕ್ರಮ ಕೈಗೊಂಡು ಪರವಾನಿಗೆ ರದ್ದುಪಡಿಸಬೇಕೆಂದು ಆಗ್ರಹಿಸಲಾಗಿದೆ.
ಜನಪರ ವೇದಿಕೆ ಜಿಲ್ಲಾ ಕಾರ್ಯಧ್ಯಕ್ಷ ಕೆ. ಸುದೀಪ್‌ಕುಮಾರ್, ತಾಲೂಕು ಅಧ್ಯಕ್ಷ ಎಸ್.ಎಸ್ ಬೈರಪ್ಪ, ಮುಕುಂದಪ್ಪ, ಜಿಲ್ಲಾ ಮುಖಂಡರಾದ ಫ್ರಾನ್ಸಿಸ್, ಪ್ರಸನ್ನಕುಮಾರ್, ಮಹಮದ್ ಶಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರ: ಡಿ೩೧-ಬಿಡಿವಿಟಿ
ಅಪ್ರಾಪ್ತ ಬಾಲಕರಿಗೆ ವೈದ್ಯರ ಯಾವುದೇ ಸಲಹೆ ಚೀಟಿ ಇಲ್ಲದೆ ಮಾದಕ ವಸ್ತುವಾಗಿ ಪರಿವರ್ತನೆಗೊಳ್ಳುವ ಮಾತ್ರೆಗಳನ್ನು ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಔಷಧ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
Wednesday, December 30, 2020
ಭದ್ರಾವತಿ ಗ್ರಾ.ಪಂ. ಚುನಾವಣೆ : ಬಹುತೇಕ ಹಿಂದಿನ ಸದಸ್ಯರೇ ಪುನಃ ಆಯ್ಕೆ
ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಗುಂಪು ಸೇರಿರುವುದು.
ಭದ್ರಾವತಿ, ಡಿ. ೩೦: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಮಧ್ಯಾಹ್ನ ೧ ಗಂಟೆ ವೇಳೆಗೆ ಶೇ.೫೦ರಷ್ಟು ಫಲಿತಾಂಶ ಹೊರಬಿದ್ದಿದೆ.
ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಫಲಿತಾಂಶದ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿದ್ದಾರೆ. ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ಸಿ.ಆರ್ ಶಿವರಾಮ್ ಮತ್ತು ಮಾವಿನಕೆರೆ ಗ್ರಾ.ಪಂ. ಕೆಂಚೇನಹಳ್ಳಿ ಕ್ಷೇತ್ರ-೫ರಿಂದ ಸುರೇಶ್ ತಲಾ ೪ನೇ ಬಾರಿಗೆ, ಅಂತರಗಂಗೆ ಗ್ರಾ.ಪಂ. ಕ್ಷೇತ್ರ-೧ರಿಂದ ಬಿ. ನಾಗೇಶ್ ಮತ್ತು ಯರೇಹಳ್ಳಿ ಗ್ರಾ.ಪಂ. ಕ್ಷೇತ್ರ-೧ರಿಂದ ಈ ಚಂದ್ರಶೇಖರ್ ಹಾಗು ಕ್ಷೇತ್ರ-೩ರಿಂದ ಎನ್. ಉಮೇಶ್ ತಲಾ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಿರಿಯೂರು ಗ್ರಾ.ಪಂ.ಯಲ್ಲಿ ಗಂಗಮ್ಮ ೪ನೇ ಬಾರಿಗೆ ಮತ್ತು ಪವಿತ್ರ ಜಿ. ಮಂಜುನಾಥ್ ೨ನೇ ಬಾರಿಗೆ, ಸಿಂಗನಮನೆ ಗ್ರಾ.ಪಂ.ಯಲ್ಲಿ ಗಿರೀಶ್ ಮತ್ತು ಪ್ರವೀಣ್ ಮರು ಆಯ್ಕೆಯಾಗಿದ್ದಾರೆ. ಇದೆ ರೀತಿ ಬಹುತೇಕ ಕ್ಷೇತ್ರಗಳಲ್ಲಿ ಈ ಹಿಂದಿನ ಸದಸ್ಯರೇ ಪುನಃ ಆಯ್ಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಗಮನ ಸೆಳೆದ ಗ್ರಾಮ ಪಂಚಾಯಿತಿ:
ಈ ಬಾರಿ ಚುನಾವಣೆಯಲ್ಲಿ ಯರೇಹಳ್ಳಿ ಪಂಚಾಯಿತಿ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆದಿದೆ. ಮುಖ್ಯವಾಗಿ ಕುಟುಂಬ ಸದಸ್ಯರ ಸ್ಪರ್ಧೆಯಲ್ಲಿ ಒಂದು ಕ್ಷೇತ್ರದಲ್ಲಿ ಅಪ್ಪ ಸಿ.ಆರ್ ಶಿವರಾಂ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಮಗ ರಘು ಸೋಲು ಕಂಡಿದ್ದಾರೆ. ಇದೆ ರೀತಿ ಎಪಿಎಂಸಿ ನಿರ್ದೇಶಕ ಎನ್. ಉಮೇಶ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೇ, ಮತ್ತೊಂದು ಕ್ಷೇತ್ರದಲ್ಲಿ ಇವರ ನಾದಿನಿ(ತಮ್ಮನ ಪತ್ನಿ) ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಗ್ರಾಮ ಪಂಚಾಯಿತಿ ಹಿಂದಿನ ಅವಧಿಯ ೩ ಸದಸ್ಯರು ಮರು ಆಯ್ಕೆಯಾಗಿದ್ದಾರೆ.
ಬಹತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಗರ ಗೆಲುವು:
ನಿರೀಕ್ಷೆಯಂತೆ ಈ ಬಾರಿ ಚುನಾವಣೆಯಲ್ಲೂ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆ ಹಾಗು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಅನುಕಂಪದ ಅಲೆ ಕಂಡು ಬಂದಿದ್ದು, ಕೂಡ್ಲಿಗೆರೆ, ಹಿರಿಯೂರು ಮತ್ತು ಸಿಂಗನಮನೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಸ್ವಲ್ಪ ಸುಧಾರಣೆ ಕಾಯ್ದುಕೊಂಡಿದೆ ಎನ್ನಲಾಗಿದೆ.
೨ ಮತ ಅಂತರದಿಂದ ಗೆಲುವು : ಮರು ಮತದಾನಕ್ಕೆ ಮನವಿ
ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭ್ಯರ್ಥಿಯೊಬ್ಬರು ೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ಎದುರಾಳಿ ಅಭ್ಯರ್ಥಿ ಮರು ಎಣಿಕೆ ಮಾಡುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅರಹತೊಳಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಪತ್ರಕರ್ತ ರಂಗನಾಥ್ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಸಿಂಗನ ಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುತ್ತಿಗೆ ಕೆಲಸ ಮಾಡುವ ವ್ಯಕ್ತಿಯೋರ್ವನ ಪತ್ನಿ ಲಕ್ಷ್ಮಿ ಎಂಬುವರು ಇದೆ ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಇದೆ ಮೊದಲ ಬಾರಿಗೆ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಒಟ್ಟು ೧೬ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಈ ಪೈಕಿ ಕಲ್ಲಹಳ್ಳಿ ಕ್ಷೇತ್ರದಿಂದ ಕೆ.ವಿ ಧನಂಜಯ, ನಾಗತಿ ಬೆಳಗಲು ಕ್ಷೇತ್ರದಿಂದ ಲಕ್ಷ್ಮಮ್ಮ ಮತ್ತು ಮಂಜುಳ ಹಾಗು ಬಿಆರ್‌ಪಿಯಲ್ಲಿ ಲತಾ ಒಟ್ಟು ೪ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೧೦ ಕ್ಷೇತ್ರಗಳಲ್ಲಿ ೨ನೇ ಸ್ಥಾನ ಕಾಯ್ದುಕೊಂಡು ಗಮನೆ ಸೆಳೆದಿದೆ.
ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ೩೭೫ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು ೧೦೭೦ ಅಭ್ಯರ್ಥಿಗಳು ಕಣದಲ್ಲಿದ್ದರು.
ಒಟ್ಟು ೭೫ ಟೇಬಲ್‌ಗಳ ಎಣಿಕೆ ನಡೆದಿದ್ದು, ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಹಾಗು ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು. ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿರುವ ಕನಕಮಂಟಪ ಮೈದಾನದಲ್ಲಿ ಬೆಂಬಲಿಗರು ಸಂಭ್ರಮಿಸಿದರು.
ಭದ್ರಾವತಿ ಯರೇಹಳ್ಳಿ ಗ್ರಾ.ಪಂ. ಕೊರಲಕೊಪ್ಪ ಕ್ಷೇತ್ರ-೨ರಿಂದ ೪ನೇ ಬಾರಿಗೆ ಆಯ್ಕೆಯಾಗಿ ಗಮನ ಸೆಳೆದಿರುವ ಅಭ್ಯರ್ಥಿ ಸಿ.ಆರ್ ಶಿವರಾಮ್.
Tuesday, December 29, 2020
ಗ್ರಾ.ಪಂ. ಚುನಾವಣೆ : ೭೫ ಟೇಬಲ್, ೨೨೫ ಮಂದಿ ಸಿಬ್ಬಂದಿ, ೧೨೦ ಪೊಲೀಸರು
ಭದ್ರಾವತಿ: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ೧೦೭೦ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಡಿ.೨೨ರಂದು ನಡೆದ ಚುನಾವಣೆಯ ಮತದಾನದಲ್ಲಿ ಒಟ್ಟು ೧,೧೯,೩೫೯ ಮತದಾರರ ಪೈಕಿ ೯೮,೬೧೪ ಮಂದಿ ಮತ ಚಲಾಯಿಸುವ ಮೂಲಕ ಶೇ.೮೨.೬೨ ಮತದಾನ ನಡೆದಿದೆ. ಈ ಪೈಕಿ ೪೯,೪೩೯ ಮಹಿಳೆಯರು, ೪೯,೧೭೫ ಪುರುಷರು ಒಳಗೊಂಡಿದ್ದಾರೆ.
ತಾಲೂಕಿನ ನಿಂಬೆಗೊಂದಿ ಗ್ರಾಮ ಪಂಚಾಯಿತಿಯ ಇಂದಿರಾನಗರದ ಮತಗಟ್ಟೆ ನಂ. ೯ರಲ್ಲಿ ಅತಿಹೆಚ್ಚಿನ ಮತದಾನ ನಡೆದಿದೆ. ಒಟ್ಟು ೪೫೯ ಮತದಾರರಲ್ಲಿ ೪೩೭ ಮತದಾರರು ಮತ ಚಲಾಯಿಸಿದ್ದು, ಶೇ. ೯೫.೨೧ ರಷ್ಟು ಮತದಾನ ನಡೆದಿದೆ. ಇದೆ ರೀತಿ ಅರಳಿಬಿಳಚಿ ಗ್ರಾಮ ಪಂಚಾಯಿತಿಯ ಅರಬಿಳಚಿ ಕ್ಯಾಂಪ್-೧ರ ಮತಗಟ್ಟೆ ನಂ.೭೫ಎ ಒಟ್ಟು ೫೧೭ ಮತದಾರರಿದ್ದು, ಈ ಪೈಕಿ ಅತಿ ಕಡಿಮೆ ೩೧೦ ಮತದಾರರು ಮತ ಚಲಾಯಿಸಿದ್ದು, ಶೇ. ೫೯.೯೬ರಷ್ಟು ಮತದಾನ ನಡೆದಿದೆ.
ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೩೭೫ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಕೂಡ್ಲಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿ ಹೆಚ್ಚು ೧೯ ಅಭ್ಯರ್ಥಿಗಳು ಕಣದಲ್ಲಿರುವುದು ಗಮನ ಸೆಳೆದಿದೆ.
೭೫ ಟೇಬಲ್‌ಗಳಲ್ಲಿ ಮತ ಎಣಿಕೆ :
ಈ ಬಾರಿ ೭೫ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಟೇಬಲ್‌ಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಂಜೆ ಸುಮಾರು ೬ಕ್ಕೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
vivo ಸ್ಮಾರ್ಟ್‌ಫೋನ್‌ನಿಂದ ಕಳುಹಿಸಲಾಗಿದೆ
ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಡಿ.೨೨ರಂದು ನಡೆದ ಚುನಾವಣೆಯ ಮತದಾನದಲ್ಲಿ ಒಟ್ಟು ೧,೧೯,೩೫೯ ಮತದಾರರ ಪೈಕಿ ೯೮,೬೧೪ ಮಂದಿ ಮತ ಚಲಾಯಿಸುವ ಮೂಲಕ ಶೇ.೮೨.೬೨ ಮತದಾನ ನಡೆದಿದೆ. ಈ ಪೈಕಿ ೪೯,೪೩೯ ಮಹಿಳೆಯರು, ೪೯,೧೭೫ ಪುರುಷರು ಒಳಗೊಂಡಿದ್ದಾರೆ.
ತಾಲೂಕಿನ ನಿಂಬೆಗೊಂದಿ ಗ್ರಾಮ ಪಂಚಾಯಿತಿಯ ಇಂದಿರಾನಗರದ ಮತಗಟ್ಟೆ ನಂ. ೯ರಲ್ಲಿ ಅತಿಹೆಚ್ಚಿನ ಮತದಾನ ನಡೆದಿದೆ. ಒಟ್ಟು ೪೫೯ ಮತದಾರರಲ್ಲಿ ೪೩೭ ಮತದಾರರು ಮತ ಚಲಾಯಿಸಿದ್ದು, ಶೇ. ೯೫.೨೧ ರಷ್ಟು ಮತದಾನ ನಡೆದಿದೆ. ಇದೆ ರೀತಿ ಅರಳಿಬಿಳಚಿ ಗ್ರಾಮ ಪಂಚಾಯಿತಿಯ ಅರಬಿಳಚಿ ಕ್ಯಾಂಪ್-೧ರ ಮತಗಟ್ಟೆ ನಂ.೭೫ಎ ಒಟ್ಟು ೫೧೭ ಮತದಾರರಿದ್ದು, ಈ ಪೈಕಿ ಅತಿ ಕಡಿಮೆ ೩೧೦ ಮತದಾರರು ಮತ ಚಲಾಯಿಸಿದ್ದು, ಶೇ. ೫೯.೯೬ರಷ್ಟು ಮತದಾನ ನಡೆದಿದೆ.
ತಾಲೂಕಿನ ೩೫ ಗ್ರಾ.ಪಂ. ವ್ಯಾಪ್ತಿಯ ಒಟ್ಟು ೧೬೫ ಕ್ಷೇತ್ರಗಳ ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೩೭೫ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಕೂಡ್ಲಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತಿ ಹೆಚ್ಚು ೧೯ ಅಭ್ಯರ್ಥಿಗಳು ಕಣದಲ್ಲಿರುವುದು ಗಮನ ಸೆಳೆದಿದೆ.
೭೫ ಟೇಬಲ್‌ಗಳಲ್ಲಿ ಮತ ಎಣಿಕೆ :
ಈ ಬಾರಿ ೭೫ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಟೇಬಲ್‌ಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಂಜೆ ಸುಮಾರು ೬ಕ್ಕೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ಒಂದು ಟೇಬಲ್‌ನಲ್ಲಿ ತಲಾ ಇಬ್ಬರು ಎಣಿಕೆಗಾರರಂತೆ ಒಟ್ಟು ೧೫೦ ಎಣಿಕೆಗಾರರು, ೭೫ ಮಂದಿ ಮೇಲ್ವಿಚಾರಕರು ಸೇರಿದಂತೆ ೨೨೫ ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದು, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿಗಳು ಹಾಗು ಭದ್ರತೆಗಾಗಿ ಸುಮಾರು ೧೨೦ ಮಂದಿ ಪೊಲೀಸ್ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತಾಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
vivo ಸ್ಮಾರ್ಟ್‌ಫೋನ್‌ನಿಂದ ಕಳುಹಿಸಲಾಗಿದೆ
೪೦೦೦ ಜಿ+೩ ಗುಂಪು ಮನೆ ಯೋಜನೆ : ಉಳಿತಾಯ ಖಾತೆ ತೆರೆಯಲು ತಾಂತ್ರಿಕ ಸಮಸ್ಯೆ
ಭದ್ರಾವತಿ, ಡಿ. ೨೯: ನಗರಸಭೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ೪೦೦೦ ಜಿ+೩ ಗುಂಪು ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಮೊದಲನೇ ಕಂತಿನ ಮೊತ್ತ ಜಮಾ ಮಾಡಲು ನಗರಸಭೆ ಕಛೇರಿಯ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ತಾಂತ್ರಿಕ ತೊಂದರೆ ಎದುರಾಗಿದೆ.
ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಡಿ.೨೮ರೊಳಗೆ ಮೊದಲನೇ ಕಂತಿನ ವಂತಿಕೆ ರು.೧೦,೦೦೦ ಜಮಾ ಮಾಡಲು ನಗರಸಭೆ ಕಛೇರಿಯ ಯೂನಿಯನ್ ಬ್ಯಾಂಕ್ ಪ್ರತ್ಯೇಕ ಕೌಂಟರ್‌ನಲ್ಲಿ ಉಳಿತಾಯ ಖಾತೆ ತೆರೆಯಲು ಈ ಹಿಂದೆ ಆಶ್ರಯ ಸಮಿತಿ ತೀರ್ಮಾನದಂತೆ ಸೂಚಿಸಲಾಗಿತ್ತು. ಪ್ರಸ್ತುತ ತಾಂತ್ರಿಕ ಕಾರಣಗಳಿಂದ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸುವುದಾಗಿ ಪೌರಾಯುಕ್ತರು ಮನೋಹರ್ ತಿಳಿಸಿದ್ದಾರೆ.
ಕುವೆಂಪು ಹುಟ್ಟುಹಬ್ಬದ ಅಂಗವಾಗಿ ‘ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ’ಕ್ಕೆ ಚಾಲನೆ
ಕನ್ನಡ ಕಾಯಕಪಡೆ ಜಿಲ್ಲಾ ಸದಸ್ಯ ಅಪರಂಜಿ ಶಿವರಾಜ್ ನೇತೃತ್ವದಲ್ಲಿ ಜಾಗೃತಿ ಜಾಥಾ
ಭದ್ರಾವತಿ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
ಭದ್ರಾವತಿ, ಡಿ. ೨೯: ಕನ್ನಡ ಕಾಯಕ ವರ್ಷ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಕೈಗೊಂಡಿರುವ 'ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ ಅಭಿಯಾನ'ಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಮುಂಭಾಗ ಘೋಷ ವಾಕ್ಯ ಪ್ರದರ್ಶಿಸುವ ಜೊತೆಗೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ಹಾಗು ಗ್ರಾಹಕರಿಗೆ ಕರಪತ್ರ ವಿತರಿಸಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ಜಾಗೃತಿ ಮೂಡಿಸಲಾಯಿತು.
ಅಲ್ಲದೆ ಬಿ.ಎಚ್ ರಸ್ತೆಯಲ್ಲಿ ಜಾಥಾ ನಡೆಸುವ ಮೂಲಕ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‌ಗಳು, ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಹಣಕಾಸು ಸಂಸ್ಥೆಗಳು, ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಕ್ಲಿನಿಕ್‌ಗಳು, ಎಲ್ಲಾ ಸಂಘ-ಸಂಸ್ಥೆಗಳು ಶುದ್ಧ ಕನ್ನಡ ನಾಮಫಲಕ ಅನಾವರಣಗೊಳಿಸುವಂತೆ ಜಾಗೃತಿ ಮೂಡಿಸಲಾಯಿತು.
ಕನ್ನಡ ಕಾಯಕ ಪಡೆ ಜಿಲ್ಲಾ ಸದಸ್ಯ, ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ಅಭಿಯಾನದ ನೇತೃತ್ವ ವಹಿಸಿದ್ದರು. ಸುನಿತಾ, ಶಿಮಮೂರ್ತಿ, ಕುಂಚ ಕಲಾವಿದ ರಾಜು, ರಾಜಶೇಖರ್, ನಂಜುಂಡಪ್ಪ, ಶಿವಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಸಚಿವರಿಗೆ ಮನವಿ
ಭದ್ರಾವತಿ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು
ಭದ್ರಾವತಿ, ಡಿ. ೨೯: ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿನ ನೀರು ಸರಬರಾಜು ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಹಾಗು ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್‌ಗೆ ಮನವಿ ಸಲ್ಲಿಸಲಾಯಿತು.
ನಗರಸಭೆ ಎಲ್ಲಾ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮುಂದಿನ ೫೦ ವರ್ಷಗಳಿಗೆ ಪರಿಶುದ್ಧ ಹಾಗು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಕುಡಿಯುವ ನೀರಿನ ಟ್ಯಾಂಕ್‌ಗಳ ನಿರ್ಮಾಣ, ಹಳೇಯ ಟ್ಯಾಂಕ್‌ಗಳನ್ನು ದುರಸ್ತಿಗೊಳಿಸುವುದು, ವಿತರಣಾ ಕೊಳವೆಗಳನ್ನು ಬದಲಿಸುವುದು, ಹಳೇನಗರ ಮತ್ತು ನ್ಯೂಟೌನ್ ಭಾಗದ ತಲಾ ಒಂದೊಂದು ಪಂಪ್‌ಹೌಸ್‌ಗಳಲ್ಲಿ ವಿದೇಶಿ ಜಪಾನ್ ತಂತ್ರಜ್ಞಾನದ ಮೈಕ್ರೋ ಫೈಬರ್ ಫಿಲ್ಟರ್ ಅಳವಡಿಕೆ ಸ್ಕ್ಯಾಡಾ ಸ್ಕೀಂ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳುವುದು.
ನ್ಯೂಟೌನ್ ಭಾಗದ ಜನ್ನಾಪುರ ಎನ್‌ಟಿಬಿ ಮತ್ತು ಸಂಪಿಗೆ ಲೇಔಟ್, ಬೊಮ್ಮನಕಟ್ಟೆ, ಕಡದಕಟ್ಟೆ, ಸಿದ್ದಾಪುರ ಸೇರಿದಂತೆ ಒಳಚರಂಡಿ ಕಾಮಗಾರಿ ನಡೆಯದಿರುವ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸುವಂತೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಛೇರ‍್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
ಸಂಸದ ಬಿ.ವೈ ರಾಘವೇಂದ್ರ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Monday, December 28, 2020
ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿ : ಪ್ರೈಮ್ ಪ್ಯಾಂಟಮ್ಸ್ ತಂಡಕ್ಕೆ ಮೊದಲನೇ ಬಹುಮಾನ
ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
ಭದ್ರಾವತಿ, ಡಿ. ೨೮: ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
ಪಂದ್ಯಾವಳಿಯಲ್ಲಿ ದಿ ವಾಲ್ ಸಿಸಿ, ವೆಂಕಿ ಇಲೆವೆನ್, ಪ್ರೈಮ್ ಪ್ಯಾಂಟಮ್ಸ್, ರೈಸಿಂಗ್ ಪೋನಿಕ್ಸ್ ಮತ್ತು ಸ್ನೇಹ ಜೀವಿ ಕ್ರಿಕೆಟರ‍್ಸ್ ಒಟ್ಟು ೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಪ್ರೈಮ್ ಪ್ಯಾಂಟಮ್ಸ್ ಮೊದಲನೇ ಬಹುಮಾನದೊಂದಿಗೆ ೩೦,೦೦೦ ರು. ನಗದು ಹಾಗು ಟ್ರೋಫಿ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಸ್ನೇಹ ಜೀವಿ ಕ್ರಿಕೆಟರ‍್ಸ್ ತಂಡದ ಅಭ್ಯುದಯ ಉಪಾಧ್ಯಾಯ ಉತ್ತಮ ಆಲ್ ರೌಂಡರ್ ಆಟಗಾರ, ಪ್ರೈಮ್ ಪ್ಯಾಂಟಮ್ಸ್ ತಂಡದ ಅಬು ತಲೀಬ್ ಮತ್ತು ವೆಂಕಿ ಇಲೆವೆನ್ ತಂಡದ ಅದೇಶ್ ಆರ್ ಗೌಡ ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಗೆ ಭಾಜನರಾದರು.
ಶಾಸಕ ಬಿ.ಕೆ ಸಂಗಮೇಶ್ವರ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್ ದೇವರಾಜ್, ನಿವೃತ್ತ ಕ್ರೀಡಾ ತರಬೇತಿ ಅಧಿಕಾರಿ ವೆಂಕಟೇಶ್, ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಯುವ ಮುಖಂಡ ಬಿ.ಎಸ್ ಗಣೇಶ್, ಆಯೋಜಕರಾದ ಮೈಕಲ್ ಮತ್ತು ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ಸೂಡಾ ಸದಸ್ಯ, ಬಿಜೆಪಿ ಮುಖಂಡ ಬಿ.ಜೆ ರಾಮಲಿಂಗಯ್ಯ
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ೧೫ ಮಂದಿ ಪದಾಧಿಕಾರಿಗಳು.
ಭದ್ರಾವತಿ, ಡಿ. ೨೮: ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ೧೫ ಮಂದಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಲ್ಯಾಣ ಕೇಂದ್ರದ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾಧಿಕಾರಿಯಾದ ಹಿರಿಯ ನ್ಯಾಯವಾದಿ ಕೆ.ಎಂ ಸತೀಶ್ ೧೫ ಮಂದಿ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ಅಧ್ಯಕ್ಷರಾಗಿ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷರಾಗಿ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್ ನಾಗರಾಜ್, ಕಾರ್ಯದರ್ಶಿಗಳಾಗಿ ಎಸ್.ಎಚ್ ಹನುಮಂತರಾವ್ ಮತ್ತು ಡಿ. ನಂಜಪ್ಪ ಹಾಗೂ ಖಜಾಂಚಿಯಾಗಿ ಎಲ್. ಬಸವರಾಜಪ್ಪ, ಗೌರವಾಧ್ಯಕ್ಷರಾಗಿ ಜೆ.ಎಸ್ ನಾಗಭೂಷಣ್ ಹಾಗು ಸದಸ್ಯರಾಗಿ ನರಸಿಂಹಯ್ಯ ಎಚ್. ರಾಮಪ್ಪ, ಕೆಂಪಯ್ಯ, ಜಿ. ಶಂಕರ್, ಎಸ್.ಎಸ್ ಭೈರಪ್ಪ, ಗಂಗಾಧರ, ಮಹೇಶ್ವರಪ್ಪ ಮತ್ತು ಎಸ್. ನರಸಿಂಹಚಾರ್ ಆಯ್ಕೆಯಾಗಿದ್ದಾರೆ.
ಅಡುಗೆ ಅನಿಲ ದರ ಏರಿಕೆ ಖಂಡಿಸಿ ಏಕಾಂಗಿ ಹೋರಾಟ
ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
ಭದ್ರಾವತಿ, ಡಿ. ೨೮: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
ಅಡುಗೆ ಅನಿಲ ಬೆಲೆ ಮಾರ್ಚ್ ತಿಂಗಳಿನಲ್ಲಿ ರು.೫೫೦ ಇದ್ದು, ಇದೀಗ ಡಿಸೆಂಬರ್ ತಿಂಗಳಿನಲ್ಲಿ ರು. ೭೦೮ ತಲುಪಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಸುಮಾರು ೨೦ ಕೋಟಿ ಕುಟುಂಬಗಳಿದ್ದು, ಬೆಲೆ ಏರಿಕೆಯಿಂದಾಗಿ ಬಡ ವರ್ಗದವರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಪ್ರತಿದಿನ ಪರಿಷ್ಕರಣೆಯಾಗುವ ಮಾದರಿಯಲ್ಲಿ ೨೦೨೧ ರಿಂದ ಅಡುಗೆ ಅನಿಲ ಬೆಲೆ ಸಹ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ತೈಲ ಕಂಪನಿಗಳ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿದೆ. ಈಗಾಗಲೇ ಕೊರೋನಾ ಮಹಾಮಾರಿಯಿಂದ ದೇಶದ ಬಡವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಬಡವರ್ಗದವರ ಮೇಲೆ ಮರಣ ಶಾಸನ ಬರೆದಂತಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಸಿಲಿಂಡರ್ ದರ ರು. ೧,೨೦೦ಕ್ಕೂ ಅಧಿಕ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಡವರ್ಗದವರ ನೆರವಿಗೆ ಮುಂದಾಗಬೇಕು. ಅಡುಗೆ ಅನಿಲ ದರ ಹೆಚ್ಚಾಗದಂತೆ ನಿಯಂತ್ರಿಸಬೇಕೆಂದು ಸಂಯುಕ್ತ ಜನಾತದಳ ಆಗ್ರಹಿಸುತ್ತದೆ ಎಂದರು.
Sunday, December 27, 2020
ಪ್ರೊ ಕಬಡ್ಡಿ ಪಂದ್ಯಾವಳಿಗೆ ೧೨ ತಂಡಗಳ ೯೬ ಕ್ರೀಡಾಪಟುಗಳ ಆಯ್ಕೆ
ಭದ್ರಾವತಿಯಲ್ಲಿ ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಿತು.
ಭದ್ರಾವತಿ, ಡಿ. ೨೭: ತಾಲೂಕು ಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಇದರ ಅಂಗವಾಗಿ ಭಾನುವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ನಡೆಯಿತು.
ಒಟ್ಟು ೧೪೬ ಮಂದಿ ಕಬಡ್ಡಿ ಪಟುಗಳು ಪಾಲ್ಗೊಂಡಿದ್ದು, ಈ ಪೈಕಿ ತಲಾ ೮ ಜನರಂತೆ ೧೨ ತಂಡಗಳ ೯೬ ಮಂದಿ ಕಬಡ್ಡಿ ಪಟುಗಳನ್ನು ಆಯ್ಕೆ ಮಾಡಲಾಯಿತು. ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ನಗರಸಭಾ ಸದಸ್ಯ ಮಣಿ ಎ.ಎನ್.ಎಸ್, ಮಾರುತಿ ಮೆಡಿಕಲ್ಸ್ ಆನಂದ್ ಹಾಗು ನಗರಸಭೆ ಮಾಜಿ ಸದಸ್ಯ ಚನ್ನಪ್ಪ ಉಪಸ್ಥಿತರಿದ್ದು, ತಲಾ ಒಂದೊಂದು ತಂಡಗಳನ್ನು ಖರೀದಿಸಿದರು.
ರಾಜ್ಯಮಟ್ಟದ ಕಬಡ್ಡಿ ಕೇಸರಿ ಪ್ರಶಸ್ತಿ ವಿಜೇತ, ತರಬೇತಿದಾರ ಎಚ್.ಆರ್ ರಂಗನಾಥ್, ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಎಚ್.ಎನ್ ಕೃಷ್ಣೇಗೌಡ, ತೀರ್ಪುಗಾರ ಎಂ.ಬಿ ಬಸವರಾಜ್, ದೇವರಾಜ್ ಮತ್ತು ಅಂತರಾಷ್ಟ್ರೀಯ ತೀರ್ಪುಗಾರ ಎಸ್.ಎನ್ ಸಿದ್ದಯ್ಯ ನೇತೃತ್ವದಲ್ಲಿ ಆಯ್ಕೆ ನಡೆಯಿತು.
ಹಿರಿಯ ಕಬಡ್ಡಿ ಪಟು ಚಿನ್ನಯ್ಯ, ಅತ್ತಿಗುಂದ ಕರಿಯಪ್ಪ, ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಸಂತಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಏಕಾಂತಮ್ಮ ನಿಧನ
ಏಕಾಂತಮ್ಮ
ಭದ್ರಾವತಿ, ಡಿ. ೨೭: ನಗರ ರುದ್ರ ಕ್ಲಿನಿಕ್ ವೈದ್ಯ ಡಾ. ರುದ್ರಮೂರ್ತಿರವರ ಪತ್ನಿ ಏಕಾಂತಮ್ಮ ಭಾನುವಾರ ನಿಧನ ಹೊಂದಿದರು.
ಪತಿ ಡಾ. ರುದ್ರಮೂರ್ತಿ, ಅಬುದಾಬಿಯಲ್ಲಿರುವ ಇಂಜಿನಿಯರ್ ಯತೀಶ್, ಬೆಂಗಳೂರಿನ ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ತಿಪ್ಪೇಶ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಸೊಸೆಯಂದಿರನ್ನು ಹೊಂದಿದ್ದರು.
ಮೃತರ ಅಂತ್ಯಕ್ರಿಯೆ ಡಿ.೨೮ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದ್ದು, ಮೃತರ ನಿಧನಕ್ಕೆ ನಗರದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹಳೇಯ ವಿದ್ಯಾರ್ಥಿ ಸ್ನೇಹಿತ ನ್ಯಾಯಾಧೀಶ ಎಸ್.ಟಿ ದೇವರಾಜ್‌ಗೆ ಸನ್ಮಾನ, ಅಭಿನಂದನೆ
ಮೈಸೂರಿನ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ದೇವರಾಜ್‌ರವರು ಕಾರ್ಯ ನಿಮಿತ್ತ ಕುಟುಂಬ ಸಮೇತ ಭದ್ರಾವತಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ಸನ್ಮಾನಿಸಿ ಅಭಿನಂದಿಸಿದರು.
ಭದ್ರಾವತಿ, ಡಿ. ೨೭: ಸುಮಾರು ೩೪ ವರ್ಷಗಳ ನಂತರ ವಿದ್ಯಾರ್ಥಿ ಸ್ನೇಹಿತರೊಬ್ಬರು ಉನ್ನತ ಹುದ್ದೆಯನ್ನು ಆಲಂಕರಿಸಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಸ್ನೇಹಿತರೆಲ್ಲರೂ ಸೇರಿ ಅವರನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ತಮ್ಮ ಹಳೇಯ ನೆನಪಿನೊಂದಿಗೆ ಕೆಲ ಕ್ಷಣ ಸಂಭ್ರಮಿಸಿದ ಘಟನೆ ಭಾನುವಾರ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನಡೆಯಿತು.
ಮೈಸೂರಿನ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಟಿ ದೇವರಾಜ್‌ರವರು ಕಾರ್ಯ ನಿಮಿತ್ತ ಕುಟುಂಬ ಸಮೇತ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರ ವಿದ್ಯಾರ್ಥಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿ ಸನ್ಮಾನಿಸಿ ಅಭಿನಂದಿಸಿದರು.
ದೇವರಾಜ್‌ರವರು ೩೪ ವರ್ಷಗಳ ಹಿಂದೆ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ವ್ಯಾಸಂಗ ನಡೆಸಿದ್ದರು. ಈ ಸಂದರ್ಭದಲ್ಲಿ ಇವರೊಂದಿಗೆ ವ್ಯಾಸಂಗ ನಡೆಸುತ್ತಿದ್ದ ನಗರದ ವಿಇಎಸ್ ವಿದ್ಯಾಸಂಸ್ಥೆಯ ರಾಷ್ಟ್ರ ಪ್ರಶಸ್ತಿ ಶಿಕ್ಷಕ ಶಿವಲಿಂಗೇಗೌಡ, ಡಾ. ಭುಜಂಗಶೆಟ್ಟಿ, ರವಿಶಂಕರ್, ಬಾಬುಶೇಟ್, ಭುವನೇಶ್ವರ್, ಉಪನ್ಯಾಸಕ ಮಲ್ಲೇಶಪ್ಪ, ಮುಖ್ಯೋಪಾಧ್ಯಾಯ ಜಯಪ್ಪ, ವಕೀಲ ಕಾರಂತ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್, ಹೈಕೋರ್ಟ್ ವಕೀಲ ಲೋಕನಾಥ್ ಹಾಗು ಇನ್ನಿತರರು ತಮ್ಮ ಹಳೇಯ ನೆನಪುಗಳೊಂದಿಗೆ ಕೆಲ ಕ್ಷಣ ಸಂಭ್ರಮಿಸಿದರು.
ವಿಜೃಂಭಣೆಯಿಂದ ಜರುಗಿದ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ
ಕೋವಿಡ್-೧೯ರ ನಡುವೆಯೂ ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಭದ್ರಾವತಿ, ಡಿ. ೨೭: ಕೋವಿಡ್-೧೯ರ ನಡುವೆಯೂ ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಮಧ್ಯಾಹ್ನ ಸುಮಾರು ೧೨.೩೦ಕ್ಕೆ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಸರ್.ಎಂ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೆ ಸಾಗಿತು. ನೂರಾರು ಭಕ್ತಾಧಿಗಳು ರಥೋತ್ಸವ ಆರಂಭವಾಗುತ್ತಿದ್ದಂತೆ ಜೈಕಾರಗಳನ್ನು ಹಾಕಿ ಮುಂದೆ ಸಾಗಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕಾಂಗ್ರೆಸ್ ಮುಖಂಡ ಎಚ್.ಸಿ ದಾಸೇಗೌಡ ಹಲವಾರು ವರ್ಷಗಳಿಂದ ರಥೋತ್ಸವದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ನೆರವೇರಿಸಿಕೊಂಡು ಬರುತ್ತಿದ್ದು, ಈ ಬಾರಿ ಸಹ ಇವರ ನೇತೃತ್ವದಲ್ಲಿ ಪ್ರಸಾದ ವಿತರಣೆ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ, ಬಿಜೆಪಿ ಮುಖಂಡ ಎಚ್.ಸಿ ರಮೇಶ್, ಮುಖಂಡರಾದ ದೇವಸ್ಥಾನ ಸೇವಾ ಸಮಿತಿ ಪ್ರಮುಖರಾದ ಕರಿಯಪ್ಪ, ಎ.ಟಿ ರವಿ, ಕಬ್ಬಡಿ ಕೃಷ್ಣೇಗೌಡ, ಸತೀಶ್‌ಗೌಡ, ತಿಮ್ಮೇಗೌಡ, ಆರ್. ವೇಣುಗೋಪಾಲ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಕೊವೀಡ್-೧೯ರ ಹಿನ್ನಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹೆಚ್ಚಿನ ಜಾಗೃತಿ ವಹಿಸಿತ್ತು. ಭಕ್ತಾಧಿಗಳ ಸಂಖ್ಯೆ ನಿಯಂತ್ರಿಸುವ ಹಿನ್ನಲೆಯಲ್ಲಿ ರಥೋತ್ಸವ ಕುರಿತು ಹೆಚ್ಚಿನ ಪ್ರಚಾರ ಕೈಗೊಂಡಿರಲಿಲ್ಲ. ಆದರೂ ಸಹ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಮಾಸ್ಕ್-ಸಾಮಾಜಿಕ ಅಂತರ ಕಂಡು ಬರಲಿಲ್ಲ:
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳಲ್ಲಿ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಬಳಕೆಯಾಗಲಿ ಕಂಡು ಬರಲಿಲ್ಲ. ಒಟ್ಟಾರೆ ಕೋವಿಡ್-೧೯ ನಿಯಮಗಳನ್ನು ಪಾಲಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
Saturday, December 26, 2020
ಕನ್ನಡ ಕಾಯಕ ಪಡೆಗೆ ಅಪರಂಜಿ ಶಿವರಾಜ್ ನೇಮಕ
ಅಪರಂಜಿ ಶಿವರಾಜ್
ಭದ್ರಾವತಿ, ಡಿ. ೨೬: ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವಂಬರ್ ೧, ೨೦೨೦ ರಿಂದ ಅಕ್ಟೋಬರ್ ೩೧, ೨೦೨೧ರವರೆಗೆ 'ಕನ್ನಡ ಕಾಯಕ ವರ್ಷ' ಇದರ ಅಂಗವಾಗಿ ಜಾರಿಗೆ ತಂದಿರುವ ಕಾರ್ಯಕ್ರಮದ ಕಾರ್ಯಸೂಚಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಚಿಸಿರುವ ಕನ್ನಡ ಕಾಯಕ ಪಡೆಗೆ ಶಿವಮೊಗ್ಗ ಜಿಲ್ಲೆಯಿಂದ ನಗರದ ಚಲನಚಿತ್ರ ನಟ, ರಂಗ ಕಲಾವಿದ ಅಪರಂಜಿ ಶಿವರಾಜ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಭರಣ ಆದೇಶಹೊರಡಿಸಿದ್ದು, ಪ್ರಥಮ ಹಂತವಾಗಿ ಡಿ.೨೯ರಂದು ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯದ ಎಲ್ಲಾ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಕೆ ಮತ್ತು ಶುದ್ಧ ಕನ್ನಡ ನಾಮಫಲಕ ಅಳವಡಿಕೆ ಅಭಿಯಾನ ಯಶಸ್ವಿಗೆ ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತೆ ಅಧ್ಯಕ್ಷರು ಅಪರಂಜಿ ಶಿವರಾಜ್‌ರವರಿಗೆ ಸೂಚಿಸಿದ್ದಾರೆ.
ಜ.೨ ಮತ್ತು ೩ರಂದು ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ : ಡಿ.ಟಿ ಮೇಘರಾಜ್
ಭದ್ರಾವತಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಮಾತನಾಡಿದರು.
ಭದ್ರಾವತಿ, ಡಿ. ೨೬: ರಾಜ್ಯದಲ್ಲಿ ಬಿಜೆಪಿ ಪಕ್ಷ ನೆಲೆ ಕಂಡುಕೊಳ್ಳಲು ಶಿವಮೊಗ್ಗ ಜಿಲ್ಲೆಯ ಕೊಡುಗೆ ಆಪಾರವಾಗಿದೆ. ತತ್ವ, ಸಿದ್ದಾಂತ, ಹೋರಾಟಗಳ ನೆಲೆಗಟ್ಟಿನಲ್ಲಿ ರೂಪುಗೊಂಡು ಪ್ರಸ್ತುತ ದಕ್ಷಿಣ ಭಾರತದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷ ದೇಶಾದ್ಯಂತ ಜನಮನ್ನಣೆಗೆ ಪಾತ್ರವಾಗಿದೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಪುನಃ ಸಂಘಟನಾತ್ಮಕ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಜ.೨ ಮತ್ತು ೩ ರಂದು ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ರಾಜಕಾರಣದ ಪ್ರತಿ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅನನ್ಯ ಹಾಗು ಅಪಾರವಾಗಿದೆ. ೧೯೭೧ರಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ರೂಪುಗೊಂಡ ಪರಿಣಾಮ ಸಾಕಷ್ಟು ಬದಲಾವಣೆಗಳಾದವು. ೧೯೭೬ರಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ, ೧೯೯೨ರಲ್ಲಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಗಳು ಜಿಲ್ಲೆಯಲ್ಲಿ ನಡೆದವು. ಈ ನಡುವೆ ಪಕ್ಷದಿಂದ ಹಲವು ಮಂದಿ ಚುನಾವಣೆಗಳಲ್ಲಿ ಕಣಕ್ಕಿಳಿದು ಸ್ಪರ್ಧಿಸಿದರು. ಸೋಲು-ಗೆಲುವುಗಳಿಗೆ ಎದೆಗುಂದದೆ ನಿರಂತರವಾಗಿ ಪ್ರಯತ್ನಿಸಿದ ಫಲವಾಗಿ ೧೯೭೫ರಲ್ಲಿ ಪಕ್ಷದಿಂದ ೨ ಜನ ಮಾತ್ರ ವಿಧಾನಸಭೆಗೆ ಆಯ್ಕೆಯಾದರು. ಈ ಪೈಕಿ ೧ ಸ್ಥಾನ ಜಿಲ್ಲೆಗೆ ಸೇರಿದ್ದಾಗಿದ್ದು, ನಂತರ ೧೯೭೯ರಲ್ಲಿ ೪ ಜನ ಆಯ್ಕೆಯಾಗಿದ್ದು, ಈ ಪೈಕಿ ೨ ಸ್ಥಾನ ಜಿಲ್ಲೆಗೆ ಸೇರಿದ್ದಾಗಿದೆ. ನಂತರ ೧೯೯೮ರಲ್ಲಿ ನಡೆದ ಚುನಾವಣೆಯಲ್ಲಿ ೪೦ ಜನ ಆಯ್ಕೆಯಾಗಿದ್ದು, ಆ ನಂತರ ಪಕ್ಷ ರಾಜ್ಯದಲ್ಲಿ ನೆಲೆ ಕಂಡುಕೊಂಡಿತು. ೧೯೯೮ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ೧೮ ಜನ ಸಂಸದರು ಆಯ್ಕೆಯಾದರು. ಈ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಹ ಕ್ಷೇತ್ರ ಸಹ ಒಂದಾಗಿದೆ. ಅಂದಿನಿಂದ ನಿರಂತರವಾಗಿ ೫ ಬಾರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿ.ವೈ. ರಾಘವೇಂದ್ರರವರು ೩ನೇ ಬಾರಿಗೆ ಸಂಸದರಾಗಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಜಿಲ್ಲೆ ಹಾಗು ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ೭ ಸ್ಥಾನಗಳ ಪೈಕಿ ೬ ಸ್ಥಾನಗಳಲ್ಲಿ ಬಿಜೆಪಿ ಶಾಸಕರಿದ್ದು, ಮುಂದಿನ ದಿನಗಳಲ್ಲಿ ಭದ್ರಾವತಿ ಸಹ ಸೇರಿ ೭ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಆರಂಭದಿಂದಲೂ ಜನ ಸಾಮಾನ್ಯರ ಪಕ್ಷವಾಗಿ ರೂಪುಗೊಂಡು ಸಮಾಜವಾದಿ ಚಿಂತೆನೆಗಳನ್ನು ಮೈಗೂಡಿಸಿಕೊಂಡು ಬಡವರ, ದಿನದಲಿತರ ಪರವಾಗಿ, ರೈತರ ಪರವಾಗಿ ಹೋರಾಟ ನಡೆಸುತ್ತಿದೆ. ಇವೆಲ್ಲವೂ ಕಾರ್ಯರೂಪಕ್ಕೆ ತಂದಿರುವ ಪರಿಣಾಮವಾಗಿ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಪಕ್ಷವಾಗಿ ರೂಪುಗೊಂಡಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸುವ ಉದ್ದೇಶದಿಂದ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಸಮಾವೇಶಗಳು, ಈ ಹಿಂದಿನ ಸಭೆಯಲ್ಲಿ ನಡೆದಿರುವ ಬದಲಾವಣೆಗಳು, ಕಂಡು ಕೊಂಡಿರುವ ಫಲಿತಾಂಶಗಳು, ಹೊಸತನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಸಭೆಯಲ್ಲಿ ಪ್ರಮುಖರಾದ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಅವಿನಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಟಿ ಮೇಘರಾಜ್‌ರವರನ್ನು ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸನ್ಮಾನಿಸಿ ಅಭಿನಂದಿಸಿದರು.
ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬ : ರಕ್ತದಾನ ಶಿಬಿರ
ಭದ್ರಾವತಿ ಹುತ್ತಾಕಾಲೋನಿ ನಿವಾಸಿ, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ನೆರವೇರಿತು.
ಭದ್ರಾವತಿ, ಡಿ. ೨೬: ನಗರದ ಹುತ್ತಾಕಾಲೋನಿ ನಿವಾಸಿ, ಸಮಾಜ ಸೇವಕ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೬ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನೆರವೇರಿತು.
ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಕಡು ಬಡವರಿಗಾಗಿ ಉಚಿತ ಆಂಬ್ಯುಲೆನ್ಸ್ ಸೇವೆ, ದೇವಸ್ಥಾನಗಳ ಧಾರ್ಮಿಕ ಕಾರ್ಯಗಳಿಗೆ ನೆರವು, ಕೊರೋನಾ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡವರಿಗೆ ಲಾಕ್‌ಡೌನ್ ಮುಕ್ತಾಯಗೊಳ್ಳುವವರೆಗೂ ಆಹಾರ ತಯಾರಿಸಿ ವಿತರಣೆ ಮಾಡುವ ಜೊತೆಗೆ ವಿವಿಧ ಸಂಘ-ಸಂಸ್ಥೆಗಳಿಗೆ ದವಸ ಧಾನ್ಯ ಸೇರಿದಂತೆ ದಿನಬಳಕೆ ವಸ್ತುಗಳ ವಿತರಣೆ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಪೊಲೀಸ್ ಉಮೇಶ್‌ರವರು ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಉಮೇಶ್‌ರವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಅಚರಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದರು.
ರಕ್ತದಾನ ಶಿಬಿರ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ನೆರವೇರಿದವು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಹುಟ್ಟುಹಬ್ಬ ಶುಭಾಶಯ ಕೋರಿ ಉಮೇಶ್‌ರವರನ್ನು ಅಭಿನಂದಿಸಿದರು.
ನಗರಸಭೆ ಹಿರಿಯ ಸದಸ್ಯರಾದ ಕೆ.ಎನ್ ಭೈರಪ್ಪಗೌಡ, ಮಹೇಶ್, ನ್ಯೂಟೌನ್ ಶ್ರೀ ಕರುಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ, ಸತೀಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅನಸೂಯ ನಿಧನ
ಅನಸೂಯ
ಭದ್ರಾವತಿ, ಡಿ. ೨೬: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸುಬ್ರಮಣ್ಯರವರ ತಾಯಿ ಅನಸೂಯ(೭೦) ಶನಿವಾರ ನಿಧನ ಹೊಂದಿದರು.
ಪತಿ ಸಿ.ಕೆ ಗೋಪಾಲಸ್ವಾಮಿ, ಪುತ್ರ ಸುಬ್ರಮಣಿ, ಸೊಸೆ ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಎನ್. ಬಾಬು, ಟಿ.ಎಸ್ ಆನಂದಕುಮಾರ್, ಸುದರ್ಶನ್, ಬದರಿನಾರಾಯಣ, ಸುಭಾಷ್‌ರಾವ್ ಸಿಂಧ್ಯಾ, ಶೈಲೇಶ್‌ಕೋಠಿ, ಬಸವರಾಜ್, ಅನಂತಕುಮಾರ್ ಸೇರಿದಂತೆ ಇನ್ನಿತರರು ಮೃತರ ಅಂತಿಮ ದರ್ಶನ ಪಡೆದು ನಂತರ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.
Friday, December 25, 2020
ಕೊರೋನಾ ನಡುವೆಯೂ ಸಂಭ್ರಮದ ವೈಕುಂಠ ಏಕಾದಶಿ
ಪುರಾಣ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಸಂಭ್ರಮಕ್ಕೆ ಮೊಟಕು
ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ನಡೆಯಿತು.
ಭದ್ರಾವತಿ, ಡಿ. ೨೫: ಕೋವಿಡ್-೧೯ರ ನಡುವೆಯೂ ತಾಲೂಕಿನ ವಿವಿಧ ದೆವಾಲಯಗಳಲ್ಲಿ ಸಂಪ್ರದಾಯದಂತೆ ಶುಕ್ರವಾರ ವೈಕುಂಠ ಏಕಾದಶಿ ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಲಾಯಿತು.
ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ :
ಕ್ಷೇತ್ರದ ಪುರಾಣ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಗಿನ ಜಾವ ೪ ಗಂಟೆಗೆ ದೇವಾಲಯದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಪರುಷೋತ್ತಮಸ್ವಾಮಿ, ಶ್ರೀ ವೇಣುಗೋಪಾಲಕೃಷ್ಣ ಸೇರಿದಂತೆ ಮೂಲ ವಿಗ್ರಹಗಳಿಗೆ ವಿಶೇಷಲಂಕಾರ ಕೈಗೊಳ್ಳುವ ಮೂಲಕ ವಿಶೇಷ ಪೂಜೆಯೊಂದಿಗೆ ಒಳಪ್ರಾಕಾರದಲ್ಲಿ ಚಂಡೆ, ಮಂಗಳವಾದ್ಯ ಸಹಿತ ಉತ್ಸವ ನಡೆಸಲಾಯಿತು. ೬ ಗಂಟೆಯಿಂದ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ತಹಸೀಲ್ದಾರ್ ಜಿ. ಸಂತೋಷ್ ಕುಮಾರ್, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಸೇರಿದಂತೆ ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು.
ಸಹಾಯಕ ಅರ್ಚಕ ಶ್ರೀನಿವಾಸ್, ನಾರಾಯಣಚಾರ್, ನರಸಿಂಹಚಾರ್, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಉಪಾಧ್ಯಕ್ಷ ರಮಾಕಾಂತ್, ಇಂದ್ರಸೇನ, ಕೃಷ್ಣಪ್ಪ, ಸರೂ, ವೇದ ಪಾಠಶಾಲೆಯ ರವಿ, ಶ್ರೀನಿಧಿ, ಶ್ರೀಹರಿ, ಅಭಿರಾಮ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಪೂಜಾಕೈಂಕರ್ಯಗಳನ್ನು ನೆರವೇರಿಸಿತು.
ಭದ್ರಾವತಿ ಅಪ್ಪರ್ ಹುತ್ತಾ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತೀವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಲಾಯಿತು. ಮೂಲ ವಿಗ್ರಹಕ್ಕೆ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು.
ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ :
ನಗರದ ಅಪ್ಪರ್ ಹುತ್ತಾ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತೀವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಲಾಯಿತು. ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತಾಧಿಗಳಿಗೆ ತೀರ್ಥಪ್ರಸಾದ, ಲಾಡು, ಬಾದಮಿ ಹಾಲು ವಿತರಣೆ ನಡೆಯಿತು. ಕೋವಿಡ್-೧೯ರ ನಡುವೆಯೂ ಹೆಚ್ಚಿನ ಭಕ್ತಾಧಿಗಳು ಪಾಲ್ಗೊಂಡಿದ್ದರು. ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಆದರೆ ಮಾಸ್ಕ್, ಸಾಮಾಜಿಕ ಅಂತರ ಕಂಡು ಬರಲಿಲ್ಲ.
ಭದ್ರಾವತಿ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಪೊಲೀಸ್ ಮೈದಾನದಲ್ಲಿರುವ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಆಕರ್ಷಕ ಅಲಂಕಾರ ಕೈಗೊಳ್ಳಲಾಗಿತ್ತು.
ಮಿಲ್ಟ್ರಿಕ್ಯಾಂಪ್ ಶ್ರೀನಿವಾಸಸ್ವಾಮಿ ದೇವಾಲಯ :
ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಪೊಲೀಸ್ ಮೈದಾನದಲ್ಲಿರುವ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಆಕರ್ಷಕ ಅಲಂಕಾರ ಕೈಗೊಳ್ಳಲಾಗಿತ್ತು. ಭಕ್ತಾದಿಗಳಿಗೆ ತೀರ್ಥಪ್ರಸಾದ, ಲಾಡು ವಿತರಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು, ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಭಕ್ತಾಧಿಗಳು ಸ್ವಾಮಿಯ ದರ್ಶನ ಪಡೆದರು.
ಭದ್ರಾವತಿ ಹಳೇ ಭಂಡಾರಹಳ್ಳಿ ಗ್ರಾಮದ ಶ್ರೀ ಮೂಲ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಬಾರಿ ವೈಕುಂಠ ಏಕಾದಶಿ ಅದ್ದೂರಿಯಾಗಿ ಜರುಗಿತು. ಕಾಗದನಗರದ ಸಂತೋಷ್ ಶಾಮಿಯಾನ ವತಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಲಂಕಾರ ಭಕ್ತಾಧಿಗಳ ಗಮನ ಸೆಳೆಯಿತು.
ಮೂಲ ರಂಗನಾಥಸ್ವಾಮಿ ದೇವಾಲಯ:
ಹಳೇ ಭಂಡಾರಹಳ್ಳಿ ಗ್ರಾಮದ ಶ್ರೀ ಮೂಲ ರಂಗನಾಥ ಸ್ವಾಮಿ ದೇವಾಲಯದಲ್ಲಿ ಈ ಬಾರಿ ವೈಕುಂಠ ಏಕಾದಶಿ ಅದ್ದೂರಿಯಾಗಿ ಜರುಗಿತು. ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಅಲಂಕಾರ ಕೈಗೊಳ್ಳಲಾಗಿತ್ತು. ಅಲ್ಲದೆ ಕಾಗದನಗರದ ಸಂತೋಷ್ ಶಾಮಿಯಾನ ವತಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಅಲಂಕಾರ ಭಕ್ತಾಧಿಗಳ ಗಮನ ಸೆಳೆಯಿತು. ದೇವಸ್ಥಾನದ ಕಿಟ್ಟಣ್ಣ ಸ್ವಾಮೀಜಿ(ಕೃಷ್ಣಮೂರ್ತಿ)ಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ತೀರ್ಥಪ್ರಸಾದ, ಅನ್ನಸಂತರ್ಪಣೆ ನೆರವೇರಿತು.
ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿರುವ ತಿರುಮಲ ಸ್ವಾಮಿ ವಿಗ್ರಹಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಈ ಬಾರಿ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು.
ದೊಣಬಘಟ್ಟ ತಿರುಮಲ ಸ್ವಾಮಿ ವಿಗ್ರಹಕ್ಕೆ ವಿಶೇಷ ಅಲಂಕಾರ :
ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿರುವ ತಿರುಮಲ ಸ್ವಾಮಿ ವಿಗ್ರಹಕ್ಕೆ ವೈಕುಂಠ ಏಕಾದಶಿ ಪ್ರಯುಕ್ತ ಈ ಬಾರಿ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು. ಇದು ಅತಿ ಪ್ರಾಚೀನ ವಿಗ್ರಹವಾಗಿದ್ದು, ಆದರೆ ದೇವಸ್ಥಾನ ನಿರ್ಮಾಣಗೊಂಡಿಲ್ಲ. ಇದೀಗ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೇವಸ್ಥಾನ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಆರ್ಚಕರಾದ ನಾಗರಾಜ್, ಆರ್. ರವಿ, ಐತಾಳ್, ಇಮ್ರಾನ್, ಜಯರಾಮ್, ನಿರಂಜನ್, ಅಹಮದ್ ಆಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ವೈಕುಂಠ ಏಕಾದಶಿ ಆಚರಿಸಲಾಯಿತು.
ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ :
ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ವೈಕುಂಠ ಏಕಾದಶಿ ಆಚರಿಸಲಾಯಿತು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ, ಶ್ರೀ ಸ್ವಾಮಿಯ ವೈಕುಂಠ ದರ್ಶನ ಭಕ್ತರ ಗಮನ ಸೆಳೆಯಿತು. ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿತು. ವಂದೇ ಮಾತರಂ ಟ್ರಸ್ಟ್, ದೇವಸ್ಥಾನ ಸೇವಾ ಸಮಿತಿ ಹಾಗು ಅಯ್ಯಪ್ಪ ಭಕ್ತ ವೃಂದ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಬಾರಂದೂರು ಹಾಗು ಸುತ್ತಮುತ್ತಲ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.
ಕೃಷಿ ಸನ್ಮಾನ್ ಯೋಜನೆ ರೈತರ ಶ್ರಮಕ್ಕೆ ಸಲ್ಲುವ ಗೌರವ : ಸಂಸದ ಬಿ.ವೈ ರಾಘವೇಂದ್ರ
ಮಾಜಿ ಪ್ರಧಾನಿ, ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮ
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಡಿ. ೨೫: ಕೃಷಿ ಸನ್ಮಾನ್ ಯೋಜನೆ ರೈತರಿಗೆ ಲಂಚ ಕೊಡುವ ಯೋಜನೆಯಲ್ಲ ಬದಲಾಗಿ ರೈತರ ಶ್ರಮ ಗೌರವಿಸುವುದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ರೈತರ ಶ್ರಮವಿಲ್ಲದೆ ನಾವುಗಳು ಬದಕಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ನಾವುಗಳು ರೈತರನ್ನು ಪ್ರತಿ ಕ್ಷಣ ನೆನಪು ಮಾಡಿಕೊಳ್ಳಬೇಕಾಗಿದೆ. ರೈತರು ಪ್ರಕೃತಿ ವಿಕೋಪ, ಬೆಲೆ ಕುಸಿತ ಸೇರಿದಂತೆ ಒಂದಲ್ಲ ಒಂದು ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ನಡುವೆಯೂ ಕೃಷಿ ನಂಬಿ ಬದುಕುತ್ತಿರುವ ರೈತರ ಬದುಕು ಅಭಿನಂದನಾರ್ಹವಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ಅಭಿನಂದಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಸಹ ಎಲ್ಲರೂ ಜೀವನ ಪರ್ಯಂತ ನೆನಪು ಮಾಡಿಕೊಳ್ಳುವಂತಹ ಯೋಜನೆಗಳಾಗಿವೆ ಎಂಬುದನ್ನು ಯಾರು ಸಹ ಮರೆಯಬಾರದು. ೨೦೧೮ರಲ್ಲಿ ಕೃಷಿ ಸನ್ಮಾನ್ ಯೋಜನೆ ಜಾರಿಗೆ ತಂದ ಆರಂಭದಲ್ಲಿ ಜಿಲ್ಲೆಯಲ್ಲಿ ೧೩,೫೦೦ ಮಂದಿ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದರು. ಪ್ರಸ್ತುತ ಈ ಯೋಜನೆಯಡಿ ಜಿಲ್ಲೆಯಲ್ಲಿ ೧,೫೦,೫೦೭ ಮಂದಿ ರೈತರು ಫಲಾನುಭವಿಗಳಾಗಿದ್ದು, ಜಿಲ್ಲೆಗೆ ೩೦.೫೦ ಕೋ. ರು. ಹಣ ಬಿಡುಗಡೆಯಾಗಿ ತಲಾ ೨,೦೦೦ ರು. ಇಂದು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ. ಇದೆ ರೀತಿ ಭದ್ರಾವತಿ ತಾಲೂಕಿನಲ್ಲಿ ೨೨,೮೬೩ ರೈತರು ಫಲಾನುಭವಿಗಳಾಗಿದ್ದು, ಒಟ್ಟು ೪.೭೦ ಕೋ. ರು. ಬಿಡುಗಡೆಯಾಗಿ ರೈತರ ಖಾತೆಗೆ ಹಣ ಜಮಾ ಆಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಬಿಜೆಪಿ ಪಕ್ಷ ಸಾಮಾನ್ಯರ ಪಕ್ಷವಾಗಿದೆ. ಇದು ಹಣ, ಜಾತಿ ಆಧಾರದ ಮೇಲೆ ಸಂಘಟಿತಗೊಂಡಿಲ್ಲ ಬದಲಾಗಿ ಪಕ್ಷದ ಹಿರಿಯರ ವೈಚಾರಿಕ ಚಿಂತನೆಗಳು, ಆದರ್ಶ ಗುಣಗಳು, ಭವಿಷ್ಯದ ಆಲೋಚನೆಗಳು ಹಾಗು ಕಾರ್ಯಕರ್ತರ ಶ್ರಮದಿಂದ ಬೆಳೆದು ಬಂದಿದೆ. ಈ ಹಿನ್ನಲೆಯಲ್ಲಿ ಮುಂದಿನ ಎಲ್ಲಾ ಅವಧಿಗೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆಂಬ ವಿಶ್ವಾಸವಿದೆ ಎಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪಕ್ಷದ ತತ್ವ, ಸಿದ್ದಾಂತಗಳು ಮುಖ್ಯ. ಯಾವುದೇ ಅಧಿಕಾರದ ಆಸೆಗಾಗಿ ದುಡಿಯದೆ ಪಕ್ಷ ಸಂಘಟನೆಗಾಗಿ ದುಡಿಯಬೇಕು. ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪಕ್ಷದ ಸಿದ್ದಾಂತ ಹಾಗು ಕಾರ್ಯಕರ್ತರ ಶ್ರಮದಿಂದಾಗಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಇಂದು ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದ ಚಿತ್ರಣ ಸಹ ಬದಲಾಗಲಿದೆ. ಕಾರ್ಯಕರ್ತರು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುನ್ನಡೆಯಬೇಕೆಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರಮುಖರಾದ ಎಂ.ಬಿ ಭಾನುಪ್ರಕಾಶ್, ಆರ್.ಕೆ ಸಿದ್ದರಾಮಯ್ಯ, ಗಿರೀಶ್‌ಪಟೇಲ್, ಡಿ.ಎಸ್ ಅರುಣ್, ಸುವರ್ಣಶಂಕರ್, ಪವಿತ್ರ ರಾಮಯ್ಯ, ಚನ್ನಬಸಪ್ಪ, ಜ್ಞಾನೇಶ್ವರ್, ಎಸ್.ಎಸ್ ಜ್ಯೋತಿಪ್ರಕಾಶ್, ಗುರುಮೂರ್ತಿ, ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಅಧ್ಯಕ್ಷ ಎಂ. ಪ್ರಭಾಕರ್ ಸ್ವಾಗತಿಸಿದರು.
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಕಾರ್ಯಕ್ರಮ ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರ ಗಣ್ಯರು ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೈತ ಸಂವಾದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದರು.
Thursday, December 24, 2020
ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ಪ್ರಕರಣದಲ್ಲಿ ಬಲಿಪಶು ಮಾಡುವ ಹುನ್ನಾರ
ಎಸ್‌ಡಿಪಿಐ ಕಾರ್ಯಕರ್ತರಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ
ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭದ್ರಾವತಿ, ಡಿ. ೨೪: ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆದಿರುವ ಪ್ರಕರಣದಲ್ಲಿ ವಿನಾಕಾರಣ ಎಸ್‌ಡಿಪಿಐ ಕಾರ್ಯಕರ್ತರು ಹಾಗು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ತಾಲೂಕು ಕಛೇರಿ ಮುಂಭಾಗ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರವಾದಿ ಮಹಮದ್ ಪೈಗಂಬರ್‌ರವರ ನಿಂದನೆಯಿಂದಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಹಾಗು ಕೆ.ಜೆ ಹಳ್ಳಿಯಲ್ಲಿ ಹಿಂಸಾಚಾರ ನಡೆದಿದ್ದು, ಈ ಪ್ರಕರಣ ರಾಜಕೀಯ ದುರುದ್ದೇಶದ ಒಂದು ಭಾಗವಾಗಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ರಾಜ್ಯ ಪೊಲೀಸ್ ಹಾಗು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆದಿದ್ದು, ಎಸ್‌ಡಿಪಿಐ ಕಾರ್ಯಕರ್ತರು ತನಿಖೆಯಲ್ಲಿ ನಿರಂತವಾಗಿ ಪಾಲ್ಗೊಂಡು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಅಲ್ಲದೆ ತನಿಖೆ ಸಂದರ್ಭದಲ್ಲಿ ಎಸ್‌ಡಿಪಿಐ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿರುವುದಿಲ್ಲ. ಇದೀಗ ಕೇಂದ್ರ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಎಸ್‌ಡಿಪಿಐ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಬಲಿಪಶುಗಳನ್ನಾಗಿ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಾಸ್ತವವಾಗಿ ಎಸ್‌ಡಿಪಿಐ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಂ, ದಲಿತ ಹಾಗು ಇನ್ನಿತರ ಶೋಷಿತ ಸಮುದಾಯಗಳ ರಾಜಕೀಯ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಈ ನಡುವೆ ಕೇಂದ್ರ ಬಿಜೆಪಿ ನಾಯಕರು ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಂಡು ಈ ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಇತ್ತೀಚೆಗೆ ಎಸ್‌ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಮಹಮದ್ ಶರೀಫ್ ಹಾಗು ಸ್ಥಳೀಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದನ್ನು ಎಸ್‌ಡಿಪಿಐ ಖಂಡಿಸುತ್ತದೆ. ರಾಷ್ಟ್ರೀಯ ತನಿಖಾ ಸಂಸ್ಥೆ ನಿಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಈಗಾಗಲೇ ಪ್ರಕರಣದಲ್ಲಿ ಬಂಧಿಸಲಾಗಿರುವ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಹಿರ್, ಕಾರ್ಯದಶಿ ಗೌಸ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೊರೋನಾ ಸೋಂಕು ಹರಡುವ ಭೀತಿ : ವೈಕುಂಠ ಏಕಾದಶಿ ಸಂಭ್ರಮ ಮೊಟಕು
ಭದ್ರಾವತಿ, ಡಿ. ೨೪: ಹೊಸ ರೂಪಾಂತರಗೊಂಡಿರುವ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಹಿನ್ನಲೆಯಲ್ಲಿ ಈ ಬಾರಿ ನಗರದೆಲ್ಲೆಡೆ ಡಿ.೨೫ರಂದು ನಡೆಯಲಿರುವ ವೈಕುಂಠ ಏಕಾದಶಿ ಸಂಭ್ರಮ ಮೊಟಕುಗೊಳಿಸಲಾಗಿದೆ.
ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಸಾವಿರ ಭಕ್ತಾಧಿಗಳು ಆಕರ್ಷಕವಾದ ವೈಕುಂಠನಾಥನ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ದೇವಸ್ಥಾನದ ಹೊರಭಾಗದಲ್ಲಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು. ವಿಶೇಷವಾಗಿ ಸಾವಿರಾರು ಭಕ್ತಾಧಿಗಳಿಗೆ ದೇವಸ್ಥಾನ ಪ್ರಸಾದ ಸಮಿತಿಯಿಂದ ಲಾಡು ವಿತರಣೆ ಮಾಡಲಾಗುತ್ತಿತ್ತು. ಅದ್ದೂರಿಯಾಗಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮಗಳಿಗೆ ಕಡಿವಾಣ ಹಾಕಲಾಗಿದೆ.
ಕೊರೋನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಲವು ನಿರ್ಬಂಧಗಳೊಂದಿಗೆ ವೈಕುಂಠ ಏಕಾದಶಿ ಆಚರಣೆಗೆ ಅವಕಾಶ ಕಲ್ಪಿಸಿದೆ. ಆದರೆ ಹೆಚ್ಚಿನ ಭಕ್ತಾಧಿಗಳು ಸೇರುವಂತಿಲ್ಲ. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಿಸುವಂತಿಲ್ಲ. ದೇವಸ್ಥಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರವಹಿಸುವುದು. ದೇವಸ್ಥಾನದ ಆವರಣದಲ್ಲಿಯೇ ಉತ್ಸವ ನಡೆಸುವುದು ಸೇರಿದಂತೆ ಇತ್ಯಾದಿ ನಿರ್ಬಂಧಗಳನ್ನು ವಿಧಿಸಲಾಗಿದೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ವೈಕುಂಠ ಏಕಾದಶಿ ನಡೆಸಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಎಲ್ಲರೂ ಎಚ್ಚರವಹಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಭಕ್ತಾಧಿಗಳು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ನಗರದ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಕಾಗದನಗರದಲ್ಲಿರುವ ೭ನೇ ವಾರ್ಡಿನಲ್ಲಿರುವ ಅರಳಿಕಟ್ಟೆ ದೇವಸ್ಥಾನ ಹಾಗು ಬಾರಂದೂರಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನ ಹಾಗು ದೊಡ್ಡಗೊಪ್ಪೇನ ಹಳ್ಳಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪ್ರತಿ ವರ್ಷ ವೈಕುಂಠ ಏಕಾದರ್ಶಿ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ.
ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರೈತ ದಿನಾಚರಣೆ
ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಡಿ. ೨೪: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಸರಳವಾಗಿ ನಡೆಯಿತು.
ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಿಪುರದ ಪ್ರಗತಿಪರ ರೈತ ರಾಮಲಿಂಗಯ್ಯರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವಿದ್ಯಾಸಂಸ್ಥೆಯ ಬಿ.ಇಡಿ ವಿಭಾಗದ ಪ್ರಾಂಶುಪಾಲರು, ಪ್ರಭಾರಿ ಆಡಳಿತಾಧಿಕಾರಿಗಳು, ಸಹಾಯಕ ಆಡಳಿತಾಧಿಕಾರಿಗಳು, ಹಾಗೂ ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು, ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೇಣುಕಪ್ಪ ನಿರೂಪಣೆ, ಆಶಾ ಪ್ರಾರ್ಥನೆ, ರವಿ ಸ್ವಾಗತ ಮತ್ತು ರೇವತಿ ವಂದನಾರ್ಪಣೆ ನೆರವೇರಿಸಿಕೊಟ್ಟರು.
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಕಡೆ ಪ್ರತಿಯೊಬ್ಬರು ಗಮನ ಹರಿಸಿ : ಕೆಎಲ್‌ಎಸ್ ರಾವ್
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಒಂದು ತಿಂಗಳವರೆಗೆ ನಡೆದ ಮಾಸಾಚರಣೆ
ಪರಿಸರ ಮಾಸಾಚರಣೆ ಅಂಗವಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿದರು.
ಭದ್ರಾವತಿ, ಡಿ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನ.೧೯ ರಿಂದ ಒಂದು ತಿಂಗಳವರೆಗೆ ಪರಿಸರ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ಮಾಸಾಚರಣೆ ಅಂಗವಾಗಿ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿ, ಪರಿಸರದ ಬಗ್ಗೆ ಕಾಳಜಿ ಮೂಡಿಸಲಾಯಿತು. ಪ್ರತಿಯೊಂದು ವಿಭಾಗದಲ್ಲಿಯೂ ೩ ಮೊದಲ ಮಂದಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಖಾನೆಯ ಆಡಳಿತ ಕಛೇರಿಯಲ್ಲಿರುವ ಮಹಾತ್ಮಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆಎಲ್‌ಎಸ್ ರಾವ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಪ್ರತಿದಿನದ ಚಟುವಟಿಕೆಗಳಲ್ಲಿ, ವಾಸಿಸುವ ಹಾಗು ಕೆಲಸ ಮಾಡುವ ಸ್ಥಳದ ಸುತ್ತಮುತ್ತ, ಪರಿಸರ ಕಾಳಜಿ ವಹಿಸಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯ. ಅಲ್ಲದೆ ನಾವೆಲ್ಲರೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬಹುದಾಗಿದೆ ಎಂದರು.
ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮಹಾಪ್ರಬಂಧಕ(ಈ.ಎಮ್.ಡಿ) ಡಿ. ಲೋಕೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉನ್ನಿಕೃಷ್ಣನ್ ಪ್ರಾಥಿಸಿದರು. ಆರ್. ಸತೀಶ್ ವಂದಿಸಿದರು.
Wednesday, December 23, 2020
ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ : ಡಾ. ಎಂ.ವಿ ಅಶೋಕ್
ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ಭದ್ರಾವತಿ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
ಭದ್ರಾವತಿ, ಡಿ. ೨೨: ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ವತಿಯಿಂದ ಭಾವಸಾರ ಕ್ಷತ್ರಿಯ ಸಮಾಜ ಹಾಗು ರೆಡ್ ಕ್ರಾಸ್ ಸಂಜೀವಿನ ರಕ್ತ ನಿಧಿ ಸಹಯೋಗದೊಂದಿಗೆ ನಗರದ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಭಾವಸಾರ ವಿಜನ್ ಇಂಡಿಯಾ ಏರಿಯಾ-೧೦೭ರ ಕಾರ್ಯದರ್ಶಿ ಎಚ್.ಎನ್ ಯೋಗೇಶ್ ಕುಮಾರ್ ೨೯ನೇ ಬಾರಿ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಏರಿಯಾ-೧೦೭ರ ಅಧ್ಯಕ್ಷ ಡಿ.ಬಿ ವಿನಯ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಟಿ.ಎಸ್. ದುಗ್ಗೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್, ಮುಖಂಡರಾದ ಡಿ.ಟಿ ಶ್ರೀಧರ್, ಡಾ. ಸಾತ್ವಿಕ್, ಧರಣೇಂದ್ರ ದಿನಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಗ್ರಾಮ ಚುನಾವಣೆ ಭದ್ರಾವತಿಯಲ್ಲಿ ಶೇ.೮೨ರಷ್ಟು ಮತದಾನ
ಕೋವಿಡ್ ನಿಯಮ ಪಾಲಿಸದ ಮತದಾರರು, ಮತದಾರರನ್ನು ಸೆಳೆಯಲು ಹಲವು ಅಮಿಷ, ಈ ಸಹ ಹಾಲಿ-ಮಾಜಿ ಶಾಸಕರ ಅಲೆ
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
ಭದ್ರಾವತಿ, ಡಿ. ೨೨: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಮತದಾನ ಕಾರ್ಯ ಬಹುತೇಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ೧೦೭೦ ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸುಮಾರು ಶೇ.೮೨ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆ ಮತದಾನ ಬಿರುಸಿನಿಂದ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.೫೦ರಷ್ಟು ಪ್ರಮಾಣಕ್ಕೆ ತಲುಪಿತ್ತು. ನಂತರ ಮಂದಗತಿಯಲ್ಲಿ ಸಾಗಿ ಪುನಃ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಅರಣ್ಯ ವ್ಯಾಪ್ತಿಯ ಅಂತರಗಂಗೆ, ಗುಡ್ಡದ ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಬಿಸಿಲುಮನೆ, ಬೆಳ್ಳಿಗೆರೆ, ಬದನೆಹಾಳು, ಉದಯಪುರ, ದೊಡ್ಡೇರಿ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದು ಗಮನ ಸೆಳೆದಿದೆ.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
ಎರೇಹಳ್ಳಿ, ಮಾವಿನಕೆರೆ, ಬಾರಂದೂರು, ಕಾರೇಹಳ್ಳಿ, ಹಳ್ಳಿಕೆರೆ, ಹಿರಿಯೂರು, ಅರಳಿಕೊಪ್ಪ, ಕಲ್ಲಹಳ್ಳಿ, ಕಂಬದಾಳು ಹೊಸೂರು, ಸಿಂಗನಮನೆ, ತಾವರಘಟ್ಟ, ಬಿಳಕಿ, ದೊಣಬಘಟ್ಟ, ಗುಡಮಘಟ್ಟ, ತಡಸ, ಕಾಗೆಕೋಡಮಗ್ಗೆ, ಕಲ್ಲಹಳ್ಳಿ, ಕೂಡ್ಲಿಗೆರೆ, ಮಂಗೋಟೆ, ಮಾರಶೆಟ್ಟಿಹಳ್ಳಿ, ಮೈದೊಳಲು, ನಿಂಬೆಗೊಂದಿ, ಸೈದರಕಲ್ಲಹಳ್ಳಿ, ಯಡೇಹಳ್ಳಿ, ಸನ್ಯಾಸಿಕೋಡಮಗ್ಗೆ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮತದಾನ ಯಶಸ್ವಿಯಾಗಿ ನಡೆದಿದೆ.
ಕೋವಿಡ್ ನಿಯಮ ಪಾಲಿಸದ ಮತದಾರರು:
ಈ ಶತಮಾನದ ಮಹಾಮಾರಿ ಕೋವಿಡ್-೧೯ ಸೋಂಕು ಕಳೆದ ಸುಮಾರು ೧೦ ತಿಂಗಳಿನಿಂದ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುವ ಮೂಲಕ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಏರಿಕೆಯಾಗುವ ಜೊತೆಗೆ ಇದೀಗ ಹೊಸ ರೂಪಾಂತದಲ್ಲಿ ಪುನಃ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಕೋವಿಡ್-೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಚುನಾವಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಚುನಾವಣೆಯಲ್ಲಿ ನಿಯಮಗಳು ಕೇವಲ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಮೀಸಲಿರುವಂತೆ ಕಂಡು ಬಂದಿತು. ಅಭ್ಯರ್ಥಿಗಳು ಮತ್ತು ಮತದಾರರು ಮಾತ್ರ ಯಾವುದೇ ನಿಯಮ ಪಾಲನೆ ಮಾಡದೆ, ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡದೆ ಗುಂಪು ಸೇರಿರುವುದು ಕಂಡು ಬಂದಿತು. ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದರು.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆಗಳ ಬಳಿ ಕೋವಿಡ್-೧೯ರ ನಿಯಮ ಪಾಲನೆ ಮಾಡದೆ ಗುಂಪು ಸೇರಿರುವ ಮತದಾರರು.
ಮತದಾರರನ್ನು ಸೆಳೆಯಲು ಹಲವು ಅಮಿಷಗಳು:
ಗ್ರಾಮ ಪಂಚಾಯಿತಿ ಚುನಾವಣೆ ಸಹ ಯಾವುದೇ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ನಡೆದಿದ್ದು, ಈ ಬಾರಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಕಸರತ್ತು ನಡೆಸಿದ್ದು, ಕಳೆದ ೨ ದಿನಗಳಿಂದ ಮತದಾರರಿಗೆ ವಿವಿಧ ರೀತಿಯ ಅಮಿಷದೊಂದಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ವಿತರಣೆ, ಮತದಾನದಂದು ಮದ್ಯ, ಬಾಡೂಟ ವ್ಯವಸ್ಥೆ ಹಾಗು ಹಣದ ಹೊಳೆ ಹರಿಸಿರುವುದು ತಿಳಿದು ಬಂದಿದೆ.
ಕೆಲವೆಡೆ ಅನುಕಂಪದ ಅಲೆ, ಕೆಲವೆಡೆ ಪ್ರತಿಷ್ಠೆಯ ಅಲೆ:
ಮತದಾನ ಮುಕ್ತಾಯದ ನಂತರ ಸಮೀಕ್ಷೆಯಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಸಹ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿರುವುದು ಕಂಡುಬಂದಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೇಲಿನ ಅನುಕಂಪದ ಅಲೆ ಕಂಡು ಬಂದಿದೆ. ಕೆಲವು ಕಡೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆಯ ಅಲೆ ಇರುವುದು ಕಂಡು ಬಂದಿದೆ. ಉಳಿದಂತೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿನ ಸಾಧನೆ ಕಾಯ್ದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚು ಪ್ರಬಲವಾಗಿದ್ದು, ಈ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ೨ ಮತ್ತು ೩ನೇ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾನ ನಡೆಸಿದರು.
Subscribe to:
Posts (Atom)